Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಕಲಬುರ್ಗಿಯಲ್ಲಿ 2 ತಿಂಗಳ ಹಿಂದೆಯಷ್ಟೇ ವಿವಾಹ ಆಗಿದ್ದ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ!

25/04/2026 12:29 PM

ಮದುವೆ ಆಗಿದ್ದರೂ `ಮ್ಯಾರೇಜ್ ಸರ್ಟಿಫಿಕೇಟ್’ ಇನ್ನೂ ಪಡೆದಿಲ್ಲವೇ? ತಪ್ಪದೇ ಇದನ್ನೊಮ್ಮೆ ಓದಿ.!

25/04/2026 12:26 PM

BIG NEWS : ಜನಿವಾರ ದಂಗಲ್ : ಕಾಲೇಜು ಲೈಸೆನ್ಸ್ ರದ್ದು ಮಾಡಿ, 25 ಲಕ್ಷ ರೂ. ದಂಡ ಹಾಕಿ, ಸಿಎಂಗೆ ಬ್ರಾಹ್ಮಣ ಮಹಾಸಭಾ ಪತ್ರ

25/04/2026 12:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯ ಸರ್ಕಾರದಿಂದ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ನೇಮಕಾತಿ ನಿಯಮಕ್ಕೆ ತಿದ್ದುಪಡಿ : ಶಿಕ್ಷಕರಿಗೆ ಸಿಗಲಿದೆ ಬಡ್ತಿ ಭಾಗ್ಯ!
KARNATAKA

BREAKING : ರಾಜ್ಯ ಸರ್ಕಾರದಿಂದ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ನೇಮಕಾತಿ ನಿಯಮಕ್ಕೆ ತಿದ್ದುಪಡಿ : ಶಿಕ್ಷಕರಿಗೆ ಸಿಗಲಿದೆ ಬಡ್ತಿ ಭಾಗ್ಯ!

By kannadanewsnow5727/02/2026 1:15 PM

ಬೆಂಗಳೂರು: ರಾಜ್ಯ ಸರ್ಕಾರವು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ತಿದ್ದುಪಡಿಯನ್ನು ತಂದಿದ್ದು, ಹೊಸ ನಿಯಮಗಳನ್ನು ಅಧಿಕೃತವಾಗಿ ಪ್ರಕಟಿಸಿದೆ. ‘ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳ (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2026’ ಅಡಿಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ.

ಬಡ್ತಿ ಪ್ರಕ್ರಿಯೆಯಲ್ಲಿನ ಪ್ರಮುಖ ಬದಲಾವಣೆಗಳು:

2:1 ಅನುಪಾತದಲ್ಲಿ ಬಡ್ತಿ: ಇನ್ಮುಂದೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗಳನ್ನು 1 ರಿಂದ 5ನೇ ತರಗತಿಯ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 6 ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕರಿಂದ 2:1 ಅನುಪಾತದಲ್ಲಿ ಮುಂಬಡ್ತಿ ಮೂಲಕ ಭರ್ತಿ ಮಾಡಲಾಗುವುದು.

ಪ್ರತಿ 3ನೇ ಹುದ್ದೆ ಪದವೀಧರ ಶಿಕ್ಷಕರಿಗೆ: ಪ್ರತಿ ಮೂರನೇ ಖಾಲಿ ಇರುವ ಸ್ಥಾನವನ್ನು ಪದವೀಧರ ಪ್ರಾಥಮಿಕ ಶಿಕ್ಷಕರಿಂದ (GPT) ತುಂಬಲು ನಿರ್ಧರಿಸಲಾಗಿದೆ.
ಸೇವಾ ಅವಧಿ: ಬಡ್ತಿ ಪಡೆಯಲು ಶಿಕ್ಷಕರು ಆಯಾ ವೃಂದದಲ್ಲಿ ಕನಿಷ್ಠ 12 ವರ್ಷಗಳ ಸೇವೆಯನ್ನು ಪೂರೈಸಿರುವುದು ಕಡ್ಡಾಯವಾಗಿದೆ.

