Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ಸರ್ಕಾರದಿಂದ ಜಮೀನು ಪಡೆದವರಿಗೆ ಗುಡ್ ನ್ಯೂಸ್ : `ಪೋಡಿ’ ಅಭಿಯಾನಕ್ಕೆ ಸರ್ಕಾರ ಆದೇಶ

19/03/2026 6:08 AM

WEATHER UPDATE : ರಾಜ್ಯಾದ್ಯಂತ ಮಾ.25 ರವರೆಗೆ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

19/03/2026 6:03 AM

ಆರೋಗ್ಯ ಗುಣಗಳ ಗಣಿ ‘ತೆಂಗಿನ ಹೂವು’: ಇದರ ಪ್ರಯೋಜನಗಳನ್ನು ತಿಳಿದರೆ ಖಂಡಿತ ಬಿಡುವುದಿಲ್ಲ!

19/03/2026 6:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » WEATHER UPDATE : ರಾಜ್ಯಾದ್ಯಂತ ಮಾ.25 ರವರೆಗೆ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ
KARNATAKA

WEATHER UPDATE : ರಾಜ್ಯಾದ್ಯಂತ ಮಾ.25 ರವರೆಗೆ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

By kannadanewsnow5719/03/2026 6:03 AM

ಬೆಂಗಳೂರು: ರಾಜ್ಯದಾದ್ಯಂತ ಅಕಾಲಿಕ ಬೇಸಿಗೆ ಮಳೆ ಅಬ್ಬರಿಸುತ್ತಿದ್ದು, ಬುಧವಾರ ಬೆಂಗಳೂರು ಸೇರಿದಂತೆ ಸುಮಾರು 15 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಆಲಿಕಲ್ಲು ಮಳೆಯಾಗಿದೆ. ರಾಯಚೂರಿನಲ್ಲಿ ಸಿಡಿಲು ಬಡಿದು ಒಬ್ಬ ಯುವಕ ಬಲಿಯಾಗಿದ್ದರೆ, ರಾಜ್ಯದ ಹಲವೆಡೆ ಬೆಳೆ ಹಾಗೂ ಆಸ್ತಿಪಾಸ್ತಿಗೆ ಅಪಾರ ಹಾನಿಯಾಗಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಮಳೆ ಸುರಿಯುತ್ತಿದ್ದ ವೇಳೆ ಸಿಡಿಲು ಬಡಿದು ಮಂಜುನಾಥ ಕರಿಯಪ್ಪ (21) ಎಂಬ ಕುರಿಗಾಹಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಲದಲ್ಲಿ ಕುರಿ ಮೇಯಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಅಪಾರ ಬೆಳೆ ಹಾನಿ

ಆಲಿಕಲ್ಲು ಮಳೆಯಿಂದಾಗಿ ರೈತರು ಕಣ್ಣೀರು ಹಾಕುವಂತಾಗಿದೆ. ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಸನಿಹದ ಕಡಬಗೆರೆಯಲ್ಲಿ ಬೃಹತ್ ಗಾತ್ರದ ಆಲಿಕಲ್ಲುಗಳು ಬಿದ್ದಿವೆ. ಕಾಫಿ, ಬಾಳೆ ಮತ್ತು ಅಡಿಕೆ ತೋಟಗಳು ನಾಶವಾಗಿವೆ. ಖಾಂಡ್ಯದಲ್ಲಿ ಒಂದೇ ದಿನ 2.50 ಇಂಚು ಮಳೆ ದಾಖಲಾಗಿದೆ. ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ಗಾಳಿ ಮಳೆಗೆ 39 ಕುರಿಗಳು ಮೃತಪಟ್ಟಿವೆ. ಗುಂಡ್ಲುಪೇಟೆ, ಚಾಮರಾಜನಗರ ಭಾಗಗಳಲ್ಲಿ ಕಲ್ಲಂಗಡಿ, ಟೊಮ್ಯಾಟೊ ಹಾಗೂ ಬಾಳೆ ಬೆಳೆಗಳಿಗೆ ತೀವ್ರ ಹಾನಿಯಾಗಿದೆ.

ಬೇಸಿಗೆಯ ಈ ಸಮಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಆಲಿಕಲ್ಲು ಮಳೆ ಬೀಳುತ್ತಿರುವುದು ಹವಾಮಾನ ವೈಪರೀತ್ಯದ ಸ್ಪಷ್ಟ ಮುನ್ಸೂಚನೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಈ ಬದಲಾವಣೆ ಕಂಡುಬಂದಿದೆ.

ಮಾ. 25ರವರೆಗೆ ಮಳೆ ಸಾಧ್ಯತೆ
ರಾಜ್ಯದಲ್ಲಿ ಮಳೆಯ ಅಬ್ಬರ ಇನ್ನೂ ಮುಗಿದಿಲ್ಲ. ಹವಾಮಾನ ಇಲಾಖೆಯ ವರದಿಯಂತೆ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಾರ್ಚ್ 25ರವರೆಗೆ ಗುಡುಗು, ಸಿಡಿಲು ಸಹಿತ ಮಳೆ ಮುಂದುವರಿಯುವ ಸಾಧ್ಯತೆಯಿದೆ.

