ಬೆಂಗಳೂರು : ಬಿಡದಿಯಲ್ಲಿ ಪ್ರೇಯಸಿಯಿಂದ ಜಿಮ್ ಟ್ರೈನರ್ ಗೆ ಚಾಕು ಇರಿದಿರುವ ಘಟನೆ ವರದಿಯಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಜಿಮ್ ಟ್ರೈನರ್ ಆದಂತಹ ವೇಣುಗೋಪಾಲ್ (27) ಗೆ ಪ್ರೇಯಸಿ ಚಾಕು ಇರಿದಿದ್ದಾಳೆ.
ಪ್ರೇಯಸಿ ಸುಧಾ (30) ಲಿಂದ ಪ್ರಿಯಕಟ ವೇಣುಗೋಪಾಲ್ ಗೆ ಚಾಕು ಇರಿದಿದ್ದಾಳೆ. ವೇಣುಗೋಪಾಲ್ ಬಿಡದಿಯ ಖಾಸಗಿ ಆಸ್ಪತ್ರೆಗೆ ದಾಖಲು ಆಗಿದ್ದಾನೆ. ನಿನ್ನೆ ರಾತ್ರಿ ರಾಮನಗರ ತಾಲೂಕಿನ ಬಿಡದಿಯಲ್ಲಿ ಒಂದು ಘಟನೆ ನಡೆದಿದೆ. ಕಳೆದರೆ 2 ವರ್ಷಗಳಿಂದ ಮತ್ತು ಸುಧಾ ಪ್ರೀತಿಸುತ್ತಿದ್ದರು ಪ್ರೇಮ ವೈಫಲ್ಯ ಹಿನ್ನೆಲೆ ವೇಣುಗೋಪಾಲ್ ಗೆ ಸುಧಾ ಚಾಕು ಇರಿದಿದ್ದಾಳೆ. ಆರೋಪಿತ ಮಹಿಳೆ ಸುಧಾಳನ್ನು ಬಿಡದಿ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








