Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Sex Health Tips: ಪುರುಷರ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು 9 ಪ್ರಮುಖ ಸಲಹೆಗಳು

BREAKING: ನಾಳೆ ನಿಗದಿಯಾಗಿದ್ದ ‘ರಾಜ್ಯ ಸಾರಿಗೆ ನೌಕರ’ರ ಅನಿರ್ದಿಷ್ಟಾವಧಿ ಮುಷ್ಕರ ವಾಪಸ್

ಯಾವುದೇ ಕೊರತೆಯಿಲ್ಲದೆ ದಾಖಲೆಯ 257.37 ಗಿಗಾವ್ಯಾಟ್ ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಯಶಸ್ವಿಯಾಗಿ ಪೂರೈಸಿದ ಭಾರತ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಅಂಬೇಡ್ಕರ್’ಗೆ ಅವಮಾನ ಮಾಡಿದ ಬಾನು ಮುಷ್ತಾಕ್ ಕೂಡಲೇ ಬಂಧಿಸಿ: ಛಲವಾದಿ ನಾರಾಯಣಸ್ವಾಮಿ ಒತ್ತಾಯ
KARNATAKA

‘ಅಂಬೇಡ್ಕರ್’ಗೆ ಅವಮಾನ ಮಾಡಿದ ಬಾನು ಮುಷ್ತಾಕ್ ಕೂಡಲೇ ಬಂಧಿಸಿ: ಛಲವಾದಿ ನಾರಾಯಣಸ್ವಾಮಿ ಒತ್ತಾಯ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಬಾನು ಮುಷ್ತಾಕ್ ಅವರ ವಿರುದ್ಧ ಸರಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.

ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಮಂಡ್ಯ ಜಿಲ್ಲೆಯಲ್ಲಿ ಬಾನು ಮುಷ್ತಾಕ್ ಅವರು ಚಪ್ಪಲಿ ಧರಿಸಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಫೋಟೊಗೆ ಪುಷ್ಪಾರ್ಚನೆ ಮಾಡಿದ್ದನ್ನು ನಾನು ಖಂಡತುಂಡವಾಗಿ ಖಂಡಿಸುತ್ತೇನೆ ಎಂದರು.

ಸರಕಾರ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನನ್ನ ಪ್ರಕಾರ ಬಾನು ಮುಷ್ತಾಕ್ ಅವರು ಅಲ್ಲಾಹರನ್ನು ಚಪ್ಪಲಿಗೆ ಹೋಲಿಸಿದ್ದಾರೆ. ಬಾಬಾ ಸಾಹೇಬ ಅಂಬೇಡ್ಕರರಿಗೂ ಅಪಮಾನ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.

ಬಾನು ಮುಷ್ತಾಕ್ ಅವರು ಯಾರು ಅಂಬೇಡ್ಕರ್ ಅವರನ್ನು ದೇವರೆಂದು ನಂಬಿದ್ದಾರೋ ಅವರಿಗೆ ಅಪಮಾನ ಮಾಡಿದ್ದಾರೆ. ಹಿಂದೂಗಳಿಗೆ ಮತ್ತು ಮುಸಲ್ಮಾನರಿಗೆ ಅಪಮಾನ ಮಾಡಿದ ಅವರ ದುರಹಂಕಾರಕ್ಕೆ ನನ್ನ ಧಿಕ್ಕಾರವಿದೆ ಎಂದು ತಿಳಿಸಿದರು. ನಾವು ಅವರನ್ನು ದಸರಾ ಉದ್ಘಾಟನೆಗೆ ಕರೆದಾಗ ಹಲವರು ವಿರೋಧ ಮಾಡಿದ್ದರು. ಅವರು ಕನ್ನಡದ ವಿರೋಧಿ ಎಂದು ವಿರೋಧಿಸಿದ್ದರು. ಅಂಥ ಸಮಯದಲ್ಲಿ ರಾಜ್ಯದಲ್ಲಿರುವ ಅನೇಕ ದಲಿತ ಸಂಘಟನೆಗಳು, ದಲಿತ ಹೋರಾಟಗಾರರು ಅವರಿಗೆ ಸಹಕಾರಕ್ಕೆ ನಿಂತಿದ್ದರು. ಈಗ ಆ ದಲಿತ ಸಂಘಟನೆಗಳ ಮುಖಂಡರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ದೇವರೆಂದು ನಂಬಿರುವ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಈ ರೀತಿ ಅಪಮಾನ ಮಾಡಿದ್ದರಿಂದ ಇನ್ನು ಮುಂದೆ ಇಡೀ ರಾಜ್ಯದಲ್ಲಿ ದಲಿತ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು, ಬಾನು ಮುಷ್ತಾಕ್ ಅವರಿಗೆ ಅವರ ಮನೆದೇವರಿಂದಲೇ ಅವರ ಪೂಜೆ ಮಾಡಬೇಕು; ಅವರಿಗೆ ಚಪ್ಪಲಿಯಿಂದಲೇ ಪೂಜೆ ಮಾಡಬೇಕು. ಅದವರ ಮನೆದೇವರಾದ ಕಾರಣ ಅದನ್ನು ಅವರು ವಿರೋಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಅವರು ಎಲ್ಲಿಗೇ ಬಂದರೂ ದಲಿತ ಸಂಘಟನೆಗಳು, ಹಿಂದೂಗಳು, ಇಸ್ಲಾಂ ಸಮುದಾಯದವರು ಅವರಿಗೆ ಛೀಮಾರಿ ಹಾಕಬೇಕು ಎಂದು ವಿನಂತಿಸಿದರು.

