ಬೆಂಗಳೂರು: ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬೆದರಿಕೆ ಮತ್ತು ನಿಂದನೆ ಆರೋಪದ ಸಂಬಂಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಾಮಾಜಿಕ ಕಾರ್ಯದರ್ತ ಗಿರೀಶ್ ಕುಮಾರ್ ಎಂಬುವರು ಕೆ ಆರ್ ಪುರಂ ಪೊಲೀಸ್ ಠಾಣೆಗೆ ತೆರಳಿ ಬಿಗ್ ಬಾಸ್ ಮಾಡಿ ಸ್ಪರ್ಧಿ ರಜತ್ ವಿರುದ್ಧ ಪೋನ್ ಕರೆ ಮುಖಾಂತರ ಬೆದರಿಕೆ ಹಾಕಿರೋದಾಗಿ ಆರೋಪಿಸಿ ದೂರು ನೀಡಿದ್ದರು. ಡಾಗ್ ಸತೀಶ್ ಸ್ನೇಹ ಬಿಡಬೇಕೆಂದು ಬೆದರಿಕೆಯನ್ನು ಒಡ್ಡಲಾಗಿದೆ ಎಂಬುದಾಗಿ ದೂರು ನೀಡಿದ್ದರು.
ದೂರುದಾರ ಗಿರೀಶ್ ಕುಮಾರ್ ಗೆ ಕಾರಿನ ಪೋಟೋ ಕಳುಹಿಸಿ ರಜತ್ ಬೆದರಿಕೆ ಹಾಕಿದ್ದರು. ಸರ್ ಇದು ರಜತ್ ಬುಜ್ಜಿ, ಕಾಲ್ ಮಾಡುತ್ತಿದ್ದೇನೆ. ವಾಪಾಸ್ ಕಾಲ್ ಮಾಡ್ತೀರಾ ಇಲ್ಲ, ನಾವೇ ಒಳಗೆ ನುಗ್ಬೇಕಾ ಎಂಬುದಾಗಿ ಮೊಬೈಲ್ ಗೆ ಮೆಸೇಜ್ ಹಾಕಿ ಬೆದರಿಕೆ ಹಾಕಲಾಗಿದೆ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ದೂರು ಆಧರಿಸಿ ಕೆ ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ ವಿರುದ್ಧ ಬಿಎನ್ಎಸ್ ಕಾಯ್ದೆಯ 351(2), 352 ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಅಲ್ಲದೇ ಕಿರಣ್ ಎಂಬುವರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.








