ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚಿನ ದಿನಗಳಲ್ಲಿ ಬಾಂಬ್ ಬೆದರಿಕೆಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಂದು ದೆಹಲಿಯ ಬಜೆಟ್ ಮಂಡನೆಗೆ ನಿಗದಿಯಾಗಿದ್ದು, ಇದೇ ದಿನವೇ ದೆಹಲಿಯ ವಿಧಾನಸಭೆ ಹಾಗೂ ವಿಧಾನ ಸಭೆಯ ಮೆಟ್ರೋ ಸ್ಟೇಷನ್ ಳನ್ನು ಸ್ಪೋಟಿಸಲಾಗುವುದು ಎಂಬ ಸಂದೇಶವಿರುವ ಬಾಂಬ್ ಬೆದರಿಕೆ ಬಂದಿದೆ.
ದೆಹಲಿ ವಿಧಾನಸಭೆಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶ ಬಂದಿದೆ. 16 RDX ಐಇಡಿಗಳನ್ನು ಇಡಲಾಗಿದೆ. ಇಂದು ಮಧ್ಯಾಹ್ನ 1.40ಕ್ಕೆ ಸ್ಪೋಟಿಸೋದಾಗಿ ಉಲ್ಲೆಖಿಸಲಾಗಿದೆ. ಸ್ಥಳಕ್ಕೆ ಶ್ವಾನ ಡಾ ಸಿಬ್ಬಂದಿ ಪೊಲೀಸರು ಬಂದು ಪರಿಶೀಲನೆ ನಡೆಸುತ್ತಿದ್ದಾರೆ.