ಇಸ್ಲಾಮಿನ ಅಥವಾ ಮುಸಲ್ಮಾನರ ದೇವರು ಅಲ್ಲಾಹ ಎಂಬುದು ಈ ಪ್ರಪಂಚಕ್ಕೆ ಗೊತ್ತಿರುವ ವಿಚಾರ. ಆ ಕಾರಣಕ್ಕೆ ಇಸ್ಲಾಂ ಬಂಧುಗಳು ಅಲ್ಲಾಹನನ್ನು ಪ್ರಾರ್ಥಿಸುವವರು, ಅದಕ್ಕೆ ನಾವು ಕೂಡ ಅದನ್ನು ಗೌರವಿಸುತ್ತೇವೆ ಎಂದು ತಿಳಿಸಿದರು. ಆದರೆ, ಬಾನು ಮುಷ್ತಾಕ್ ಅವರು ಚಪ್ಪಲಿ ನನ್ನ ಮನೆದೇವರು; ಆದ್ದರಿಂದ ನಾನು ಚಪ್ಪಲಿ ಧರಿಸಿಯೇ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಪುಷ್ಪಾರ್ಚನೆ ಮಾಡಿದ್ದೇನೆ ಎಂದು ಹೇಳಿ ಅವರ ನಡೆಯನ್ನು ಮತ್ತೊಮ್ಮೆ ಉದ್ಧಟತನದಿಂದ ಸಮರ್ಥಿಸಿಕೊಂಡಿದ್ದಾರೆ. ಆದ್ದರಿಂದ ಅವರು ಕ್ಷಮೆಗೆ ಅರ್ಹರಲ್ಲ ಎಂದರು.

ಚಪ್ಪಲಿ ಹೊಲಿಯುವವರು ಮುಸಲ್ಮಾನ ಸಮುದಾಯದವರಲ್ಲ; ಅದು ಪರಿಶಿಷ್ಟ ಜಾತಿಯವರು ಹೊಲಿಯುವುದು; ನಮ್ಮ ಸಮುದಾಯ ಚಪ್ಪಲಿ ಹೊಲಿಯುತ್ತದೆ. ಆದರೆ, ನೀವು ಆ ಜಾತಿಗೆ ಸೇರಿದವರೇ? ಎಂದು ಕೇಳಿದರು. ಒಂದು ಸಮಯ ನೀವು ಇವತ್ತು ಅಲ್ಲಾಹರನ್ನು ಅವರು ದೇವರು ಎಂದು ಪೂಜಿಸುವವರಿಗೆ ನಮ್ಮ ಮನೆದೇವರು ಚಪ್ಪಲಿ ಎಂದ ಮೇಲೆ ನೀವು ಯಾರನ್ನು ಯಾರಿಗೆ ಹೋಲಿಸಿದ್ದೀರಿ? ಎಂದು ಪ್ರಶ್ನಿಸಿದರು. ಒಂದು ವೇಳೆ ಹಾಗೇನಾದರೂ ಇದ್ದರೆ ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರು ಧರಿಸಿದ ಚಪ್ಪಲಿ ಅಥವಾ ಶೂ ನಿಮ್ಮ ಮನೆದೇವರಾಗಿರಬಹುದೇ ಬಾನು ಮುಷ್ತಾಕ್ ಅವರೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಇನ್ನು ಮುಂದೆ ಡಾ. ಅಂಬೇಡ್ಕರ್ ಅವರು ಧರಿಸಿದ ಶೂ ಅಥವಾ ಚಪ್ಪಲಿಯನ್ನು ನಿಮ್ಮ ಮನೆದೇವರಾಗಿ ಸ್ವೀಕಾರ ಮಾಡುತ್ತೀರಾ ಎಂದು ಕೇಳಿದರು. ಇದನ್ನು ಇಸ್ಲಾಂ ಧರ್ಮ ಒಪ್ಪುತ್ತದೆಯೇ? ಇದನ್ನು ಕೇಳಿದ ಮೇಲೂ ಇಸ್ಲಾಂ ಧರ್ಮದ ಧರ್ಮಗುರುಗಳು, ಮುಲ್ಲಾಗಳು ಯಾಕೆ ತಟಸ್ಥರಾಗಿ ಕುಳಿತಿದ್ದಾರೆ? ನೀವು ಅವರನ್ನು ಯಾಕೆ ಪ್ರಶ್ನೆ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಬಾನು ಮುಷ್ತಾಕ್ ಅವರು ಇನ್ನು ಮುಂದೆ ಸಭೆ, ಸಮಾರಂಭಗಳಿಗೆ ಬಂದರೆ ಅವರ ಮನೆದೇವರಿಂದ ಅವರಿಗೆ ಹೊಡೆಯುವುದಾಗಿ ಜನರು ಮಾತನಾಡಲು ಪ್ರಾರಂಭಿಸಿದ್ದಾರೆ. ಅವರ ಮನೆ ದೇವರು ಯಾವುದೆಂದು ಗೊತ್ತಾಯಿತಲ್ಲವೇ? ಒಂದು ವೇಳೆ ಅವರನ್ನು ಹೊಡೆದರೆ ಇದು ಮನೆದೇವರಿಂದ ಹೊಡೆದದ್ದು ಎಂದು ತಪ್ಪಾಗಿ ಗ್ರಹಿಸುವುದಿಲ್ಲ ಎಂದು ಬಾನು ಮುಷ್ತಾಕ್ ಅವರು ಅದನ್ನು ಸಹಿಸಿಕೊಳ್ಳುವರೇ ಎಂದು ಕೇಳಿದರು.

