ರಾಯಚೂರು : ಮನೆಯಲ್ಲಿದ್ದ ಫ್ರೀಡ್ಜ್ ಸ್ಪೋಟಗೊಂಡು ಮನೆ ಹೊತ್ತಿ ಉರಿದಿರುವ ಘಟನೆ ರಾಯಚೂರು ಜಿಲ್ಲೆಯ ಸಾಲಗುಂದಾ ಗ್ರಾಮದಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದಾ ಗ್ರಾಮದಲ್ಲಿ ರಾಜನಾಯ್ಕ್ ಎಂಬುವರ ಮನೆಯಲ್ಲಿ ಫ್ರಿಡ್ಜ್ ಸ್ಪೋಟಗೊಂಡು ಮನೆ ಹೊತ್ತಿ ಉರಿದಿರುವ ಘಟನೆ ನಡೆದಿದೆ.
ರಾಜನಾಯ್ಕ್ ಕುಟುಂಬ ನಿನ್ನೆ ಸಿರಗುಪ್ಪಗೆ ತೆರಳಿತ್ತು. ಈ ವೇಳೆ ಮನೆಯಲ್ಲಿ ಏಕಾಏಕಿ ಫ್ರಿಡ್ಜ್ ಸ್ಪೋಟಗೊಂಡಿದೆ. 2.5 ಲಕ್ಷ ರೂ. ನಗದು ಸೆರಿದಂತೆ ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿದೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಾಂಧರ್ಬಿಕ ಚಿತ್ರ








