ವಾಷಿಂಗ್ಟನ್: ಇರಾನ್ ಜೊತೆಗಿನ ಶಾಂತಿ ಮಾತುಕತೆಗಳು “ಉತ್ತಮವಾಗಿ ನಡೆಯುತ್ತಿವೆ” ಎಂದು ಪ್ರತಿಪಾದಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆ ದೇಶದ ಇಂಧನ ಮೂಲಸೌಕರ್ಯಗಳ ಮೇಲೆ ನಡೆಸಲು ಉದ್ದೇಶಿಸಿದ್ದ ದಾಳಿಯನ್ನು ಏಪ್ರಿಲ್ 6ರವರೆಗೆ (10 ದಿನಗಳ ಕಾಲ) ಮುಂದೂಡುವುದಾಗಿ ಘೋಷಿಸಿದ್ದಾರೆ.
ಇರಾನ್ ಜೊತೆಗಿನ ಸಂಧಾನ ಪ್ರಕ್ರಿಯೆಗಳು ಸಕಾರಾತ್ಮಕ ಹಾದಿಯಲ್ಲಿವೆ ಎಂಬ ಕಾರಣ ನೀಡಿ ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಇರಾನ್ ಪ್ರತಿಕ್ರಿಯೆ: ಅಮೆರಿಕದ ಶಾಂತಿ ಪ್ರಸ್ತಾವನೆಯು ಇರಾನ್‌ಗೆ ತಲುಪಿದೆ ಎಂದು ಅಲ್ಲಿನ ಹಿರಿಯ ಅಧಿಕಾರಿಯೊಬ್ಬರು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಆದರೆ, ಅಮೆರಿಕ ಕಳುಹಿಸಿರುವ ಈ ಪ್ರಸ್ತಾವನೆಯು “ಏಕಪಕ್ಷೀಯ ಮತ್ತು ಅನ್ಯಾಯದಿಂದ ಕೂಡಿದೆ” ಎಂದು ಇರಾನ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.








