ಪೋಸ್ಟ್ ಆಫೀಸ್ ಉಳಿತಾಯ ಖಾತೆ ಹೊಂದಿರುವವರಿಗೆ ಮತ್ತು ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಆದಾಯ ತೆರಿಗೆ ಇಲಾಖೆ ಮಹತ್ವದ ಬದಲಾವಣೆಗಳನ್ನು ತಂದಿದೆ. ಇನ್ನು ಮುಂದೆ ಹಣ ವಿತ್‌ಡ್ರಾ ಮಾಡಲು ಅಥವಾ ಜಮಾ ಮಾಡಲು ಪ್ಯಾನ್ ಕಾರ್ಡ್ (PAN Card) ಅತ್ಯಗತ್ಯ.
ಪೋಸ್ಟ್ ಆಫೀಸ್ ವಹಿವಾಟಿಗೆ ಬದಲಾದ ನಿಯಮಗಳು
ಹೊಸ ಅಧಿಸೂಚನೆಯ ಪ್ರಕಾರ, ಪೋಸ್ಟ್ ಆಫೀಸ್ ಖಾತೆಯಿಂದ ಹಣವನ್ನು ತೆಗೆಯಲು ಅಥವಾ ಜಮಾ ಮಾಡಲು ಪ್ಯಾನ್ ಕಾರ್ಡ್ ಅನ್ನು ಕಡ್ಡಾಯಗೊಳಿಸಲಾಗಿದೆ. ಆದಾಯ ತೆರಿಗೆ ಕಾಯ್ದೆ 2026 ರ ಅಡಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಯಾವುದೇ ರೀತಿಯ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ.
ಯಾವೆಲ್ಲಾ ಬದಲಾವಣೆಗಳಾಗಿವೆ?
ಹೊಸ ಖಾತೆ: ಪೋಸ್ಟ್ ಆಫೀಸ್‌ನಲ್ಲಿ ಹೊಸ ಉಳಿತಾಯ ಖಾತೆ ತೆರೆಯಲು ಪ್ಯಾನ್ ಅನಿವಾರ್ಯ.
ಹೂಡಿಕೆ: ಸ್ಥಿರ ಠೇವಣಿ (FD) ಅಥವಾ ಯಾವುದೇ ಇತರ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ಯಾನ್ ಕಾರ್ಡ್ ಬೇಕೇ ಬೇಕು.
ಟ್ರಾನ್ಸಾಕ್ಷನ್: ಹಣದ ಪ್ರತಿಯೊಂದು ವರ್ಗಾವಣೆಗೂ ಪ್ಯಾನ್ ಲಿಂಕ್ ಇರುವುದು ಅಗತ್ಯ.
ಗಮನಿಸಿ: ಆದಾಯ ತೆರಿಗೆ ಕಾಯ್ದೆ 2026 ರ ನಿಯಮ 159, 160, 161, 211 ಮತ್ತು 237 ರ ಅಡಿಯಲ್ಲಿ ಈ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ.
ಬದಲಾವಣೆಯ ಹಿಂದಿನ ಉದ್ದೇಶವೇನು?
ಈ ಹೊಸ ನಿಯಮದ ಹಿಂದೆ ಮುಖ್ಯವಾಗಿ ಎರಡು ಕಾರಣಗಳಿವೆ:
ಪಾರದರ್ಶಕತೆ: ಪೋಸ್ಟ್ ಆಫೀಸ್ ಮೂಲಕ ನಡೆಯುವ ದೊಡ್ಡ ಮೊತ್ತದ ಹಣಕಾಸು ವಹಿವಾಟುಗಳ ಮೇಲೆ ನಿಗಾ ಇಡುವುದು.
ತೆರಿಗೆ ವಂಚನೆ ತಡೆ: ಉಳಿತಾಯ ಜಾಲದ ಮೂಲಕ ನಡೆಯುವ ವ್ಯವಹಾರಗಳನ್ನು ಟ್ರ್ಯಾಕ್ ಮಾಡುವ ಮೂಲಕ ಆದಾಯ ತೆರಿಗೆ ವಂಚನೆಯನ್ನು ತಡೆಯುವುದು ಮತ್ತು ದೇಶದ ಆರ್ಥಿಕತೆಗೆ ಬಲ ನೀಡುವುದು.
ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಏನು ಮಾಡಬೇಕು?
ಒಂದು ವೇಳೆ ನೀವು ಪ್ಯಾನ್ ಕಾರ್ಡ್ ಹೊಂದಿಲ್ಲದಿದ್ದರೆ, ಈ ಕೆಳಗಿನ ಪರ್ಯಾಯ ಕ್ರಮಗಳನ್ನು ಪಾಲಿಸಬೇಕಾಗುತ್ತದೆ:
ಫಾರ್ಮ್ 97: ಈ ಮೊದಲು ಪ್ಯಾನ್ ಕಾರ್ಡ್ ಇಲ್ಲದವರು ಫಾರ್ಮ್ 60 ಅನ್ನು ಬಳಸುತ್ತಿದ್ದರು. ಆದರೆ ಈಗ ಹಣ ಜಮಾ ಮಾಡಲು ಫಾರ್ಮ್ 97 ಅನ್ನು ಭರ್ತಿ ಮಾಡಬೇಕಾಗುತ್ತದೆ.
ದಾಖಲೆಗಳು: ಈ ಫಾರ್ಮ್ ಜೊತೆಗೆ ಠೇವಣಿದಾರರ ಹೆಸರು, ವಿಳಾಸ, ವಹಿವಾಟಿನ ಪ್ರಕಾರ ಮತ್ತು ವಹಿವಾಟನ್ನು ದೃಢೀಕರಿಸುವ ದಾಖಲೆಗಳನ್ನು ಸಲ್ಲಿಸಬೇಕು. ಇದು ತೆರಿಗೆ ಲೆಕ್ಕಾಚಾರಕ್ಕೆ ಸಹಕಾರಿಯಾಗಲಿದೆ.
ಟಿಡಿಎಸ್ (TDS) ಉಳಿಸಲು ಹೊಸ ಫಾರ್ಮ್
ಪೋಸ್ಟ್ ಆಫೀಸ್ ಬಡ್ಡಿದರದ ಮೇಲೆ ಟಿಡಿಎಸ್ ಕಡಿತವನ್ನು ತಪ್ಪಿಸಲು ಈ ಹಿಂದೆ ಬಳಸುತ್ತಿದ್ದ ಫಾರ್ಮ್‌ಗಳನ್ನು ಬದಲಾಯಿಸಲಾಗಿದೆ:
ಹಳೆಯ ಫಾರ್ಮ್ ಹೊಸ ಫಾರ್ಮ್ ವಿವರ
Form 15G Form 121 60 ವರ್ಷದೊಳಗಿನವರಿಗೆ
Form 15H Form 121 ಹಿರಿಯ ನಾಗರಿಕರಿಗೆ








