ಬೆಂಗಳೂರು: ಹೊರವಲಯದ ಪ್ರಯಾಣಿಕರಿಗೆ ಸುಸಜ್ಜಿತ ಹಾಗೂ ಆರಾಮದಾಯಕ ಪ್ರಯಾಣದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮಹತ್ವದ ಹೆಜ್ಜೆ ಇಟ್ಟಿದೆ. ದಿನಾಂಕ 04 ಮಾರ್ಚ್ 2026 ರಂದು ಕೆಂಪುಗೌಡ ಬಸ್ ನಿಲ್ದಾಣದಿಂದ ರಾಮನಗರಕ್ಕೆ ಹಾಗೂ ಬನಶಂಕರಿಯಿಂದ ಕನಕಪುರಕ್ಕೆ ನೂತನ “ವಜ್ರ ವಿಸ್ತಾರ” ಹವಾನಿಯಂತ್ರಿತ (AC) ಬಸ್ ಸೇವೆಗಳನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು.
ಇಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ನೂತನ ಸಾರಿಗೆ ಸೇವೆಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಹೊರವಲಯದ ಜನರಿಗೆ ಬೆಂಗಳೂರಿನ ಸಂಪರ್ಕವನ್ನು ಸುಲಭಗೊಳಿಸಲು ಮತ್ತು ಹವಾನಿಯಂತ್ರಿತ ಸೇವೆಯನ್ನು ಕೈಗೆಟುಕುವಂತೆ ಮಾಡಲು ‘ವಜ್ರ ವಿಸ್ತಾರ’ ಯೋಜನೆಯನ್ನು ಜಾರಿಗೆ ತರಲಾಗಿದೆ,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ವಿ.ಎಸ್. ಆರಾಧ್ಯ, ಹೆಚ್.ಎ.ಇಕ್ಬಾಲ್ ಹುಸೇನ್, ಮಾನ್ಯ ಶಾಸಕರು, ರಾಮನಗರ ವಿಧಾನಸಭಾ ಕ್ಷೇತ್ರ, ಸಂಸ್ಥೆಯ ಉಪಾಧ್ಯಕ್ಷರಾದ ನಿಕೇತ್ ರಾಜ್ ಎಂ. ಅವರೊಂದಿಗೆ ಕೆ.ಬಿ. ಶಿವಕುಮಾರ್, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು; ಕೆ.ರಾಜು, ಮಾನ್ಯ ಅಧ್ಯಕ್ಷರು, ಜಿಲ್ಲಾ ಗ್ಯಾರಂಟಿ ಯೋಜನ ಅನುದಾನ ಸಮಿತಿ, ಬೆಂಗಳೂರು ದಕ್ಷಿಣ ಜಿಲ್ಲೆ, ಕೆ.ಶೇಷಾದ್ರಿ (ಶಶಿ), ಅಧ್ಯಕ್ಷರು, ನಗರಸಭೆ, ರಾಮನಗರ, ಜಿ.ಎನ್.ನಟರಾಜು ಗಾಣಕಲ್ , ಅಧ್ಯಕ್ಷರು, ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ, ಯಶವಂತ್ ವಿ. ಗುರುಕರ್, ಭಾ.ಆ.ಸೇ., ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಬೆಂಗಳೂರು ದಕ್ಷಿಣ ಜಿಲ್ಲೆ, ಅನ್ಮೋಲ್ ಜೈನ್, ಭಾ.ಆ.ಸೇ., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತಿ, ಬೆಂಗಳೂರು ದಕ್ಷಿಣ ಜಿಲ್ಲೆ, ಶ್ರೀನಿವಾಸಗೌಡ, ಭಾ.ಪೋ.ಸೇ., ಪೊಲೀಸ್ ಅಧೀಕ್ಷಕರು, ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಜ್ರ ವಿಸ್ತಾರ” ವಿಶೇಷತೆ:
“ಹೊರವಲಯವು ಈಗ ಹತ್ತಿರ” ಎಂಬ ಘೋಷವಾಕ್ಯದೊಂದಿಗೆ ಆರಂಭವಾಗಿರುವ ಈ ಸೇವೆಯು, ರಾಮನಗರ ಮತ್ತು ಕನಕಪುರ ಭಾಗದ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಅತ್ಯಾಧುನಿಕ ತಂತ್ರಜ್ಞಾನದ ಎಸಿ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸಲಿದ್ದು, ಖಾಸಗಿ ವಾಹನಗಳ ಅವಲಂಬನೆಯನ್ನು ತಗ್ಗಿಸುವ ನಿರೀಕ್ಷೆಯಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರು ನಗರ ಹಾಗೂ ಹೊರವಲಯದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸಾರಿಗೆ ಸೌಲಭ್ಯವನ್ನು ಕಲ್ಪಿಸುತ್ತಿದೆ. ಈ ಗುಣಮಟ್ಟವನ್ನು ಮತ್ತಷ್ಟು ಉತ್ಕೃಷ್ಟಗೊಳಿಸುವ ಸಲುವಾಗಿ ನಿರಂತರ ಶ್ರಮಿಸುತ್ತಿದೆ.
