ಬೆಂಗಳೂರು: ಹೋಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಸಂಖ್ಯೆ 07337/07338 ಎಸ್‌ಎಸ್‌ಎಸ್ ಹುಬ್ಬಳ್ಳಿ (UBL) – ಘಾಜಿಪುರ ಸಿಟಿ (GCT) ನಡುವೆ ವಿಶೇಷ ರೈಲು ಸೇವೆ ನಡೆಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ರೈಲು ಸಂಖ್ಯೆ 07337 (ಹುಬ್ಬಳ್ಳಿ – ಘಾಜಿಪುರ ಸಿಟಿ): ಈ ರೈಲು ಮಾರ್ಚ್ 9, 16, 23 ಹಾಗೂ 30ರಂದು ಪ್ರತಿ ಸೋಮವಾರ (ಒಟ್ಟು 4 ಟ್ರಿಪ್‌ಗಳು) ಸಂಜೆ 6.15ಕ್ಕೆ ಹುಬ್ಬಳ್ಳಿಯಿಂದ ಹೊರಟು, ಬುಧವಾರ ಮಧ್ಯಾಹ್ನ 4.15ಕ್ಕೆ ಘಾಜಿಪುರ ಸಿಟಿಗೆ ತಲುಪಲಿದೆ.
ರೈಲು ಸಂಖ್ಯೆ 07338 (ಘಾಜಿಪುರ ಸಿಟಿ – ಹುಬ್ಬಳ್ಳಿ): ಈ ರೈಲು ಮಾರ್ಚ್ 12, 19, 26 ಹಾಗೂ ಹೆಚ್ಚುವರಿಯಾಗಿ ಏಪ್ರಿಲ್ 2ರಂದು (4ಟ್ರಿಪ್)ಪ್ರತಿ ಗುರುವಾರ ಬೆಳಗ್ಗೆ 05.45 ಕ್ಕೆ ಘಾಜಿಪುರ ಸಿಟಿಯಿಂದ ಹೊರಟು, ಶುಕ್ರವಾರ ರಾತ್ರಿ 11.55 ಕ್ಕೆ ಹುಬ್ಬಳ್ಳಿಗೆ ತಲುಪಲಿದೆ.
ಈ ವಿಶೇಷ ರೈಲು ಗದಗ, ಬದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರಸ್ತೆ, ವಿಜಯಪುರ (ಬಿಜಾಪುರ), ಇಂಡಿ ರಸ್ತೆ, ಹೊಟಗಿ, ಸೊಲಾಪುರ, ಕುರ್ದುವಾಡಿ ಜಂಕ್ಷನ್, ದೌಂಡ್ ಜಂಕ್ಷನ್, ಅಹಿಲ್ಯಾನಗರ ಜಂಕ್ಷನ್, ಬೆಳಾಪುರ, ಕೋಪರ್ಗಾಂವ್, ಮನ್ಮಾಡ್ ಜಂಕ್ಷನ್, ಭುಸಾವಲ್ ಜಂಕ್ಷನ್, ಇಟಾರ್ಸಿ ಜಂಕ್ಷನ್, ರಾಣಿ ಕಮಲಾಪತಿ, ಬೀನಾ ಜಂಕ್ಷನ್, ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ, ಓರೈ, ಪೋಖ್ರಾಯನ್, ಕಾನ್ಪುರ ಸೆಂಟ್ರಲ್, ಪ್ರಯಾಗರಾಜ್ (ಪ್ರಯಾಗರಾಜ್ ರಾಮ್‌ಬಾಗ್ ಮೂಲಕ), ವಾರಾಣಸಿ ಜಂಕ್ಷನ್, ವಾರಾಣಸಿ ಸಿಟಿ ಮತ್ತು ಘಾಜಿಪುರ ಸಿಟಿ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
ಒಟ್ಟು 22 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ 2 ಎಸಿ 2-ಟೈರ್, 5 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 3 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಎಸ್‌ಎಲ್‌ಆರ್/ಡಿ ಬೋಗಿಗಳು ಇರಲಿವೆ.
ಯುದ್ಧದ ಎಫೆಕ್ಟ್: ಬೆಂಗಳೂರಲ್ಲಿ ಅಡುಗೆ ಎಣ್ಣೆದರ ಲೀಟರ್‌ಗೆ ರೂ.168 ತಲುಪಿದ ಬೆಲೆ!
ಇರಾನ್-ಇಸ್ರೇಲ್ ಯುದ್ಧದ ಬಿಸಿ: ಹಾವೇರಿಯಲ್ಲಿ ಡ್ರೈ ಫ್ರೂಟ್ಸ್, ಹಣ್ಣುಗಳ ಬೆಲೆ ದಿಢೀರ್ ಏರಿಕೆ!