ಹಿಂತೆಗೆದುಕೊಳ್ಳಲಾಗದ ಆಯ್ಕೆ (Irrevocable Option): ಮುಖ್ಯೋಪಾಧ್ಯಾಯರಾಗಿ ಅಥವಾ ಪ್ರೌಢಶಾಲಾ ಸಹಶಿಕ್ಷಕರಾಗಿ (ಗ್ರೇಡ್-2) ಬಡ್ತಿ ಹೊಂದಲು ಅವಕಾಶವಿರುವುದರಿಂದ, ಬಡ್ತಿ ನೀಡುವ ಮೊದಲು ಶಿಕ್ಷಕರಿಂದ ಬದಲಾಯಿಸಲಾಗದ ಲಿಖಿತ ಅಭಿಮತವನ್ನು ಪಡೆಯಲಾಗುವುದು.

ವಿಶೇಷ ಸೂಚನೆಗಳು:

6 ಮತ್ತು 7ನೇ ತರಗತಿಗೆ ಬೋಧನೆ: NCTE ಮಾರ್ಗಸೂಚಿಗಳಂತೆ ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿರುವ 1 ರಿಂದ 5ನೇ ತರಗತಿಯ ಶಿಕ್ಷಕರು, 6 ಮತ್ತು 7ನೇ ತರಗತಿಗಳಿಗೂ ಬೋಧಿಸಲು ಅರ್ಹರಾಗುತ್ತಾರೆ.

ಹಿರಿತನದ ಆಧಾರದಲ್ಲಿ ಹೊಂದಾಣಿಕೆ: ಒಂದು ವೇಳೆ ನಿಗದಿತ ಅನುಪಾತದಂತೆ ಅರ್ಹ ಶಿಕ್ಷಕರು ಲಭ್ಯವಿಲ್ಲದಿದ್ದರೆ ಅಥವಾ ಬಡ್ತಿ ನಿರಾಕರಿಸಿದರೆ, ಆಡಳಿತಾತ್ಮಕ ಹಿತದೃಷ್ಟಿಯಿಂದ ಲಭ್ಯವಿರುವ ಅರ್ಹ ಶಿಕ್ಷಕರನ್ನು ಪರಿಗಣಿಸಲಾಗುವುದು. ಆದರೆ, ಆ ಸಂದರ್ಭದಲ್ಲಿ ನಷ್ಟವಾದ ಬಡ್ತಿ ಅವಕಾಶಗಳನ್ನು ಮುಂದಿನ ಹಂತದಲ್ಲಿ ಸರಿಪಡಿಸಲಾಗುವುದು.

ಈ ಹೊಸ ನಿಯಮಗಳು ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಗೊಂಡ ದಿನಾಂಕದಿಂದಲೇ ಜಾರಿಗೆ ಬರಲಿವೆ.

BREAKING: State government amends primary school principal appointment rules: Teachers will get promotion!
Share. Facebook Twitter LinkedIn WhatsApp Email

Related Posts

BREAKING : ಕಲಬುರ್ಗಿಯಲ್ಲಿ 2 ತಿಂಗಳ ಹಿಂದೆಯಷ್ಟೇ ವಿವಾಹ ಆಗಿದ್ದ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ!

25/04/2026 12:29 PM1 Min Read

ಮದುವೆ ಆಗಿದ್ದರೂ `ಮ್ಯಾರೇಜ್ ಸರ್ಟಿಫಿಕೇಟ್’ ಇನ್ನೂ ಪಡೆದಿಲ್ಲವೇ? ತಪ್ಪದೇ ಇದನ್ನೊಮ್ಮೆ ಓದಿ.!

