Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಫ್ಘಾನ್-ಪಾಕ್ ನಡುವೆ ‘ಓಪನ್ ಯುದ್ಧ’ ಘೋಷಣೆ: ತಾಲಿಬಾನ್ ಹೊಡೆತಕ್ಕೆ 55 ಪಾಕ್ ಸೈನಿಕರು ಬಲಿ; ‘ಆಪರೇಷನ್ ಘಜಬ್ ಲಿಲ್ ಹಕ್’ ಆರಂಭಿಸಿದ ಪಾಕಿಸ್ತಾನ!

27/02/2026 11:45 AM

BIG NEWS : ನೌಕರರನ್ನ ವಜಾಗೊಳಿಸೋ ಮುನ್ನ ವಿಚಾರಣೆ ಕಡ್ಡಾಯ : ಹೈಕೋರ್ಟ್ ತೀರ್ಪು

27/02/2026 11:41 AM

ನೀವು ಕೋಟ್ಯಧಿಪತಿಯಾಗಬೇಕೇ? ಯಶಸ್ಸಿನತ್ತ ನಿಮ್ಮನ್ನು ಮುನ್ನಡೆಸಲಿವೆ ಚಾಣಕ್ಯನ ಈ 7 ರಹಸ್ಯ ಸೂತ್ರಗಳು !

27/02/2026 11:35 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ನೌಕರರನ್ನ ವಜಾಗೊಳಿಸೋ ಮುನ್ನ ವಿಚಾರಣೆ ಕಡ್ಡಾಯ : ಹೈಕೋರ್ಟ್ ತೀರ್ಪು
KARNATAKA

BIG NEWS : ನೌಕರರನ್ನ ವಜಾಗೊಳಿಸೋ ಮುನ್ನ ವಿಚಾರಣೆ ಕಡ್ಡಾಯ : ಹೈಕೋರ್ಟ್ ತೀರ್ಪು

By kannadanewsnow0527/02/2026 11:41 AM

ಧಾರವಾಡ : ಸಾರಿಗೆ ಬಸ್ ನೌಕರನ ಪ್ರಕರಣ ಒಂದರಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಒಂದನ್ನು ನೀಡಿದ್ದು, ನೌಕರನ ಮೇಲೆ ಗಂಭೀರ ಆರೋಪಗಳಿದ್ದರೂ ಸೂಕ್ತ ಇಲಾಖಾ ವಿಚಾರಣೆ ನಡೆಸದೆ ಮತ್ತು ಆತನ ವಾದ ಆಲಿಸದೆ ಸೇವೆಯಿಂದ ವಜಾ ಮಾಡುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKSRTC) ತನ್ನ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಧಾರವಾಢ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.

ಬೆಳಗಾವಿಯ ಗೋಕಾಕ್ ತಾಲೂಕಿನ ಸಂಜುಕುಮಾ‌ರ್ ಎಂಬುವರು ನಿಗಮದ ನೌಕರರಾಗಿದ್ದ ತಂದೆಯ ನಿಧನದ ನಂತರ ಅನುಕಂಪದ ಆಧಾರದಲ್ಲಿ ಭದ್ರತಾ ಸಿಬ್ಬಂದಿಯಾಗಿ ನೇಮಕಗೊಂಡಿದ್ದರು. ಕೆಲಸಕ್ಕೆ ಸೇರುವಾಗ ನಕಲಿ ಶೈಕ್ಷಣಿಕ ದಾಖಲೆಗಳನ್ನು ನೀಡಿದ್ದಾರೆ ಎಂಬ ಆರೋಪದಲ್ಲಿ ಅವರನ್ನು 2024ರ ಡಿ.13ರಂದು ಸೇವೆಯಿಂದ ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ

ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಪೀಠ, ನೌಕರನ ಮೇಲೆ ನಕಲಿ ದಾಖಲೆ ನೀಡಿದ ಆರೋಪವಿದ್ದಾಗ, ಅದು ಆತನ ವ್ಯಕ್ತಿತ್ವಕ್ಕೆ ಕಳಂಕ ತರುವಂತಹದ್ದಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಇಲಾಖಾ ವಿಚಾರಣೆ ನಡೆಸುವುದು ಮತ್ತು ನೌಕರನಿಗೆ ತನ್ನ ವಾದ ಮಂಡಿಸಲು ಅವಕಾಶ ನೀಡುವುದು ಕಡ್ಡಾಯ ಎಂದು ಹೇಳಿದೆ.

ನೌಕರನು ಪ್ರೊಬೇಷನರಿ ಅವಧಿಯಲ್ಲಿದ್ದರೂ, ಆತನ ವಜಾ ಆದೇಶವು ಶಿಕ್ಷಾರ್ಹ ರೂಪದಲ್ಲಿದ್ದರೆ, ಅದಕ್ಕೂ ಮುನ್ನ ವಿಚಾರಣೆ ನಡೆಸಲೇಬೇಕು ಎಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಅರ್ಜಿದಾರರ ವಜಾ ಆದೇಶವನ್ನು ರದ್ದುಪಡಿಸಿರುವ ನ್ಯಾಯಾಲಯ, ತಕ್ಷಣವೇ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ನಿಗಮಕ್ಕೆ ನಿರ್ದೇಶನ ನೀಡಿದೆ. ಅಲ್ಲದೇ ಇಲಾಖಾ ವಿಚಾರಣೆ ನಡೆಸಿ ಪ್ರಕರಣವನ್ನು ಕಾನೂನುಬದ್ಧವಾಗಿ ನಿರ್ಧರಿಸುವ ಸ್ವಾತಂತ್ರ್ಯ ನಿಗಮಕ್ಕಿದೆ ಎಂದು ಸ್ಪಷ್ಟಪಡಿಸಲಾಗಿದೆ.

