ನವದೆಹಲಿ : ರಣವೀರ್ ಸಿಂಗ್ ನಟನೆಯ ‘ಧುರಂದರ್ 2′ ಸಿನಿಮಾ ಸೂಪರ್ ಹಿಟ್ ಆಗಿದೆ. ಹಿಂದೆ ಯಾವ ಸಿನಿಮಾಗಳೂ ಮಾಡದಷ್ಟು ಅಬ್ಬರದಲ್ಲಿ ಸಿನಿಮಾ ರಿಲೀಸ್ ಆಗಿದೆ. ಹಲವು ದಾಖಲೆಗಳನ್ನು ಸಿನಿಮಾ ಉಡೀಸ್ ಮಾಡಿದೆ. ನಾಲ್ಕು ದಿನಕ್ಕೆ 761 ಕೋಟಿ ರೂಪಾಯಿ ಸಂಗ್ರಹಿಸಿದೆ.
ಹೌದು ಧುರಂದರ-2 ಸಿನಿಮಾ ಭರ್ಜರಿ 761 ಕೋಟಿ ರೂಪಾಯಿ ದಾಖಲೆಯ ಕಲೆಕ್ಷನ್ ಮಾಡಿದೆ ನಾಲ್ಕು ದಿನದಲ್ಲಿ 761 ಸಂಗ್ರಹಿಸಿದೆ. ಬಾಹುಬಲಿ ಮತ್ತು RRR ಚಿತ್ರಗಳ ದಾಖಲೆಗಳನ್ನು ದುರಂದರ-2ಸಿನಿಮಾ ಮುರಿದಿದೆ. ಧುರಂಧರ್ 2’ ಚಿತ್ರ ಮಾರ್ಚ್ 19ರಂದು ರಿಲೀಸ್ ಆಯಿತು. ಈ ಸಿನಿಮಾ ಎದುರು ‘ಟಾಕ್ಸಿಕ್’ ತೆರೆಗೆ ಬರಬೇಕಿತ್ತು.
ಆದರೆ, ಚಿತ್ರತಂಡ ತನ್ನ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿತು. ಇದು ‘ಧುರಂಧರ್ 2’ ಮತ್ತಷ್ಟು ಅಬ್ಬರಿಸಲು ಸಹಕಾರಿ ಆಗಿದೆ. ಈ ಚಿತ್ರದ ಪ್ರೀಮಿಯರ್ ಶೋಗೆ 11 ಸಾವಿರ ಶೋ ಸಿಕ್ಕಿತ್ತು. ಆ ಬಳಿಕ ಪ್ರತಿ ದಿನ ಸರಾಸರಿ 20 ಸಾವಿರ ಶೋಗಳು ಸಿಗುತ್ತಿವೆ. ಪ್ರೀಮಿಯರ್ ಶೋ ದಿನವನ್ನು ಲೆಕ್ಕಕ್ಕೆ ಹಿಡಿದರೆ ಚಿತ್ರ 92 ಸಾವಿರ ಶೋಗಳನ್ನು ಪ್ರಸಾರ ಮಾಡಿದೆ.
ಧುರಂಧರ್’ ಚಿತ್ರ 1300 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈಗ ‘ಧುರಂಧರ್ 2’ ಚಿತ್ರವು ವಾರದ ಗಳಿಕೆಯೇ ಸಾವಿರ ಕೋಟಿ ರೂಪಾಯಿ ತಲುಪುವು ನಿರೀಕ್ಷೆ ಇದೆ. ವಿಶ್ವ ಮಟ್ಟದಲ್ಲಿ ಸಿನಿಮಾದ ಕಲೆಕ್ಷನ್ 2000 ಕೋಟಿ ರೂಪಾಯಿ ತಲುಪುವ ನಿರೀಕ್ಷೆ ಇದೆ. ವಿಶ್ವ ಮಟ್ಟದಲ್ಲಿ ಸಿನಿಮಾ ಅಬ್ಬರಿಸುತ್ತಿದೆ. ಅನೇಕ ರಾಷ್ಟ್ರಗಳಲ್ಲಿ ಸಿನಿಮಾ ಬ್ಯಾನ್ ಆದ ಹೊರತಾಗಿಯೂ ಸಿನಿಮಾದ ಗಳಿಕೆ ಮೇಲೆ ಯಾವುದೇ ಪ್ರಭಾವ ಬೀರಿಲ್ಲ.