25/04/2026 12:26 PM1 Min Read

BIG NEWS : ಜನಿವಾರ ದಂಗಲ್ : ಕಾಲೇಜು ಲೈಸೆನ್ಸ್ ರದ್ದು ಮಾಡಿ, 25 ಲಕ್ಷ ರೂ. ದಂಡ ಹಾಕಿ, ಸಿಎಂಗೆ ಬ್ರಾಹ್ಮಣ ಮಹಾಸಭಾ ಪತ್ರ

25/04/2026 12:19 PM1 Min Read
Recent News

BREAKING : ಕಲಬುರ್ಗಿಯಲ್ಲಿ 2 ತಿಂಗಳ ಹಿಂದೆಯಷ್ಟೇ ವಿವಾಹ ಆಗಿದ್ದ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ!

25/04/2026 12:29 PM

ಮದುವೆ ಆಗಿದ್ದರೂ `ಮ್ಯಾರೇಜ್ ಸರ್ಟಿಫಿಕೇಟ್’ ಇನ್ನೂ ಪಡೆದಿಲ್ಲವೇ? ತಪ್ಪದೇ ಇದನ್ನೊಮ್ಮೆ ಓದಿ.!

25/04/2026 12:26 PM

BIG NEWS : ಜನಿವಾರ ದಂಗಲ್ : ಕಾಲೇಜು ಲೈಸೆನ್ಸ್ ರದ್ದು ಮಾಡಿ, 25 ಲಕ್ಷ ರೂ. ದಂಡ ಹಾಕಿ, ಸಿಎಂಗೆ ಬ್ರಾಹ್ಮಣ ಮಹಾಸಭಾ ಪತ್ರ

25/04/2026 12:19 PM

ರೈಲಿನಲ್ಲಿ ನಿಮ್ಮ ವಸ್ತುಗಳನ್ನು ಮರೆತಿದ್ದೀರಾ? ಚಿಂತೆ ಬಿಡಿ, ಈ ಒಂದು ಆಪ್ ನಿಮ್ಮ ಫೋನ್‌ ನಲ್ಲಿದ್ದರೆ ಸಾಕು!

25/04/2026 12:16 PM
State News
KARNATAKA

BREAKING : ಕಲಬುರ್ಗಿಯಲ್ಲಿ 2 ತಿಂಗಳ ಹಿಂದೆಯಷ್ಟೇ ವಿವಾಹ ಆಗಿದ್ದ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ!

By kannadanewsnow0525/04/2026 12:29 PM KARNATAKA 1 Min Read

ಕಲಬುರ್ಗಿ : ಕಲಬುರ್ಗಿಯಲ್ಲಿ ಘೋರ ದುರಂತ ನಡೆದಿದ್ದು, ಎರಡು ತಿಂಗಳ ಹಿಂದೆಯಷ್ಟೇ ವಿವಾಹ ಆಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿರು ಘಟನೆ…

ಮದುವೆ ಆಗಿದ್ದರೂ `ಮ್ಯಾರೇಜ್ ಸರ್ಟಿಫಿಕೇಟ್’ ಇನ್ನೂ ಪಡೆದಿಲ್ಲವೇ? ತಪ್ಪದೇ ಇದನ್ನೊಮ್ಮೆ ಓದಿ.!

25/04/2026 12:26 PM

BIG NEWS : ಜನಿವಾರ ದಂಗಲ್ : ಕಾಲೇಜು ಲೈಸೆನ್ಸ್ ರದ್ದು ಮಾಡಿ, 25 ಲಕ್ಷ ರೂ. ದಂಡ ಹಾಕಿ, ಸಿಎಂಗೆ ಬ್ರಾಹ್ಮಣ ಮಹಾಸಭಾ ಪತ್ರ

25/04/2026 12:19 PM

ಶಾಸಕ ಗೋಪಾಲಕೃಷ್ಣ ಬೇಳೂರು ‘ಮಾಸ್ಟರ್ ಪ್ಲಾನ್’: ಇನ್ಮುಂದೆ ಸಾಗರ ಆಗಲಿದೆ ‘ಹೈಟೆಕ್ ಸಿಟಿ’!

25/04/2026 12:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.