ಆಂಧ್ರಪ್ರದೇಶ : ನಿಂತಿದ್ದ APSRTC ಬಸ್ ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ, ಆಂಧ್ರಪ್ರದೇಶದ ಶೇಷಾಪುರಂ ಬಳಿ ಕಾರಿನಲ್ಲಿದ್ದ ದಂಪತಿ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಂಗಾರಪಾಳ್ಯಂ ತಾಲೂಕಿನ ಗ್ರಾಮ ದಂಪತಿ ಶ್ರೀಧರ್ ರಾವ್, ಲಕ್ಷ್ಮೀ ಹಾಗು ಪುತ್ರಿ ಅದ್ವಿಕಾ (4) ಮೃತರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.








