ವಾಷಿಂಗ್ಟನ್/ತೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗಿದ್ದು, ಇರಾನ್ ಮತ್ತು ಅಮೆರಿಕ ನಡುವೆ ನೇರ ಸಂಘರ್ಷ ಆರಂಭವಾಗಿದೆ. ಇರಾನ್ ಏಕಕಾಲಕ್ಕೆ 500 ಕ್ಷಿಪಣಿಗಳು ಮತ್ತು 2,000 ಡ್ರೋನ್‌ಗಳ ಮೂಲಕ ನಡೆಸಿದ ಬೃಹತ್ ದಾಳಿಗೆ ಪ್ರತಿಯಾಗಿ, ಅಮೆರಿಕ ಈಗ ಇತಿಹಾಸದಲ್ಲೇ ಕಾಣದಂತಹ ದೊಡ್ಡ ಮಟ್ಟದ ಪಲ್ಟಿಯನ್ನ ನೀಡಿದೆ.
ಇಸ್ರೇಲ್ ಅಥವಾ ಅಮೆರಿಕದ ಮಿತ್ರರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ಸುಮಾರು 500 ಕ್ಷಿಪಣಿಗಳು ಹಾಗೂ 2,000ಕ್ಕೂ ಹೆಚ್ಚು ಡ್ರೋನ್‌ಗಳನ್ನು ಉಡಾವಣೆ ಮಾಡಿದೆ.
ಅಮೆರಿಕದ ಬಿರುಗಾಳಿ ದಾಳಿ: ಇರಾನ್‌ನ ಈ ಉದ್ಧಟತನಕ್ಕೆ ತಕ್ಕ ಶಾಸ್ತಿ ಮಾಡಲು ಅಮೆರಿಕದ ಸೇನೆ ತಕ್ಷಣವೇ ಕಾರ್ಯಾಚರಣೆಗೆ ಇಳಿದಿದೆ. ಅಮೆರಿಕದ ವಾಯುಪಡೆ ಮತ್ತು ನೌಕಾಪಡೆ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಇರಾನ್‌ನ ಸುಮಾರು 17 ಯುದ್ಧನೌಕೆಗಳನ್ನು ಸಮುದ್ರದಲ್ಲೇ ಹೊಡೆದು ಉರುಳಿಸಲಾಗಿದೆ.
2,000 ನೆಲೆಗಳ ಮೇಲೆ ದಾಳಿ: ಕೇವಲ ನೌಕೆಗಳಷ್ಟೇ ಅಲ್ಲದೆ, ಇರಾನ್‌ನ ಶಸ್ತ್ರಾಸ್ತ್ರ ಸಂಗ್ರಹ ಕೇಂದ್ರಗಳು, ಡ್ರೋನ್ ಉಡಾವಣಾ ಕೇಂದ್ರಗಳು ಮತ್ತು ಸೇನಾ ತರಬೇತಿ ಶಿಬಿರಗಳು ಸೇರಿದಂತೆ ಒಟ್ಟು 2,000ಕ್ಕೂ ಹೆಚ್ಚು ಆಯಕಟ್ಟಿನ ನೆಲೆಗಳ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಪರಿಣಾಮವೇನು?
ಈ ದಾಳಿಯಿಂದಾಗಿ ಇರಾನ್‌ನ ರಕ್ಷಣಾ ವ್ಯವಸ್ಥೆಗೆ ಭಾರಿ ಹೊಡೆತ ಬಿದ್ದಿದೆ. ಪಶ್ಚಿಮ ಏಷ್ಯಾದಲ್ಲಿ ಈ ಘಟನೆಯು ಆತಂಕವನ್ನು ಸೃಷ್ಟಿಸಿದ್ದು, ಪರಿಸ್ಥಿತಿ ನಿಯಂತ್ರಣ ಮೀರುವ ಸಾಧ್ಯತೆ ದಟ್ಟವಾಗಿದೆ. ವಿಶ್ವದ ಹಲವು ರಾಷ್ಟ್ರಗಳು ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಜಾಗತಿಕ ತೈಲ ಮಾರುಕಟ್ಟೆಯ ಮೇಲೆಯೂ ಇದು ಪರಿಣಾಮ ಬೀರುವ ಭೀತಿ ಎದುರಾಗಿದೆ.








