Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಉತ್ತರಪ್ರದೇಶದಲ್ಲಿ ಭೀಕರ ಬಿರುಗಾಳಿಗೆ ಹಾರಿ ಹೋದ ವ್ಯಕ್ತಿ, ಬೆಚ್ಚಿ ಬೀಳಿಸಿದ ವಿಡಿಯೋ | Watch Video

BREAKING : ಗ್ರಾಹಕರಿಗೆ ಮತ್ತೊಂದು ಶಾಕ್ : ಅಮುಲ್ ಬೆನ್ನಲ್ಲೇ ಇಂದಿನಿಂದ `ಮದರ್ ಡೈರಿ’ ಲೀ.ಹಾಲಿನ ದರ 2 ರೂ.ಹೆಚ್ಚಳ | Mother Dairy milk price hike

BREAKING : ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕೆ: 95.86ಕ್ಕೆ ಕುಸಿಯುವ ಮೂಲಕ ಸಾರ್ವಕಾಲಿಕ ದಾಖಲೆ | Rupee falls against dollar

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಇಸ್ರೇಲ್- ಇರಾನ್ ಸಂಘರ್ಷದಿಂದ ಸಾಮಾನ್ಯ ಜನರಿಗೆ ಶಾಕ್: ಪೆಟ್ರೋಲ್-ಡೀಸೆಲ್, ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಸಾಧ್ಯತೆ !
INDIA

BIG NEWS : ಇಸ್ರೇಲ್- ಇರಾನ್ ಸಂಘರ್ಷದಿಂದ ಸಾಮಾನ್ಯ ಜನರಿಗೆ ಶಾಕ್: ಪೆಟ್ರೋಲ್-ಡೀಸೆಲ್, ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಸಾಧ್ಯತೆ !

By kannadanewsnow57

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯು ಜಾಗತಿಕ ಆರ್ಥಿಕತೆಯ ಮೇಲೆ ಕದನ ಕಾರ್ಮೋಡ ಮೂಡಿಸಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಕಚ್ಚಾ ತೈಲ ಮತ್ತು ಚಿನ್ನದ ಬೆಲೆಗಳಲ್ಲಿ ಭಾರಿ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಹಾರ್ಮುಜ್ ಜಲಸಂಧಿಯನ್ನು ಸದ್ಯಕ್ಕೆ ಮುಚ್ಚುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವರು ಹೇಳಿದ್ದರೂ, ತೈಲ ಮಾರುಕಟ್ಟೆಯಲ್ಲಿನ ಆತಂಕ ಮಾತ್ರ ಕಡಿಮೆಯಾಗಿಲ್ಲ.

ಹಾರ್ಮುಜ್ ಜಲಸಂಧಿ ಏಕೆ ಮುಖ್ಯ?
ಹಾರ್ಮುಜ್ ಜಲಸಂಧಿಯು ಕೇವಲ 167 ಕಿಮೀ ಉದ್ದದ ಕಿರಿದಾದ ಸಮುದ್ರ ಮಾರ್ಗವಾಗಿದ್ದರೂ, ವಿಶ್ವದ ಒಟ್ಟು ತೈಲದ ಸುಮಾರು 20% ಭಾಗ ಇಲ್ಲಿಂದಲೇ ಸಾಗುತ್ತದೆ. ಭಾರತವು ತನ್ನ ತೈಲದ ಅಗತ್ಯತೆಯ 90% ಆಮದು ಮಾಡಿಕೊಳ್ಳುತ್ತದೆ, ಅದರಲ್ಲಿ 50% ಈ ಮಾರ್ಗದ ಮೂಲಕವೇ ಬರುತ್ತದೆ. ಒಂದು ವೇಳೆ ಈ ಮಾರ್ಗ ಸಂಪೂರ್ಣ ಬಂದ್ ಆಗಿದ್ದರೆ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್ ದಾಟುವ ಸಾಧ್ಯತೆ ಇತ್ತು. ಆದರೆ ಈಗ ತಜ್ಞರು ಇದು 100 ಡಾಲರ್ ತಲುಪಬಹುದು ಎಂದು ಅಂದಾಜಿಸಿದ್ದಾರೆ.

