ನವದೆಹಲಿ : ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ತಮ್ಮ 4 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದು, ಅವರು ತಮ್ಮ ಪತಿಗೆ ವಿಚ್ಛೇದನ ನೀಡಿದ್ದಾರೆ. 15ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಹನ್ಸಿಕಾ, ತಮ್ಮ ಗ್ಲಾಮರ್’ನಿಂದ ಸ್ಟಾರ್ ಹೀರೋಯಿನ್ ಆಗಿದ್ದರು. ತೆಲುಗು ಮತ್ತು ತಮಿಳು ಉದ್ಯಮಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಎನ್ಟಿಆರ್ ಮತ್ತು ಅಲ್ಲು ಅರ್ಜುನ್ ಅವರಂತಹ ಸ್ಟಾರ್ ಹೀರೋಗಳೊಂದಿಗೆ ಜೋಡಿಯಾಗಿದ್ದಾರೆ. ತಮಿಳು ಉದ್ಯಮದಲ್ಲಿ ಸರಣಿ ಆಫರ್’ಗಳೊಂದಿಗೆ ಬ್ಯುಸಿಯಾಗಿರುವಾಗ ಅವರು ವಿವಾಹವಾದರು.
ನಟಿ ತನ್ನ ಬಾಲ್ಯದ ಗೆಳೆಯ ಸೊಹೈಲ್ ಜೊತೆ ಪ್ರೀತಿಯಲ್ಲಿ ಬಿದ್ದು, ನಂತರ 2022ರಲ್ಲಿ ಮದುವೆಯಾದರು. ಸೊಹೈಲ್ ಈಗಾಗಲೇ ರಿಂಕಿ ಬಜನ್ ಎಂಬ ಯುವತಿಯನ್ನ ಮದುವೆಯಾಗಿದ್ದರು. ಹನ್ಸಿಕಾ ಕೂಡ ಆ ಮದುವೆಗೆ ಹೋಗಿದ್ದರು. ಸ್ವಲ್ಪ ಸಮಯದ ನಂತರ ಅವರಿಬ್ಬರು ಬೇರ್ಪಟ್ಟರು ಮತ್ತು ಹನ್ಸಿಕಾ ಸೊಹೈಲ್’ಗೆ ಹತ್ತಿರವಾದ್ರು. ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ತಾನು ಸೊಹೈಲ್ ಜೊತೆ ಮದುವೆಯಾಗುತ್ತಿರುವುದಾಗಿ ನಟಿಮಣಿ ಘೋಷಿಸಿ, ಮದುವೆಯಾದ್ರು. ಆದ್ರೆ, ಕಳೆದ ವರ್ಷದಿಂದ, ಸೊಹೈಲ್ ಮತ್ತು ಹನ್ಸಿಕಾ ಬೇರೆ ಬೇರೆಯಾಗಿ ವಾಸಿಸುತ್ತಿದ್ದು, ಸಧ್ಯ ವಿಚ್ಛೇದನ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
BIG NEWS : ಚೀನಾಗೆ ಮ್ಯೂಲ್ ಅಕೌಂಟ್ ಮಾಹಿತಿ ರವಾನೆ : ಮಂಗಳೂರಲ್ಲಿ ಇಬ್ಬರು ಸೈಬರ್ ವಂಚಕರು ಅರೆಸ್ಟ್!
ICC T20I Rankings : ಟಾಪ್ 2ನಲ್ಲಿ ‘ಇಶಾನ್ ಕಿಶನ್’, ‘ರಶೀದ್ ಖಾನ್’ಗೆ ಮತ್ತೆ ಅಗ್ರ ಬೌಲರ್ ಸ್ಥಾನ!