Share. Facebook Twitter LinkedIn WhatsApp Email

Related Posts

ನೀವು ಕೋಟ್ಯಧಿಪತಿಯಾಗಬೇಕೇ? ಯಶಸ್ಸಿನತ್ತ ನಿಮ್ಮನ್ನು ಮುನ್ನಡೆಸಲಿವೆ ಚಾಣಕ್ಯನ ಈ 7 ರಹಸ್ಯ ಸೂತ್ರಗಳು !

27/02/2026 11:35 AM2 Mins Read

90 ದಿನಗಳ ‘ಚಿನ್ನದ’ ಬೆಳೆ: ಜೀರಿಗೆ ಕೃಷಿಯಿಂದ ಗಳಿಸಿ ಲಕ್ಷಾಂತರ ರೂಪಾಯಿ ಆದಾಯ!

27/02/2026 11:13 AM2 Mins Read

ಹೆಂಡತಿ ನಿತ್ಯ ಈ ಪೂಜೆ ಮಾಡಿದರೆ ಗಂಡನ ಕೆಲಸ, ವ್ಯಾಪಾರ, ಆರ್ಥಿಕ ಸಮಸ್ಯೆಗಳು ಬೇಗನೇ ಪರಿಹಾರವಾಗುತ್ತದೆ.

27/02/2026 11:11 AM3 Mins Read
Recent News

ಅಫ್ಘಾನ್-ಪಾಕ್ ನಡುವೆ ‘ಓಪನ್ ಯುದ್ಧ’ ಘೋಷಣೆ: ತಾಲಿಬಾನ್ ಹೊಡೆತಕ್ಕೆ 55 ಪಾಕ್ ಸೈನಿಕರು ಬಲಿ; ‘ಆಪರೇಷನ್ ಘಜಬ್ ಲಿಲ್ ಹಕ್’ ಆರಂಭಿಸಿದ ಪಾಕಿಸ್ತಾನ!

27/02/2026 11:45 AM

BIG NEWS : ನೌಕರರನ್ನ ವಜಾಗೊಳಿಸೋ ಮುನ್ನ ವಿಚಾರಣೆ ಕಡ್ಡಾಯ : ಹೈಕೋರ್ಟ್ ತೀರ್ಪು

27/02/2026 11:41 AM

ನೀವು ಕೋಟ್ಯಧಿಪತಿಯಾಗಬೇಕೇ? ಯಶಸ್ಸಿನತ್ತ ನಿಮ್ಮನ್ನು ಮುನ್ನಡೆಸಲಿವೆ ಚಾಣಕ್ಯನ ಈ 7 ರಹಸ್ಯ ಸೂತ್ರಗಳು !

27/02/2026 11:35 AM

ನಾನು ಪ್ರಾಮಾಣಿಕ, ಆಪ್ ಪಕ್ಷವನ್ನು ಮುಗಿಸಲು ಸಂಚು ರೂಪಿಸಿದ್ದರು : ಕೋರ್ಟ್ ತೀರ್ಪಿನ ಬೆನ್ನಲ್ಲೆ, ಕಣ್ಣೀರಿಟ್ಟ ಕೇಜ್ರಿವಾಲ್

27/02/2026 11:32 AM
State News
KARNATAKA

BIG NEWS : ನೌಕರರನ್ನ ವಜಾಗೊಳಿಸೋ ಮುನ್ನ ವಿಚಾರಣೆ ಕಡ್ಡಾಯ : ಹೈಕೋರ್ಟ್ ತೀರ್ಪು

By kannadanewsnow0527/02/2026 11:41 AM KARNATAKA 1 Min Read

ಧಾರವಾಡ : ಸಾರಿಗೆ ಬಸ್ ನೌಕರನ ಪ್ರಕರಣ ಒಂದರಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಒಂದನ್ನು ನೀಡಿದ್ದು, ನೌಕರನ ಮೇಲೆ…

ನೀವು ಕೋಟ್ಯಧಿಪತಿಯಾಗಬೇಕೇ? ಯಶಸ್ಸಿನತ್ತ ನಿಮ್ಮನ್ನು ಮುನ್ನಡೆಸಲಿವೆ ಚಾಣಕ್ಯನ ಈ 7 ರಹಸ್ಯ ಸೂತ್ರಗಳು !

27/02/2026 11:35 AM

90 ದಿನಗಳ ‘ಚಿನ್ನದ’ ಬೆಳೆ: ಜೀರಿಗೆ ಕೃಷಿಯಿಂದ ಗಳಿಸಿ ಲಕ್ಷಾಂತರ ರೂಪಾಯಿ ಆದಾಯ!

27/02/2026 11:13 AM

ಹೆಂಡತಿ ನಿತ್ಯ ಈ ಪೂಜೆ ಮಾಡಿದರೆ ಗಂಡನ ಕೆಲಸ, ವ್ಯಾಪಾರ, ಆರ್ಥಿಕ ಸಮಸ್ಯೆಗಳು ಬೇಗನೇ ಪರಿಹಾರವಾಗುತ್ತದೆ.

27/02/2026 11:11 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.