- ಈ ನಿಟ್ಟಿನಲ್ಲಿ ಪ್ರಸ್ತುತ 50 ಘಟಕಗಳಿಂದ ವಿವಿಧ ಮಾದರಿಯ ಬಸ್ಸುಗಳಲ್ಲಿ ಪ್ರತಿದಿನ 6300 ಅನುಸೂಚಿಗಳಿಂದ 66,315 ಸುತ್ತುವಳಿಗಳನ್ನು, 13.06 ಲಕ್ಷ ಕಿ.ಮೀ ಗಳಲ್ಲಿ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದ್ದು, ಸರಾಸರಿ 45 ಲಕ್ಷ ಪ್ರಯಾಣಿಕರು ಸಂಸ್ಥೆಯ ಸಾರಿಗೆ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಸದರಿ ಅನುಸೂಚಿಗಳಲ್ಲಿ 1727 ಎಲೆಕ್ಟ್ರಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
- ಬೆಮಸಾಸಂಸ್ಥೆಯಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 145 ಅನುಸೂಚಿಗಳಿಂದ 1332 ಸುತ್ತುವಳಿಗಳನ್ನು ಹಾಗೂ ಬಿಡದಿ ವ್ಯಾಪ್ತಿಯಲ್ಲಿ ಒಟ್ಟು 136 ಅನುಸೂಚಿಗಳಿಂದ 1163 ಸುತ್ತುವಳಿಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
- ಈಗಾಗಲೇ ಹೊರವಲಯದಲ್ಲಿರುವ ಪ್ರಮುಖ ಪ್ರದೇಶಗಳಾದ ಹಾರೋಹಳ್ಳಿ ಹಾಗೂ ಹಾರೋಹಳ್ಳಿಯಿಂದ ಮುಂದಕ್ಕೆ 58 ಅನುಸೂಚಿಗಳಿಂದ 510 ಸುತ್ತುವಳಿಗಳನ್ನು, ಮಾಗಡಿ ವಲಯದಲ್ಲಿ 39 ಅನುಸೂಚಿಗಳಿಂದ 240 ಸುತ್ತುವಳಿಗಳನ್ನು ಹಾಗೂ ಸೋಲೂರು/ದಾಬಸಪೇಟೆ ವಲಯದಲ್ಲಿ 35 ಅನುಸೂಚಿಗಳಿಂದ 220 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುತ್ತಿದೆ.
