ಶಿವಮೊಗ್ಗ: ಐಪಿಎಲ್ ಹಬ್ಬದ ಅಬ್ಬರ ಶುರುವಾಗುತ್ತಿದ್ದಂತೆ ಕ್ರಿಕೆಟ್ ಲೋಕದ ಕ್ರೇಜಿ ಅಭಿಮಾನಿಗಳಾದ ಆರ್ಸಿಬಿ (RCB) ಫ್ಯಾನ್ಸ್ಗೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಭರ್ಜರಿ ‘ಗುಡ್ ನ್ಯೂಸ್’ ನೀಡಿದ್ದಾರೆ. ಮೈದಾನಕ್ಕೆ ಹೋಗಿ ಪಂದ್ಯ ನೋಡಲಾಗದ ಅಭಿಮಾನಿಗಳಿಗಾಗಿ ಸಾಗರದಲ್ಲೇ ಸ್ಟೇಡಿಯಂ ಫೀಲ್ ತರಲು ಶಾಸಕರು ಸಜ್ಜಾಗಿದ್ದಾರೆ.
ಮಾರ್ಚ್ 28ರಿಂದ ಆರಂಭವಾಗಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರತಿ ಪಂದ್ಯವನ್ನು ವೀಕ್ಷಿಸಲು ಸಾಗರದ ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ಬೃಹತ್ ಎಲ್ಇಡಿ (LED) ಪರದೆಯ ವ್ಯವಸ್ಥೆ ಮಾಡಲಾಗುತ್ತಿದೆ.
ಗಾಂಧಿ ಮೈದಾನವೇ ಈಗ ‘ಚಿನ್ನಸ್ವಾಮಿ ಸ್ಟೇಡಿಯಂ’!
ಆರ್ಸಿಬಿ ಪಂದ್ಯವೆಂದರೆ ಸಾಕು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತದೆ. ಈ ಬಾರಿ ಸಾಗರದ ಅಭಿಮಾನಿಗಳು ಮನೆಯ ಟಿವಿ ಪರದೆಗೆ ಅಂಟಿಕೊಳ್ಳುವ ಬದಲು, ನೂರಾರು ಜನರ ಜೊತೆಗೂಡಿ ಸಂಭ್ರಮಿಸಲು ಶಾಸಕರು ವೇದಿಕೆ ಸಜ್ಜುಗೊಳಿಸಿದ್ದಾರೆ. ಮಾರ್ಚ್ 28ರ ಮೊದಲ ಪಂದ್ಯದಿಂದಲೇ ಈ ಬೃಹತ್ ಪರದೆಯ ಸೌಲಭ್ಯ ಲಭ್ಯವಿರಲಿದ್ದು, ಅಭಿಮಾನಿಗಳು ಸಾಮೂಹಿಕವಾಗಿ ಪಂದ್ಯ ವೀಕ್ಷಿಸಿ ‘ಈ ಸಲ ಕಪ್ ನಮ್ದೇ’ ಎಂದು ಜೈಕಾರ ಹಾಕಲು ಅವಕಾಶ ಕಲ್ಪಿಸಲಾಗಿದೆ.
ಅಭಿಮಾನಿಗಳ ಜೊತೆ ಶಾಸಕರು ಆರ್ ಸಿ ಬಿ ಪಂದ್ಯ ವೀಕ್ಷಣೆ!
ಕೇವಲ ವ್ಯವಸ್ಥೆ ಮಾಡುವುದಷ್ಟೇ ಅಲ್ಲದೆ, ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸ್ವತಃ ಆರ್ಸಿಬಿ ಅಭಿಮಾನಿಯಾಗಿ ಕ್ರಿಕೆಟ್ ಪ್ರೇಮಿಗಳ ಜೊತೆಯಲ್ಲೇ ಕುಳಿತು ಪಂದ್ಯ ವೀಕ್ಷಿಸುವ ಸಾಧ್ಯತೆ ಇದೆ. ಇದು ಸಾಗರದ ಯುವ ಸಮೂಹದಲ್ಲಿ ಮತ್ತಷ್ಟು ಹುರುಪು ತುಂಬಿದಂತೆ ಆಗಲಿದ್ದು, ಸಕರ ಈ ಕ್ರೀಡಾ ಪ್ರೇಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಶೇಷತೆಗಳೇನು?
-
ಬೃಹತ್ ಎಲ್ಇಡಿ ಪರದೆ: ಮೈದಾನದ ಯಾವುದೇ ಮೂಲೆಯಿಂದ ನೋಡಿದರೂ ಸ್ಪಷ್ಟವಾಗಿ ಕಾಣುವಂತೆ ಅತ್ಯಾಧುನಿಕ ಸ್ಕ್ರೀನ್ ವ್ಯವಸ್ಥೆ.
-
ಸಾಮೂಹಿಕ ಸಂಭ್ರಮ: ಸಾವಿರಾರು ಅಭಿಮಾನಿಗಳು ಒಟ್ಟಾಗಿ ಕುಳಿತು ಪಂದ್ಯ ವೀಕ್ಷಿಸುವ ಅವಕಾಶ.
-
ಪ್ರತಿ RCB ಪಂದ್ಯಕ್ಕೂ ಲೈವ್: ಆರ್ಸಿಬಿ ಆಡುವ ಎಲ್ಲಾ ಪಂದ್ಯಗಳಿಗೂ ಈ ವ್ಯವಸ್ಥೆ ಮುಂದುವರಿಯಲಿದೆ.
ಒಟ್ಟಾರೆಯಾಗಿ, ಮಾರ್ಚ್ 28ರಿಂದ ಸಾಗರದ ಗಾಂಧಿ ಮೈದಾನವು ಕ್ರಿಕೆಟ್ ಜ್ವರಕ್ಕೆ ಸಾಕ್ಷಿಯಾಗಲಿದ್ದು, ಆರ್ಸಿಬಿ ಅಭಿಮಾನಿಗಳ ಪಾಲಿಗೆ ಈ ಬಾರಿ ಐಪಿಎಲ್ ಹಬ್ಬದ ಸಡಗರವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತಷ್ಟು ಹೆಚ್ಚಿಸಿದಂತೆ ಆಗಿದೆ. ಆ ಮೂಲಕ ಸಾಗರದಲ್ಲೂ ‘ಆರ್ಸಿಬಿ’ ಜೈಕಾರ ಮೊಳಗಿದಂತೆ ಆಗಲಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ಸಾಗರದಲ್ಲಿ ಬಿಹೆಚ್ ರಸ್ತೆ ಅಗಲೀಕರಣದ ಹೆಸರಲ್ಲಿ ಪ್ರಾಣದ ಜೊತೆ ಚೆಲ್ಲಾಟ: ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ಜನಾಕ್ರೋಶ








