Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾಮೋತ್ತೇಜಕ, ಲೈಂಗಿಕ ಜೀವನವನ್ನು ಉತ್ತಮಗೊಳಿಸುವ 7 ಅದ್ಭುತ ಆಹಾರಗಳಿವು

03/05/2026 9:21 PM

ಸಂತೋಷದಾಯಕ ಲೈಂಗಿಕ ಜೀವನಕ್ಕೆ ‘ಫೋರ್‌ಪ್ಲೇ’ ಏಕೆ ಮುಖ್ಯ? ಇಲ್ಲಿವೆ ಪ್ರಮುಖ ಕಾರಣಗಳು

03/05/2026 9:18 PM

ಕಾರಿನ ಒಳಗಿನ ಕೆಟ್ಟ ವಾಸನೆಯಿಂದ ಮುಕ್ತಿ ಬೇಕೇ? ಈ 5 ಸುಲಭ ಉಪಾಯಗಳನ್ನು ಅನುಸರಿಸಿ!

03/05/2026 9:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಾ.9ರಂದು ಬೆಂಗಳೂರು ಪೂರ್ವ ನಗರ ಪಾಲಿಕೆಯ ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟ: ರಾಜೇಂದ್ರ ಚೋಳನ್
KARNATAKA

ಮಾ.9ರಂದು ಬೆಂಗಳೂರು ಪೂರ್ವ ನಗರ ಪಾಲಿಕೆಯ ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟ: ರಾಜೇಂದ್ರ ಚೋಳನ್

By kannadanewsnow0905/03/2026 8:30 PM

ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಎಂ.ಜಿ. ರಸ್ತೆಯಲ್ಲಿನ ಆಯುಕ್ತರ ಕಛೇರಿ ಸಭಾಂಗಣದಲ್ಲಿ ಸಾರ್ವತ್ರಿಕ ಚುನಾವಣೆ ವಿಷಯವಾಗಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಪರ ಜಿಲ್ಲಾ ಚುನಾವಣಾಧಿಕಾರಿಗಳು (ಕೇಂದ್ರ) ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್‌ ಅವರು ಪರೀಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟಣೆಗೆ ಸಂಬಂಧಿಸಿದಂತೆ ಅಹವಾಲು ಮತ್ತು ಆಕ್ಷೇಪಣೆ ಸಲ್ಲಿಸಲು ಸಂಬಂದಪಟ್ಟ ಕ್ಷೇತ್ರಗಳ ವ್ಯಾಪ್ತಿಗೊಳಪಡುವ ಮತದಾರರ ನೋಂದಣಾಧಿಕಾರಿ ಹಾಗೂ ಕಂದಾಯ ಅಧಿಕಾರಿಗಳ ಕಛೇರಿಗೆ ಮನವಿ ಸಲ್ಲಿಸಲು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆ-2026 ಕ್ಕೆ ಸಂಬಂಧಿಸಿದಂತೆ ದಿನಾಂಕ: 19-01-2026 ರಂದು ಕರಡು ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಚುರ ಪಡಿಸಲಾಗಿರುತ್ತದೆ. ಮುಂದುವರೆದು ಪರೀಷ್ಕೃತ ಕರಡು ಮತದಾರರ ಪಟ್ಟಿಯ ಪರಿಷ್ಕರಣೆ ಹಂತದಲ್ಲಿದ್ದು ಬೆಂಗಳೂರು ಪೂರ್ವ ನಗರ ಪಾಲಿಕೆಗೆ ಸಂಬಂಧಿಸಿದ ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ದಿನಾಂಕ:09-03-2026 ರಂದು ಪ್ರಕಟಿಸಲಾಗುವುದು ಎಂದು ಕೇಂದ್ರ ನಗರ ಪಾಲಿಕೆಯ ಅಪರ ಜಿಲ್ಲಾ ಚುನಾವಣಾಧಿಕಾರಿ ಮತ್ತು ಆಯುಕ್ತರಾದ ರಾಜೇಂದ್ರ ಚೋಳನ್ ಅವರು ತಿಳಿಸಿದರು.