- ಪ್ರಮುಖ ದೇವಾಲಯಗಳಿಗೆ ಟೂರ್ ಪ್ಯಾಕೇಜ್ ಗಳನ್ನು ಹೆಚ್ಚಿಸಿದ್ದು, 11 ದಿವ್ಯ ದರ್ಶನ ಮಾರ್ಗಗಳನ್ನು ಆಚರಣೆ ಮಾಡಲಾಗುತ್ತಿದೆ. ಪ್ರತಿ ವಾರಾಂತ್ಯಗಳಲ್ಲಿ 20+20=40 (ಶನಿವಾರ & ಭಾನುವಾರ) ಬಸ್ಸುಗಳನ್ನು ಆಚರಣೆಗೊಳಿಸುತ್ತಿದ್ದು, ಅಂದಾಜು 600+600=1200 ಪ್ರವಾಸಿಗರು ಸದರಿ ಸಾರಿಗೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
- ಬೆಂಗಳೂರು ನಗರದ ಸುತ್ತಮುತ್ತಲಿರುವ ಪ್ರಮುಖ ಪಟ್ಟಣ ಪ್ರದೇಶಗಳಾದ ಅತ್ತಿಬೆಲೆ, ಆನೇಕಲ್, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ದಾಬಸಪೇಟೆ, ಬಿಡದಿ, ಹಾರೋಹಳ್ಳಿ ಹಾಗೂ ಹೊಸಕೋಟೆಗೆ ಒಟ್ಟು 11 ಮಾರ್ಗಗಳಲ್ಲಿ 124 ಅನುಸೂಚಿಗಳನ್ನು ವೇಗದೂತ ತಡೆ ರಹಿತವಾಗಿ ಆಚರಣೆಗೊಳಿಸುತ್ತಿದ್ದು, ಪ್ರತಿದಿನ ಸರಾಸರಿ 60 ಸಾವಿರ ಪ್ರಯಾಣಿಕರು, ಸದರಿ ಸಾರಿಗೆ ಸೌಲಭ್ಯ ಪಡೆಯುತ್ತಿದ್ದು, ಪ್ರತಿದಿನ ಸರಾಸರಿ ರೂ.18.0 ಲಕ್ಷ ಸಾರಿಗೆ ಆದಾಯ ಬರುತ್ತಿದೆ.
- ಕರ್ನಾಟಕ ಘನ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 25.0 ಕಿ.ಮೀ. ವರೆಗೆ ಇದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕಾರ್ಯಾಚರಣೆ ವ್ಯಾಪ್ತಿಯನ್ನು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಿಂದ 40.0 ಕಿ.ಮೀ ವರೆಗೆ ವಿಸ್ತರಿಸಿರುತ್ತದೆ.
- ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಬೆಂಗಳೂರು ನಗರದಿಂದ ರಾಮನಗರ ಹಾಗೂ ಕನಕಪುರಕ್ಕೆ “ವಜ್ರ ವಿಸ್ತಾರ” ಸಾರಿಗೆಗಳನ್ನು ದಿನಾಂಕ: 04-03-2026 ರಿಂದ ಪ್ರಾರಂಭಿಸಲು ಉದ್ದೇಶಿಸಿದ್ದು, ವಿವರ ಕೆಳಕಂಡಂತೆ ಇರುತ್ತದೆ.
|
ಮಾರ್ಗ ಸಂಖ್ಯೆ |
ಎಲ್ಲಿಂದ | ಎಲ್ಲಿಗೆ | ಬಸ್ಸು ಗಳು | ಸುತ್ತುವಳಿ ಗಳು | ಪ್ರಯಾಣ ದರ (Inlu GST & Toll) |
| V-EX-RMN-1 | ಕೆಬಿಎಸ್ | ರಾಮನಗರ | 6 | 36 | ರೂ.95.0 |
| V-EX-KNP-1 | ಬನಶಂಕರಿ | ಕನಕಪುರ | 8 | 48 | ರೂ.90.0 |
ಪಾಸುಗಳ ದರದ ವಿವರಗಳು :
| ಪಾಸಿನ ವಿಧ | ಪಾಸಿನ ದರ
(ಜಿಎಸ್‌ಟಿ ಸೇರಿ) |
| ದೈನಿಕ ಪಾಸು | ರೂ.180/- |