WEATHER UPDATE : Heavy rain across the state till March 25 : Meteorological Department forecast
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಸರ್ಕಾರದಿಂದ ಜಮೀನು ಪಡೆದವರಿಗೆ ಗುಡ್ ನ್ಯೂಸ್ : `ಪೋಡಿ’ ಅಭಿಯಾನಕ್ಕೆ ಸರ್ಕಾರ ಆದೇಶ

19/03/2026 6:08 AM1 Min Read

ಆರೋಗ್ಯ ಗುಣಗಳ ಗಣಿ ‘ತೆಂಗಿನ ಹೂವು’: ಇದರ ಪ್ರಯೋಜನಗಳನ್ನು ತಿಳಿದರೆ ಖಂಡಿತ ಬಿಡುವುದಿಲ್ಲ!

19/03/2026 6:00 AM2 Mins Read

BIG NEWS : ರಾಜ್ಯದಲ್ಲಿ ಮರ್ಯಾದೆ ಗೇಡು ಹತ್ಯೆಗೆ 5 ವರ್ಷ ಜೈಲು ಶಿಕ್ಷೆ ಫಿಕ್ಸ್ : `ಇವ ನಮ್ಮವ ಇವ ನಮ್ಮವ’ ಮಸೂದೆ ಮಂಡನೆ !

19/03/2026 5:55 AM1 Min Read
Recent News

ರಾಜ್ಯದಲ್ಲಿ ಸರ್ಕಾರದಿಂದ ಜಮೀನು ಪಡೆದವರಿಗೆ ಗುಡ್ ನ್ಯೂಸ್ : `ಪೋಡಿ’ ಅಭಿಯಾನಕ್ಕೆ ಸರ್ಕಾರ ಆದೇಶ

19/03/2026 6:08 AM

WEATHER UPDATE : ರಾಜ್ಯಾದ್ಯಂತ ಮಾ.25 ರವರೆಗೆ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

19/03/2026 6:03 AM

ಆರೋಗ್ಯ ಗುಣಗಳ ಗಣಿ ‘ತೆಂಗಿನ ಹೂವು’: ಇದರ ಪ್ರಯೋಜನಗಳನ್ನು ತಿಳಿದರೆ ಖಂಡಿತ ಬಿಡುವುದಿಲ್ಲ!

19/03/2026 6:00 AM

BIG NEWS : ರಾಜ್ಯದಲ್ಲಿ ಮರ್ಯಾದೆ ಗೇಡು ಹತ್ಯೆಗೆ 5 ವರ್ಷ ಜೈಲು ಶಿಕ್ಷೆ ಫಿಕ್ಸ್ : `ಇವ ನಮ್ಮವ ಇವ ನಮ್ಮವ’ ಮಸೂದೆ ಮಂಡನೆ !

19/03/2026 5:55 AM
State News
KARNATAKA

ರಾಜ್ಯದಲ್ಲಿ ಸರ್ಕಾರದಿಂದ ಜಮೀನು ಪಡೆದವರಿಗೆ ಗುಡ್ ನ್ಯೂಸ್ : `ಪೋಡಿ’ ಅಭಿಯಾನಕ್ಕೆ ಸರ್ಕಾರ ಆದೇಶ

By kannadanewsnow5719/03/2026 6:08 AM KARNATAKA 1 Min Read

ಬೆಂಗಳೂರು: ಸರ್ಕಾರ ಮಂಜೂರು ಮಾಡಿರುವ ಜಮೀನುಗಳಿಗೆ ಸರ್ಕಾರವೇ ಪೋಡಿ (ಜಮೀನಿನ ಸರ್ವೆ ಮತ್ತು ದಾಖಲೆ ಪ್ರಕ್ರಿಯೆ) ಮಾಡಿಕೊಡುವ ಅಭಿಯಾನವನ್ನು ಕೈಗೆತ್ತಿಕೊಂಡಿದೆ…

WEATHER UPDATE : ರಾಜ್ಯಾದ್ಯಂತ ಮಾ.25 ರವರೆಗೆ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

19/03/2026 6:03 AM

ಆರೋಗ್ಯ ಗುಣಗಳ ಗಣಿ ‘ತೆಂಗಿನ ಹೂವು’: ಇದರ ಪ್ರಯೋಜನಗಳನ್ನು ತಿಳಿದರೆ ಖಂಡಿತ ಬಿಡುವುದಿಲ್ಲ!

19/03/2026 6:00 AM

BIG NEWS : ರಾಜ್ಯದಲ್ಲಿ ಮರ್ಯಾದೆ ಗೇಡು ಹತ್ಯೆಗೆ 5 ವರ್ಷ ಜೈಲು ಶಿಕ್ಷೆ ಫಿಕ್ಸ್ : `ಇವ ನಮ್ಮವ ಇವ ನಮ್ಮವ’ ಮಸೂದೆ ಮಂಡನೆ !

19/03/2026 5:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.