ಬೆಲೆ ಏರಿಕೆಗೆ 3 ಪ್ರಮುಖ ಕಾರಣಗಳು:

ಟ್ಯಾಂಕರ್‌ಗಳ ಮೇಲೆ ದಾಳಿ: ಜಲಮಾರ್ಗ ಅಧಿಕೃತವಾಗಿ ಬಂದ್ ಆಗದಿದ್ದರೂ, ತೈಲ ಸಾಗಿಸುವ ಹಡಗುಗಳ ಮೇಲೆ ದಾಳಿ ನಡೆಯುವ ಭೀತಿ ಇದೆ. ಇತ್ತೀಚೆಗೆ ಪರ್ಷಿಯನ್ ಗಲ್ಫ್‌ನಲ್ಲಿ ಇಂತಹ ಘಟನೆಗಳು ವರದಿಯಾಗಿವೆ. ಇದರಿಂದ ಪೂರೈಕೆ ವ್ಯತ್ಯಯಗೊಂಡು ಬೆಲೆ ಏರಿಕೆಯಾಗುತ್ತದೆ.

ವಿಮೆ ಮತ್ತು ಶಿಪ್ಪಿಂಗ್ ವೆಚ್ಚ: ಯುದ್ಧದ ಸನ್ನಿವೇಶದಲ್ಲಿ ಹಡಗುಗಳ ವಿಮೆ (War Risk Premium) ಮತ್ತು ಶಿಪ್ಪಿಂಗ್ ಚಾರ್ಜ್‌ಗಳು ದುಪ್ಪಟ್ಟಾಗುತ್ತವೆ. ಈ ಹೆಚ್ಚುವರಿ ವೆಚ್ಚದ ಹೊರೆ ಅಂತಿಮವಾಗಿ ಗ್ರಾಹಕರ ಮೇಲೆ ಬೀಳಲಿದೆ.

ಮಾರುಕಟ್ಟೆಯಲ್ಲಿ ಭೀತಿ: ಜಾಗತಿಕ ಹೂಡಿಕೆದಾರರು ಭವಿಷ್ಯದ ಅನಿಶ್ಚಯತೆಯನ್ನು ಗಮನಿಸಿ ಮೊದಲೇ ತೈಲ ಮತ್ತು ಬಂಗಾರದ ಮೇಲೆ ಹೂಡಿಕೆ ಮಾಡುತ್ತಾರೆ. ಈ ಪ್ಯಾನಿಕ್ ಬೈಯಿಂಗ್‌ನಿಂದಾಗಿ ದರಗಳು ಏರುತ್ತವೆ.

ಸಾಮಾನ್ಯ ಜನರ ಜೇಬಿಗೆ ಎಷ್ಟು ಕತ್ತರಿ?
1. ಪೆಟ್ರೋಲ್-ಡೀಸೆಲ್ ದರ:
ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ತಲುಪಿದರೆ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ₹4 ರಿಂದ ₹5 ರವರೆಗೆ ಏರಿಕೆಯಾಗಬಹುದು. ಸದ್ಯದ ಪರಿಸ್ಥಿತಿಯಲ್ಲಿ ದೆಹಲಿಯಲ್ಲಿ ಪೆಟ್ರೋಲ್ ₹100 ರ ಗಡಿ ದಾಟುವ ಸಾಧ್ಯತೆ ಇದೆ.

2. ಬಂಗಾರದ ಬೆಲೆ:
ಸುರಕ್ಷಿತ ಹೂಡಿಕೆಯಾಗಿ ಹೂಡಿಕೆದಾರರು ಚಿನ್ನದ ಮೊರೆ ಹೋಗುವುದರಿಂದ, ಬಂಗಾರದ ದರದಲ್ಲಿ ಭಾರಿ ಏರಿಕೆ ಕಂಡುಬರಲಿದೆ. ತಜ್ಞರ ಪ್ರಕಾರ, ಚಿನ್ನದ ಬೆಲೆ ಈಗಿನ ದರಕ್ಕಿಂತ ಬರೋಬ್ಬರಿ ₹30,000 ವರೆಗೂ ಹೆಚ್ಚಾಗುವ ಮುನ್ಸೂಚನೆ ಇದೆ.

3. ಷೇರು ಮಾರುಕಟ್ಟೆ:
ಕಚ್ಚಾ ತೈಲ ದುಬಾರಿಯಾದಂತೆ ರವಾನೆ ವೆಚ್ಚ ಹೆಚ್ಚಾಗಿ ಕಂಪನಿಗಳ ಲಾಭಾಂಶ ಕಡಿಮೆಯಾಗುತ್ತದೆ. ಇದು ಷೇರು ಮಾರುಕಟ್ಟೆಯಲ್ಲಿ ಕುಸಿತಕ್ಕೆ ಕಾರಣವಾಗಬಹುದು.