| ಸಾಪ್ತಾಹಿಕ ಪಾಸು | ರೂ.1000/- |
| ಮಾಸಿಕ ಪಾಸು | ರೂ.2700/- |
ಮಾರ್ಗ ಸಂಖ್ಯೆ: V-EX-RMN-1ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಮನಗರಕ್ಕೆ ಬಸ್ ನಿಲುಗಡೆ ಹಾಗೂ ಪ್ರಯಾಣ ದರಗಳ ವಿವರ:
| ಪ್ರಾರಂಭ ಸ್ಥಳ | ನಿಲುಗಡೆಗಳ ವಿವರ | ಪ್ರಯಾಣ ದರ ರೂ.ಗಳಲ್ಲಿ (Inlu GST&Toll) |
|
ಕೆಂಪೇಗೌಡ ಬಸ್ ನಿಲ್ದಾಣ |
MRBS | 25.0 |
| ನಾಯಂಡನಹಳ್ಳಿ | 35.0 | |
| ರಾಜರಾಜೇಶ್ವರಿನಗರ ಗೇಟ್ | 40.0 | |
| ಕೆಂಗೇರಿ | 45.0 | |
| ನೈಸ್ ರಸ್ತೆ ಜಂಕ್ಷನ್ | 50.0 | |
| ರಾಮನಗರ | 95.0 |
ಮಾರ್ಗ ಸಂಖ್ಯೆ: V-EX-KNP-1ಬನಶಂಕರಿಯಿಂದ ಕನಕಪುರಕ್ಕೆ ಬಸ್ ನಿಲುಗಡೆ ಹಾಗೂ ಪ್ರಯಾಣ ದರಗಳ ವಿವರ:
| ಪ್ರಾರಂಭ ಸ್ಥಳ | ನಿಲುಗಡೆಗಳ ವಿವರ | ಪ್ರಯಾಣ ದರ ರೂ.ಗಳಲ್ಲಿ (Inlu GST&Toll) |
| ಬನಶಂಕರಿ | ಕೋಣನಕುಂಟೆ ಕ್ರಾಸ್ | 20.0 |
| ತಲಗಟ್ಟಪುರ | 30.0 | |
| ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣ | 40.0 | |
| ಕಗ್ಗಲಿಪುರ | 50.0 | |
| ಹಾರೋಹಳ್ಳಿ | 70.0 | |
| ದಯಾನಂದ ಸಾಗರ ಕಾಲೇಜು | 80.0 | |
| ಜೈನ ಯುನಿವರ್‌ಸಿಟಿ ಗೇಟ್ | 85.0 | |
| ಕನಕಪುರ | 90.0 |
ಸಂಸ್ಥೆಯಲ್ಲಿ ಕೈಗೊಂಡಿರುವ ಕಾರ್ಮಿಕ ಉಪಕ್ರಮಗಳ ಮಾಹಿತಿ
- ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ 40 ವರ್ಷ ಮೇಲ್ಪಟ್ಟ ನೌಕರರು ಮತ್ತು ಅಧಿಕಾರಿಗಳ ಹೃದಯ ಸಂಬಂಧಿ ತಪಾಸಣೆಗಳನ್ನು ನಡೆಸಲಾಗುತ್ತಿದ್ದು, ಇಲ್ಲಿಯವರೆಗೆ ಒಟ್ಟು 13,668 ನೌಕರರುಗಳಿಗೆ ಉಚಿತವಾಗಿ ಹೃದಯ ತಪಾಸಣೆಗೆ ಒಳಪಡಿಸಲಾಗಿರುತ್ತದೆ.
- ಬೆಂಗಳೂರು ನಗರದ ಜನದಟ್ಟಣೆಯ ಸಾರಿಗೆ ವ್ಯವಸ್ಥೆಯಲ್ಲಿ ಸದಾ ಕರ್ತವ್ಯನಿರತ ಸಿಬ್ಬಂದಿಗಳ ಶ್ವಾಸಕೋಶ, ಉಸಿರಾಟ ಕಾಯಿಲೆ, ಅಲರ್ಜಿಗಳಿಗೆ ಸಂಬಂಧಿಸಿದ ಸ್ಕ್ರೀನಿಂಗ್ ಮತ್ತು ಸುಧಾರಿತ ಪರೀಕ್ಷೆಗಳನ್ನು ಮಾಡಿಸುವ ಕಾಳಜಿಯೊಂದಿಗೆ ಜಯನಗರದ ವಾಯು ಚೆಸ್ಟ್ ಅಂಡ್ ಸ್ಲೀಪ್ ಸೆಂಟರ್ ನಲ್ಲಿ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಈವರೆವಿಗೂ 4,186 ನೌಕರರುಗಳು ತಪಾಸಣೆಗೆ ಒಳಪಟ್ಟಿರುತ್ತಾರೆ.