ಪರೀಷ್ಕೃತ ಕರಡು ಮತದಾರರ ಪಟ್ಟಿಯಲ್ಲಿ ಏನಾದರೂ ಲೋಪದೋಷಗಳಿದ್ದರೆ ದಿನಾಂಕ: 10-03-2026 ರಿಂದ 16-03-2026 ರ ಅವಧಿಯಲ್ಲಿ ಅಹವಾಲು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಆಯುಕ್ತರು ಬೆಂಗಳೂರು ಕೇಂದ್ರ ನಗರ ಪಾಲಿಕೆ ರವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪರಿಷ್ಕೃತ ಕರಡು ಮತದಾರರ ಪಟ್ಟಿಯಲ್ಲಿ ಒಂದೇ ಕುಟುಂಬದ ಮತದಾರರು ಬೇರೆ ಮತಗಟ್ಟೆಗಳಿಗೆ / ಬೇರೆ ವಾರ್ಡ ಗಳಿಗೆ ವಿಭಜನೆಯಾಗಿದಲ್ಲಿ, ಮತದಾರರ ವಿವರಗಳು ಅದಲು-ಬದಲು ಆಗಿರುವುದು ಹಾಗೂ ಮತದಾರರು ಭೌಗೋಳಿಕವಾಗಿ ಒಂದೇ ವಾರ್ಡ್ ನಲ್ಲಿ ವಾಸವಾಗಿದ್ದು, ಮತ್ತೊಂದು ವಾರ್ಡ್‌ ನ್ ಮತಗಟ್ಟೆಯಲ್ಲಿ ಸೇರ್ಪಡೆಗೊಂಡಿರುವ ಸಂಬಂಧ ಲೋಪದೋಷಗಳಿದ್ದಲ್ಲಿ ಅಹವಾಲು ಆಕ್ಷೇಪಣೆಗಳನ್ನು ವಿಧಾನಸಭಾ ಕ್ಷೇತ್ರಗಳಾದ 161- ಸಿ.ವಿ.ರಾಮನ್ ನಗರ, 162- ಶಿವಾಜಿನಗರ, 163-ಶಾಂತಿನಗರ, 164- ಗಾಂಧಿನಗರ, 168- ಚಾಮರಾಜಪೇಟೆ ಹಾಗೂ 169- ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳ ಹೊಸ 63 ವಾರ್ಡ್ ಗಳ ಮತದಾರರ ನೊಂದಣಾಧಿಕಾರಿಗಳಿಗೆ ಅಥವಾ ಸಹಾಯಕ ಮತದಾರರ ನೊಂದಣಾಧಿಕಾರಿಗಳಿಗೆ ಸಲ್ಲಿಸಬಹುದಾಗಿರುತ್ತದೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಮತ್ತು ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ರವರು ತಿಳಿಸಿದರು.

ಸಂಪರ್ಕಿಸಬೇಕಾದ ವಿಧಾನಸಭಾ ಕ್ಷೇತರವಾರು ಮತದಾರರ ನೊಂದಣಾಧಿಕಾರಿ ಮತ್ತು ಕಂದಾಯ ಅಧಿಕಾರಿಗಳ ವಿಳಾಸ👇

(1) 161- ಸಿ.ವಿ.ರಾಮನ್ ನಗರ ಕ್ಷೇತ್ರದ ಹೊಸ ವಾರ್ಡ್ 9 ರಿಂದ 21 ರ ವ್ಯಾಪ್ತಿಯ ಮತದಾರರು: ಮತದಾರರ ನೊಂದಣಾಧಿಕಾರಿ ಮತ್ತು ಕಂದಾಯ ಅಧಿಕಾರಿಗಳು, ಪಾಲಿಕೆ ಕಟ್ಟಡ, ಮೊದಲನೇ ಮಹಡಿ, ಎಂ.ಎಂ.ರಸ್ತೆ, ಕಾಕ್ಸ್ ಟೌನ್, ಬೆಂಗಳೂರು-560005, Email: rocvr1@gmail.com

(2) 162- ಶಿವಾಜಿನಗರ ಕ್ಷೇತ್ರದ ಹೊಸ ವಾರ್ಡ್ 01 ರಿಂದ 08 ರ ವ್ಯಾಪ್ತಿಯ ಮತದಾರರು: ಕಂದಾಯ ಅಧಿಕಾರಿ ಹಾಗೂ ಮತದಾರರ ನೋಂದಣಾಧಿಕಾರಿ ರವರ ಕಛೇರಿ, 162- ಶಿವಾಜಿನಗರ ವಿಧಾನಸಭಾ ಕ್ಷೇತ್ರ,
ಕಟ್ಟಡ, ನೆಲ ಮಹಡಿ, ಕ್ವೀನ್ಸ್ ರಸ್ತೆ (ತಿಮ್ಮಯ್ಯ ರಸ್ತೆ) ಬೆಂಗಳೂರು-56052, Email: ro162shivajinagar@gmail.com