Health Tips: ಇವು ‘ದ್ರಾಕ್ಷಿ ಸೇವನೆ’ಯ ಅದ್ಭುತ ಆರೋಗ್ಯಕರ ಪ್ರಯೋಜನಗಳು

ಬಿಸಿಯೂಟಕ್ಕೂ ತಟ್ಟಿದ ಗ್ಯಾಸ್ ಅಭಾವದ ಬಿಸಿ: ಶಾಲೆಯಲ್ಲಿ ಸೌದೆ ಒಲೆ ಅಡುಗೆ!

Share. Facebook Twitter LinkedIn WhatsApp Email

Related Posts

BREAKING: ನಾಳೆ ನಿಗದಿಯಾಗಿದ್ದ ‘ರಾಜ್ಯ ಸಾರಿಗೆ ನೌಕರ’ರ ಅನಿರ್ದಿಷ್ಟಾವಧಿ ಮುಷ್ಕರ ವಾಪಸ್

2 Mins Read

ತುಮಕೂರಿನ ಕಾಂಗ್ರೆಸ್ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ?: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ

2 Mins Read

ಜೂನ್.1ರಿಂದ ಶಾಲೆ ಆರಂಭ, ಮೊದಲ ದಿನವೇ ಉಚಿತ ಪಠ್ಯಪುಸ್ತಕ ವಿತರಣೆ: ಸಾಗರ ಬಿಇಓ ಸದಾನಂದ ಸ್ವಾಮಿ

1 Min Read
Recent News

Sex Health Tips: ಪುರುಷರ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು 9 ಪ್ರಮುಖ ಸಲಹೆಗಳು

BREAKING: ನಾಳೆ ನಿಗದಿಯಾಗಿದ್ದ ‘ರಾಜ್ಯ ಸಾರಿಗೆ ನೌಕರ’ರ ಅನಿರ್ದಿಷ್ಟಾವಧಿ ಮುಷ್ಕರ ವಾಪಸ್

ಯಾವುದೇ ಕೊರತೆಯಿಲ್ಲದೆ ದಾಖಲೆಯ 257.37 ಗಿಗಾವ್ಯಾಟ್ ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಯಶಸ್ವಿಯಾಗಿ ಪೂರೈಸಿದ ಭಾರತ

ಸಾರ್ವಜನಿಕ ಆಡಳಿತ ಮಂಡಳಿಗಳು ಯಾವುದೇ ಒಂದು ಪಕ್ಷದ ಪರ ವಹಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ!

State News
KARNATAKA

BREAKING: ನಾಳೆ ನಿಗದಿಯಾಗಿದ್ದ ‘ರಾಜ್ಯ ಸಾರಿಗೆ ನೌಕರ’ರ ಅನಿರ್ದಿಷ್ಟಾವಧಿ ಮುಷ್ಕರ ವಾಪಸ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯ ಸಾರಿಗೆ ನಿಗಮಗಳ ನೌಕರರ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ದಿನಾಂಕ 20.05.2026 ರಿಂದ ಹಮ್ಮಿಕೊಳ್ಳಲಾಗಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು…

ತುಮಕೂರಿನ ಕಾಂಗ್ರೆಸ್ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ?: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ

ಜೂನ್.1ರಿಂದ ಶಾಲೆ ಆರಂಭ, ಮೊದಲ ದಿನವೇ ಉಚಿತ ಪಠ್ಯಪುಸ್ತಕ ವಿತರಣೆ: ಸಾಗರ ಬಿಇಓ ಸದಾನಂದ ಸ್ವಾಮಿ

ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಕೆಲಸವಾಗಲಿ: ಸಾಗರದಲ್ಲಿ ಮಾ.ಸ. ನಂಜುಂಡಸ್ವಾಮಿ ಕರೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.