BIG NEWS: Israel-Iran conflict shocks common people: Petrol-diesel gold prices likely to rise sharply!
Share. Facebook Twitter LinkedIn WhatsApp Email

Related Posts

SHOCKING : ಉತ್ತರಪ್ರದೇಶದಲ್ಲಿ ಭೀಕರ ಬಿರುಗಾಳಿಗೆ ಹಾರಿ ಹೋದ ವ್ಯಕ್ತಿ, ಬೆಚ್ಚಿ ಬೀಳಿಸಿದ ವಿಡಿಯೋ | Watch Video

1 Min Read

BREAKING : ಗ್ರಾಹಕರಿಗೆ ಮತ್ತೊಂದು ಶಾಕ್ : ಅಮುಲ್ ಬೆನ್ನಲ್ಲೇ ಇಂದಿನಿಂದ `ಮದರ್ ಡೈರಿ’ ಲೀ.ಹಾಲಿನ ದರ 2 ರೂ.ಹೆಚ್ಚಳ | Mother Dairy milk price hike

1 Min Read

BREAKING : ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕೆ: 95.86ಕ್ಕೆ ಕುಸಿಯುವ ಮೂಲಕ ಸಾರ್ವಕಾಲಿಕ ದಾಖಲೆ | Rupee falls against dollar

1 Min Read
Recent News

SHOCKING : ಉತ್ತರಪ್ರದೇಶದಲ್ಲಿ ಭೀಕರ ಬಿರುಗಾಳಿಗೆ ಹಾರಿ ಹೋದ ವ್ಯಕ್ತಿ, ಬೆಚ್ಚಿ ಬೀಳಿಸಿದ ವಿಡಿಯೋ | Watch Video

BREAKING : ಗ್ರಾಹಕರಿಗೆ ಮತ್ತೊಂದು ಶಾಕ್ : ಅಮುಲ್ ಬೆನ್ನಲ್ಲೇ ಇಂದಿನಿಂದ `ಮದರ್ ಡೈರಿ’ ಲೀ.ಹಾಲಿನ ದರ 2 ರೂ.ಹೆಚ್ಚಳ | Mother Dairy milk price hike

BREAKING : ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕೆ: 95.86ಕ್ಕೆ ಕುಸಿಯುವ ಮೂಲಕ ಸಾರ್ವಕಾಲಿಕ ದಾಖಲೆ | Rupee falls against dollar

ಚಿಕ್ಕಮಗಳೂರು : ರೈತರಿಂದ 30 ಸಾವಿರ ಲಂಚ ಪಡೆಯುವಾಗ, ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ಇಲಾಖೆ ಅಧಿಕಾರಿಗಳು

State News
KARNATAKA

ಚಿಕ್ಕಮಗಳೂರು : ರೈತರಿಂದ 30 ಸಾವಿರ ಲಂಚ ಪಡೆಯುವಾಗ, ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ಇಲಾಖೆ ಅಧಿಕಾರಿಗಳು

By ಸುರೇಶ್‌ KARNATAKA 1 Min Read

ಚಿಕ್ಕಮಗಳೂರು: ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು ರೈತರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಕಂದಾಯ ಇಲಾಖೆಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ…

BIG NEWS : ಪತ್ನಿಗೆ ಜೀವನಾಂಶ ನೀಡದ ಪತಿಗೆ ಬಂಧನ ವಾರೆಂಟ್ ಜಾರಿ ಮಾಡಬಹುದು : ಹೈಕೋರ್ಟ್ ಮಹತ್ವದ ಆದೇಶ

BREAKING : ವಚನಾನಂದ ಸ್ವಾಮೀಜಿಗೆ ಮತ್ತೊಂದು ಸಂಕಷ್ಟ : ಪೋಕ್ಸೋ ಕೇಸ್ ನಲ್ಲಿ ‘FIR’ ದಾಖಲು!

BIG NEWS : ವಿಜಯಪುರದಲ್ಲಿ ಬೆಳ್ಳಂ ಬೆಳಿಗ್ಗೆ ಚಿನ್ನದ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ : ಇಬ್ಬರಿಗೆ ಗಂಭೀರ ಗಾಯ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.