(3) 163-ಶಾಂತಿನಗರ ಕ್ಷೇತ್ರದ ಹೊಸ ವಾರ್ಡ್22 ರಿಂದ 31 ರ ವ್ಯಾಪ್ತಿಯ ಮತದಾರರು: ಕಂದಾಯ ಅಧಿಕಾರಿ ಮತ್ತು ಚುನಾವಣಾ ನೋಂದಣಿ ಅಧಿಕಾರಿ ಕಚೇರಿ, 163 – ವಿಧಾನಸಭಾ ಕ್ಷೇತ್ರ,12ನೇ ಮಹಡಿ, ಪಿ.ಯು. ಕಟ್ಟಡ, ಮೇಯೋಹಾಲ್, ಎಂ.ಜಿ. ರಸ್ತೆ, ಬೆಂಗಳೂರು: 560001, Email: ro163shanthinagar@gmail.com

(4) 164- ಗಾಂಧಿನಗರ ಕ್ಷೇತ್ರದ ಹೊಸ ವಾರ್ಡ್ 54 ರಿಂದ 63 ರ ವ್ಯಾಪ್ತಿಯ ಮತದಾರರು: ಕಂದಾಯ ಅಧಿಕಾರಿ ಮತ್ತು ಚುನಾವಣಾ ನೋಂದಣಿ ಅಧಿಕಾರಿ ಕಚೇರಿ, 164 – ಗಾಂಧಿನಗರ ವಿಧಾನಸಭಾ ಕ್ಷೇತ್ರ, ಜಿಬಿಎ ಕಟ್ಟಡ, ಮೊದಲ ಮಹಡಿ, ಡಾ. ಟಿಸಿಎಂ ರಾಯನ್ ರಸ್ತೆ, ಬೆಂಗಳೂರು: 560053, (ಲ್ಯಾಂಡ್ ಮಾರ್ಕ್: ಡುಕಾಟಿ ಬೈಕ್ ಷೋರೂಮ್ ಪಕ್ಕ)

(5) 168- ಚಾಮರಾಜಪೇಟೆ ಕ್ಷೇತ್ರದ ಹೊಸ ವಾರ್ಡ್ 44 ರಿಂದ 53 ರ ವ್ಯಾಪ್ತಿಯ ಮತದಾರರು: ಕಂದಾಯ ಅಧಿಕಾರಿ ಮತ್ತು ಚುನಾವಣಾ ನೋಂದಣಿ ಅಧಿಕಾರಿ ಕಚೇರಿ, 168- ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ, ಜಿಬಿಎ ಕಟ್ಟಡ, ಮೊದಲ ಮಹಡಿ, ಡಾ. ಟಿಸಿಎಂ ರಾಯನ್ ರಸ್ತೆ, ಬೆಂಗಳೂರು: 56005, (ಲ್ಯಾಂಡ್ ಮಾರ್ಕ್: ಸಿಟಿ ರೈಲ್ವೇಸ್ ಗೂಡ್ಸ್ ಪಾರ್ಸೆಲ್ ಆಫೀಸ್ ಎದುರು), Email: ro168chamrajpet@gmail.com

(6) 169- ಚಿಕ್ಕಪೇಟೆ ಕ್ಷೇತ್ರದ ಹೊಸ ವಾರ್ಡ್ 32 ರಿಂದ 43 ರ ವ್ಯಾಪ್ತಿಯ ಮತದಾರರು: ಕಂದಾಯ ಅಧಿಕಾರಿ ಮತ್ತು ಚುನಾವಣಾ ನೋಂದಣಿ ಅಧಿಕಾರಿ ಕಚೇರಿ, 169- ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ, ಜಿಬಿಎ ಕಟ್ಟಡ, ಮೊದಲ ಮಹಡಿ, ಆರ್.ವಿ ರಸ್ತೆ, ಸೌತ್ ಎಂಡ್ ಸರ್ಕಲ್, ಜಯನಗರ 1ನೇ ಬ್ಲಾಕ್, ಬೆಂಗಳೂರು: 560011, (ಲ್ಯಾಂಡ್ ಮಾರ್ಕ್: ಸನ್ಮಾನ್ ಹೊಟೇಲ್ ಎದರು, ಸೌತ್ ಎಂಡ್ ಸರ್ಕಲ್) Email: rochickpet@gmail.com

ಸಭೆಯಲ್ಲಿ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಕಂದಾಯ ಅಪರ ಆಯುಕ್ತರಾದ ರಂಗನಾಥ್, ಜಂಟಿ ಆಯುಕ್ತರಾದ ಹೇಮಂತ್ ಶರಣ್, ಚುನಾವಣೆ ತಹಶೀಲ್ದಾರ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಉಪ ಆಯುಕ್ತರು, ಕಂದಾಯ ಅಧಿಕಾರಿಗಳು ಹಾಜರಿದ್ದರು.

