ಬೆಂಗಳೂರು : ಸಿಎಂ ಸಿದ್ದರಾಮಯ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಗೃಹ ಲಕ್ಷ್ಮೀ ಯೋಜನೆ ಸಹ ಒಂದಾಗಿದ್ದು, ಮನೆ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡಲಾಗುತ್ತಿದೆ. ಆದ್ರೆ, ಸತ್ತವರ ಅಕೌಂಟ್ಗೆ ಗೃಹ ಲಕ್ಷ್ಮೀ ಯೋಜನೆ ಹಣ ಪಾವತಿಯಾಗಿರುವುದು ಬೆಳಕಿಗೆ ಬಂದಿದೆ.
ಇದರಿಂದ ಈ ಯೋಜನೆ ಇದೀಗ ಸರ್ಕಾರವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ ಎನ್ನಲಾಗಿದೆ. ಹೀಗಾಗಿ ಸರ್ಕಾರ, ಸತ್ತವರ ಖಾತೆಗೆ ಜಮೆಯಾಗಿರುವ ಗೃಹಲಕ್ಷ್ಮೀ ಹಣವನ್ನು ವಾಪಸ್ ಪಡೆದುಕೊಳ್ಳಲು ಮುಂದಾಗಿದೆ. ಬರೋಬ್ಬರಿ 69 ಸಾವಿರ ಸತ್ತವರ ಬ್ಯಾಂಕ್ ಖಾತೆಗಳಿಗೆ 79 ಕೋಟಿ ರೂ. ಗೃಹಲಕ್ಷ್ಮಿ ಹಣ ಪಾವತಿ ಆಗಿರುವುದನ್ನು ಸರ್ಕಾರ ಪತ್ತೆ ಮಾಡಿದೆ.
ಈ ಹಣವನ್ನು ಇದೀಗ ವಾಪಸ್ ಪಡೆದುಕೊಳ್ಳಲು ಸರ್ಕಾರ, ಬ್ಯಾಂಕ್ ಅಧಿಕಾರಿಗಳ ಜೊತೆಯೂ ಸಂಪರ್ಕ ಸಾಧಿಸಿದೆ. ಈಗಾಗಲೇ ಸತ್ತವರ ಖಾತೆಗೆ ಎಷ್ಟು ಹಣ ಹೋಗಿದೆ ಎನ್ನುವುದು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದು ಇನ್ನು ಸತ್ತವರ ಮನೆಯ ಮುಂದಿನ ಸದಸ್ಯರು ಅಂದರೆ ಅವರ ಮನೆಯ ಹೆಣ್ಣು ಮಕ್ಕಳು ಹೊಸದಾಗಿ ಗೃಹಲಕ್ಷ್ಮಿ ಯೋಜನೆ ಪಡೆದುಕೊಳ್ಳಲು ಅರ್ಜಿ ಹಾಕಬಹುದಾಗಿದೆ.








