ಬೆಂಗಳೂರು : ಇರಾನ್ ಇಸ್ರೇಲ್ ಹಾಗೂ ಅಮೆರಿಕ ನಡುವೆ ಯುದ್ಧ ಹಿನ್ನೆಲೆಯಲ್ಲಿ ಇದೀಗ ದೇಶದಲ್ಲಿ ಸಿಲಿಂಡರ್ ಕೊರತೆ ಕಾಣುತ್ತಿದ್ದು ರಾಜ್ಯದಲ್ಲೂ ಇದರ ಪರಿಣಾಮ ಬೀರಿದೆ ಈ ವಿಚಾರವಾಗಿ ಆಹಾರ ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಮಾತನಾಡಿದ್ದು ಯಾವ ಡಿಸ್ಟ್ರಿಬ್ಯೂಟರ್ ಕೂಡ ಒಂದು ತಿಂಗಳಲ್ಲಿ ಒಂದು ಸಿಲಿಂಡರ್ ಕೊಡೋದಕ್ಕೆ ಇಲ್ಲ ಅಂತ ಹೇಳುವ ಹಾಗಿಲ್ಲ. ಸಿಲಿಂಡರ್ ಕೊರತೆ ನೀಗಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಿಲಿಂಡರ್ ಕೊರತೆ ನೀಗಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಮಧ್ಯಪ್ರದೇಶದಿಂದ ಹೆಚ್ಚಾಗಿ ಅನಿಲ ಆಮದು ಆಗುತ್ತಿತ್ತು. ಯುದ್ಧ ನಿಂತರೆ ಸಮಸ್ಯೆ ಇಲ್ಲ ಆದರೆ ಮುಂದುವರೆದರೆ ಕೊರತೆ ಉಂಟಾಗಲಿದೆ. ಅವಶ್ಯಕತೆ ಇರುವಾಗ ಮಾತ್ರ ಸಿಲಿಂಡರ್ ಬಳಸಬೇಕು ಒಂದು ಸಿಲಿಂಡರ್ ಕೊಡಲು ಕೇಂದ್ರ ಸರ್ಕಾರ ಹೇಳಿದೆ. ಸಿಲಿಂಡರ್ ವಿತರಕರು ಒಂದು ತಿಂಗಳಲ್ಲಿ ಒಂದು ಸಿಲಿಂಡರ್ ಕೊಡಲು ಇಲ್ಲ ಅಂತ ಹೇಳೋ ಹಾಗಿಲ್ಲ. ಬ್ಲಾಕ್ ಮಾರ್ಕೆಟ್ ಮಾಡಕ್ಕಾಗಲ್ಲ ಬ್ಲಾಕ್ ಮೇಲ್ ಮಾಡಿದರೂ ಕೂಡ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.








