ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಷಾ ಅವರಿಂದ ದ್ವೇಷ ರಾಜಕಾರಣ ಮಾಡಿತ್ತಿದ್ದಾರೆ. ವಿಪಕ್ಷಗಳನ್ನು ಗುರಿಯಾಗಿಸಿಕೊಂಡು ಸುಳ್ಳು ಕೇಸ್ ಹಾಕುತ್ತಿದ್ದಾರೆ. ಅಧಿಕಾರಿಗಳಲ್ಲಿ ಇದ್ದ ಒಬ್ಬ ಮುಖ್ಯಮಂತ್ರಿಯನ್ನು ಎಳೆದು ಬಂಧಿಸಿದ್ದಾರೆ. ಅಧಿಕಾರದಲ್ಲಿದ್ದ ಸಿಎಂ ಅನ್ನು ಬಂಧಿಸಿದ್ದ ಇತಿಹಾಸ ದೇಶದಲ್ಲಿಯೇ ಇರಲಿಲ್ಲ. ಮೋದಿ ಅಮಿತ್ ಶಾ ವಿರುದ್ಧ ಮಾಜಿ ಸಿಎಂ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.
2022 ರಲ್ಲಿ ನಡೆದ ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಪಟ್ಟಂತೆ ಇದೀಗ ಇಂದು ದೆಹಲಿ ರೌಸ್ ಅವೆನ್ಯೂ ಕೋರ್ಟ್, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿ ತಿಸೋಡಿಯ ಸೇರಿದಂತೆ 23 ಜನರು ಆರೋಪಮುಕ್ತ ಎಂದು ತೀರ್ಪು ನೀಡಿದೆ. ಕೋರ್ಟ್ ತೀರ್ಪಿನ ಬೆನ್ನಲ್ಲೇ ಕೋರ್ಟಾವರಣದಲ್ಲಿ ಕೇಜ್ರಿವಾಲ್ ಕಣ್ಣೀರು ಹಾಕಿದರು.
ತೀರ್ಪಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಪ್ರಾಮಾಣಿಕ ವ್ಯಕ್ತಿ ನಿಯತ್ತಿನಿಂದ ಕೆಲಸ ಮಾಡಿದ್ದೇನೆ ಆದರೂ ನನ್ನ ಮೇಲೆ ಸುಳ್ಳು ಕೇಸ್ ಗಳನ್ನು ಹಾಕಿದ್ದರು ಪ್ರಧಾನಿ ಮೋದಿ ಅವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ವಿಪಕ್ಷಗಳನ್ನು ಗುರಿಯಾಗಿಸಿಕೊಂಡು ಸುಳ್ಳು ಕೇಸ್ ಹಾಕುತ್ತಿದ್ದಾರೆ. ನನ್ನ ಮೇಲೆ ಕೇಸ್ ಹಾಕಿದ್ರು. ನಮ್ಮ ವಿರುದ್ಧ ಸುಳ್ಳು ಭ್ರಷ್ಟಾಚಾರ ಆರೋಪ ಹೋರಿಸಿದ್ದರು. ಆಪ್ ಪಕ್ಷವನ್ನು ಮುಗಿಸಲು ಸಂಚು ರೂಪಿಸಿದ್ದರು. ನನಗೆ ನ್ಯಾಯ ಸಿಕ್ಕಿದೆ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಕೇಜ್ರಿವಾಲ್ ತಿಳಿಸಿದರು.