- ಸಂಸ್ಥೆಯ ನೌಕರರ ಆರೋಗ್ಯದ ಹಿತದೃಷ್ಟಿಯಿಂದ ಸಂಸ್ಥೆಯ ಎಲ್ಲಾ ನೌಕರರಿಗೆ Department of Biotechnology Govt of India ದ ಸಹಕಾರದೊಂದಿಗೆ C-CAMP ಅನ್ನು ಸರ್ಕಾರದ ಸಾರಿಗೆ ಇಲಾಖೆಯ “ಸಾರಿಗೆ ಆಶಾಕಿರಣ ಯೋಜನೆ”ಯಡಿ ಸಂಸ್ಥೆಯ ಕೇಂದ್ರ ಕಛೇರಿ ಸೇರಿದಂತೆ 50 ಘಟಕಗಳು ಮತ್ತು 4 ಕಾರ್ಯಾಗರಗಳಲ್ಲಿ ವಿವಿಧ ತಂಡಗಳೊಂದಿಗೆ ಕಣ್ಣಿನ ತಪಾಸಣಾ ಶಿಬಿರಗಳನ್ನು ಹಂತಹಂತವಾಗಿ ಆಯೋಜಿಸಿ, ನೌಕರರಿಗೆ ಉಚಿತವಾಗಿ ಕಣ್ಣಿನ ಪರೀಕ್ಷೆ ನಡೆಸಿ, ಕನ್ನಡಕಗಳನ್ನು ನೀಡಲಾಗುತ್ತಿದೆ.
- ಸಂಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ 2500 ನಿರ್ವಾಹಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಗೊಳಿಸಲಾಗಿದೆ. ಇದರಿಂದ ಸೇವೆಯ ಗುಣಮಟ್ಟ ಮತ್ತು ಕಾರ್ಯನಿರ್ವಹಣೆಯಲ್ಲಿ ಮತ್ತಷ್ಟು ಸುಧಾರಣೆ ಕಂಡುಬರುತ್ತಿದೆ.
- ಸಂಸ್ಥೆಯಲ್ಲಿನ ಖಾಲಿ ಹುದ್ದೆಗಳ ಲಭ್ಯತೆಗನುಗುಣವಾಗಿ ಮೃತಾವಲಂಭಿತರುಗಳನ್ನು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಿ ದರ್ಜೆ-3 (ಮೇಲ್ವಿಚಾರಕೇತರ) ಹುದ್ದೆಗಳಿಗೆ ಜೂನ್ 2023 ರಿಂದ ಇಲ್ಲಿಯವರೆಗೂ ಒಟ್ಟು 416 ಮೃತಾವಲಂಬಿತರುಗಳಿಗೆ ಅನುಕಂಪ ಆಧಾರಿತ ನೇಮಕಾತಿ ಆದೇಶವನ್ನು ನೀಡಲಾಗಿರುತ್ತದೆ.
- ಈ ಸಾಲಿನಲ್ಲಿ Urban Mobility India ಮತ್ತು ASRTU ನಂತಹ ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಗಳಿಂದ ಪಡೆದಿರುವ ಪ್ರಶಸ್ತಿಗಳು ಒಳಗೊಂಡಂತೆ, ಬೆಂ.ಮ.ಸಾ.ಸಂಸ್ಥೆಗೆ ಒಟ್ಟಾರೆ 151 ಪ್ರಶಸ್ತಿ/ಪುರಸ್ಕಾರಗಳು ಲಭಿಸಿರುತ್ತದೆ.
SHOCKING : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ : ಪಾಠ ಮಾಡುವಾಗಲೇ ಕುಸಿದು ಬಿದ್ದು ಶಿಕ್ಷಕ ಸಾವು!