ಬೆಂಗಳೂರಲ್ಲಿ ನಿವೃತ್ತ IISC ಪ್ರೊಫೆಸರ್ ಕುಟುಂಬದ ಮೂವರು ಹತ್ಯೆ ಕೇಸ್: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಭ್ರಷ್ಟ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಹಪಾಹಪಿಗೆ ಸಾರಿಗೆ ಇಲಾಖೆ ‘ICU’ ಸೇರಿದೆ: ಜೆಡಿಎಸ್ ಪಕ್ಷ ವಾಗ್ಧಾಳಿ

Share. Facebook Twitter LinkedIn WhatsApp Email

Related Posts

ಪದ್ಮಶ್ರೀ ಪುರಸ್ಕೃತ ಅಂಕೇಗೌಡ ದಂಪತಿಗಳ ಸಾಧನೆ ಅಪಾರ: ಸಂಸದ ಜಿ.ಕುಮಾರನಾಯಕ್

03/05/2026 8:36 PM2 Mins Read

ಮದ್ದೂರು ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಬ್ಯಾಡರಹಳ್ಳಿ ಅಂಕೇಗೌಡ ಆಯ್ಕೆ

03/05/2026 8:34 PM1 Min Read

BREAKING: KPSC ಭ್ರಷ್ಟಾಚಾರ ತಡೆಗೆ ಮಹತ್ವದ ಕ್ರಮ: ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸದನ ಸಮಿತಿ ರಚನೆ

03/05/2026 7:15 PM1 Min Read
Recent News

ಕಾಮೋತ್ತೇಜಕ, ಲೈಂಗಿಕ ಜೀವನವನ್ನು ಉತ್ತಮಗೊಳಿಸುವ 7 ಅದ್ಭುತ ಆಹಾರಗಳಿವು

03/05/2026 9:21 PM

ಸಂತೋಷದಾಯಕ ಲೈಂಗಿಕ ಜೀವನಕ್ಕೆ ‘ಫೋರ್‌ಪ್ಲೇ’ ಏಕೆ ಮುಖ್ಯ? ಇಲ್ಲಿವೆ ಪ್ರಮುಖ ಕಾರಣಗಳು

03/05/2026 9:18 PM

ಕಾರಿನ ಒಳಗಿನ ಕೆಟ್ಟ ವಾಸನೆಯಿಂದ ಮುಕ್ತಿ ಬೇಕೇ? ಈ 5 ಸುಲಭ ಉಪಾಯಗಳನ್ನು ಅನುಸರಿಸಿ!

03/05/2026 9:09 PM

ಭಾರತದಲ್ಲಿ ಹೆಚ್ಚುತ್ತಿದೆ ‘ಸ್ಲೀಪ್ ಡಿವೋರ್ಸ್’ ಕ್ರೇಜ್: ದಂಪತಿಗಳು ಪ್ರತ್ಯೇಕವಾಗಿ ಮಲಗಲು ಬಯಸುತ್ತಿರುವುದೇಕೆ?

03/05/2026 9:01 PM
State News
KARNATAKA

ಪದ್ಮಶ್ರೀ ಪುರಸ್ಕೃತ ಅಂಕೇಗೌಡ ದಂಪತಿಗಳ ಸಾಧನೆ ಅಪಾರ: ಸಂಸದ ಜಿ.ಕುಮಾರನಾಯಕ್

By kannadanewsnow0903/05/2026 8:36 PM KARNATAKA 2 Mins Read

ಮಂಡ್ಯ : ಜಿಲ್ಲೆಯಲ್ಲಿನ ಪುಸ್ತಕದ ಮನೆಯೊಂದು ಜಿಲ್ಲೆ ಮತ್ತು ರಾಜ್ಯವನ್ನು ದಾಟಿ ರಾಷ್ಟ್ರದ ರಾಜಧಾನಿ ದೆಹಲಿವರೆವಿಗೂ ತಲುಪಿರುವುದು ಶ್ಲಾಘನೀಯ ಕಾರ್ಯವೆಂದು…

ಮದ್ದೂರು ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಬ್ಯಾಡರಹಳ್ಳಿ ಅಂಕೇಗೌಡ ಆಯ್ಕೆ

03/05/2026 8:34 PM

BREAKING: KPSC ಭ್ರಷ್ಟಾಚಾರ ತಡೆಗೆ ಮಹತ್ವದ ಕ್ರಮ: ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸದನ ಸಮಿತಿ ರಚನೆ

03/05/2026 7:15 PM

Watch Video: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಎಳೆನೀರು ತುಂಬಿದ್ದ ಬೊಲೆರೊ ವಾಹನ ಪಲ್ಟಿ: ಭಯಾನಕ ವೀಡಿಯೋ ಇಲ್ಲಿದೆ

03/05/2026 7:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.