ಚಿಕ್ಕಮಗಳೂರು : ಕಾರ್ಯಕರ್ತನಿಂದಲೇ ಕಾಂಗ್ರೆಸ್ ನಾಯಕಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ರಾಜಸ್ಥಾನದ ಅಜ್ಮೀರ್ ನಲ್ಲಿ ಕಾಂಗ್ರೆಸ್ ಮುಖಂಡ ರಾಹಿಲನ್ನು ಅರೆಸ್ಟ್ ಮಾಡಲಾಗಿದೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಳಿ ಈ ಒಂದು ಘಟನೆ ನಡೆದಿತ್ತು. ಚೇತನ ನಿವಾಸದ ಬಳಿ ತೆರಳಿ ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಲಾಗಿತ್ತು.
ಕಾಂಗ್ರೆಸ್ ನಾಯಕಿ ಚೇತನ ಹತ್ಯೆಗೆ ರಾಹುಲ್ ಶರೀಫ್ ಯತ್ನಿಸಿದ್ದ. ಚೇತನಾ ಪತಿ ಮೇಲು ಲಾಂಗ್ ನಿಂದ ರಾಹಿಲ್ ಹಲ್ಲೆ ಮಾಡಿದ್ದ. ಚೇತನ ಮನೆಯಲ್ಲಿ ಬಾಡಿಗೆಗೆ ಇದ್ದ ಆರೋಪಿ ರಾಹಿಲ್ ಶರೀಫ್, ನಿರಂತರವಾಗಿ ಗಲಾಟೆ ಬೆನ್ನಲ್ಲೇ ದಂಪತಿಗಳು ರಾಹುಲ್ ಅನ್ನು ಮನೆ ಖಾಲಿ ಮಾಡಿಸಿದ್ದರು.ಮನೆ ಖಾಲಿ ಮಾಡಿಸಿದ್ದಕ್ಕಾಗಿ ರಾಹಿಲ್ ಮತ್ತು ಆತನ ತಂಡ ದಂಪತಿ ಮೇಲೆ ಹಲ್ಲೆ ಮಾಡಿದ್ದು, ಬಳಿಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಹಿಲ್ ಶರೀಫ್ ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದರು.
ಬಳಿಕ ಎಸ್ ಪಿ ಜಿತೇಂದ್ರ ರಾಹಿಲ್ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದರು. ಇದೀಗ ರಾಹಿಲ್ ನನ್ನು ಬಂಧಿಸಿ ಅಭಯ ಪ್ರಕಾಶ್ ನೇತೃತ್ವದ ತಂಡ ಕರ್ನಾಟಕಕ್ಕೆ ಆತನನ್ನು ಕರೆತರುತ್ತಿದ್ದಾರೆ. ದಂಪತಿ ಮೇಲೆ ಹಲ್ಲೆ ನಡೆಸಿ ಅಜ್ಮೀರ್ ನಲ್ಲಿ ರಾಹುಲ್ ತಲೆಮರಿಸಿಕೊಂಡಿದ್ದ. ಈ ಹಿಂದೆಯೂ ಕಾಂಗ್ರೆಸ್ ಕಾರ್ಯಕರ್ತರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ. ಮಹಿಳೆ ಮನೆಯಲ್ಲಿ ಸಿಕ್ಕಿಬಿದ್ದು ಆಕ್ರೋಶಕ್ಕೆ ಕಾರಣವಾಗಿದ್ದ ನಿರಂತರವಾಗಿ ಗಲಾಟೆ ಕೇಸ್ನಲ್ಲಿ ಭಾಗಿ ಬೆನ್ನಲ್ಲೇ ಇದೀಗ ಪೊಲೀಸರು ಆತನೇ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಕೇಸ್ ದಾಖಲಾಗಿತ್ತು.








