ಬೆಂಗಳೂರು : ಬೆಂಗಳೂರಲ್ಲಿ ಪಾಸ್ ಪೋರ್ಟ್ ವೆರಿಫಿಕೇಶನ್ ಗೆ ಇದೀಗ ಹೊಸ ನಿಯಮ ಜಾರಿ ಮಾಡಲಾಗಿದೆ. ಬೆಂಗಳೂರು ಡಿಜಿ & ಐಜಿಪಿ ಸೂಚನೆಯಂತೆ ಸಿಲಿಕಾನ್ ಸಿಟಿಯಲ್ಲಿ ಪಾಸ್ಪೋರ್ಟ್ ವೆರಿಫಿಕೇಶನ್ಗೆ ಹೊಸ ನಿಯಮ ಜಾರಿಗೆ ತರಲಾಗಿದೆ.
ಹೌದು ಈ ಕುರಿತು ಡಿಜಿ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದು, ಪಾಸ್ಪೋರ್ಟ್ ಪರಿಶೀಲನೆಗೆ ವೇಳೆ ಬಾಡಿ ವೋರ್ನ್ ಕ್ಯಾಮೆರಾ ಕಡ್ಡಾಯವಾಗಿರಬೇಕು. ಪಾಸ್ಪೋರ್ಟ್ ಅರ್ಜಿದಾರರನ್ನು ಪೊಲೀಸ್ ಠಾಣೆಗೆ ಕರೆಸಬಾರದು.
ಬದಲಿಗೆ ಅಧಿಕಾರಿಗಳು ಅರ್ಜಿದಾರರು ನೀಡಿರುವ ವಿಳಾಸಕ್ಕೆ ಕಡ್ಡಾಯವಾಗಿ ಭೇಟಿ ನೀಡಿ, ನೆರೆಹೊರೆಯವರಿಂದ ಮಾಹಿತಿ ಸಂಗ್ರಹಿಸಬೇಕು. ಅರ್ಜಿದಾರರ ವಿಳಾಸಕ್ಕೆ ಭೇಟಿ ನೀಡುವ ಕನಿಷ್ಠ 24 ಗಂಟೆಗಳ ಮೊದಲು ಎಸ್ಎಂಎಸ್ ಅಥವಾ ಕರೆ ಮಾಡುವ ಮೂಲಕ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೊರಡಿಸಿರುವ ಹೊಸ ಮಾರ್ಗಸೂಚಿಗಳ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:
1. ಬಾಡಿ-ವೋರ್ನ್ ಕ್ಯಾಮೆರಾ (Body-worn Camera) ಕಡ್ಡಾಯ
ಪರಿಶೀಲನೆಗೆ ಬರುವ ಪೊಲೀಸ್ ಅಧಿಕಾರಿಗಳು ಕಡ್ಡಾಯವಾಗಿ ಬಾಡಿ-ವೋರ್ನ್ ಕ್ಯಾಮೆರಾ ಧರಿಸಿರಬೇಕು. ಪರಿಶೀಲನೆ ಪ್ರಕ್ರಿಯೆ ಆರಂಭವಾದಾಗಿನಿಂದ ಮುಗಿಯುವವರೆಗೆ ಇದನ್ನು ಆನ್ ಮಾಡಿರಬೇಕು. ಇದು ಭ್ರಷ್ಟಾಚಾರ ತಡೆಯಲು ಮತ್ತು ಪ್ರಕ್ರಿಯೆಯನ್ನು ರೆಕಾರ್ಡ್ ಮಾಡಲು ಸಹಕಾರಿ.
2. ಪೊಲೀಸ್ ಠಾಣೆಗೆ ಹೋಗುವಂತಿಲ್ಲ
ಇನ್ಮುಂದೆ ವೆರಿಫಿಕೇಶನ್ಗಾಗಿ ಅರ್ಜಿದಾರರನ್ನು ಯಾವುದೇ ಕಾರಣಕ್ಕೂ ಪೊಲೀಸ್ ಠಾಣೆಗೆ ಕರೆಸುವಂತಿಲ್ಲ. ಅಧಿಕಾರಿಗಳೇ ಅರ್ಜಿದಾರರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.
3. ಮುನ್ಸೂಚನೆ ನೀಡುವುದು ಕಡ್ಡಾಯ
ಪೊಲೀಸರು ಮನೆಗೆ ಬರುವ ಕನಿಷ್ಠ 24 ಗಂಟೆಗಳ ಮೊದಲು ಅರ್ಜಿದಾರರಿಗೆ ಎಸ್ಎಂಎಸ್ (SMS) ಅಥವಾ ಕರೆ ಮಾಡುವ ಮೂಲಕ ಭೇಟಿಯ ಸಮಯವನ್ನು ತಿಳಿಸಬೇಕು.
4. ಸ್ಥಳೀಯರ ವಿಚಾರಣೆ
ಅಧಿಕಾರಿಗಳು ಕೇವಲ ದಾಖಲೆ ನೋಡುವುದು ಮಾತ್ರವಲ್ಲದೆ, ಅರ್ಜಿದಾರರು ನೀಡಿರುವ ವಿಳಾಸದಲ್ಲಿ ವಾಸವಿದ್ದಾರೆಯೇ ಎಂದು ತಿಳಿಯಲು ನೆರೆಹೊರೆಯವರಿಂದಲೂ ಮಾಹಿತಿ ಪಡೆಯಬೇಕು.
5. ಲಂಚ ಮತ್ತು ವಿಳಂಬಕ್ಕೆ ಬ್ರೇಕ್
-
ಅರ್ಜಿದಾರರಿಂದ ಯಾವುದೇ ರೀತಿಯ ಹಣ ಅಥವಾ ಆಮಿಷಗಳನ್ನು ನಿರೀಕ್ಷಿಸಬಾರದು.
-
ಕಾರಣವಿಲ್ಲದೆ ವರದಿ ನೀಡಲು ವಿಳಂಬ ಮಾಡುವಂತಿಲ್ಲ.
-
ಒಂದು ವೇಳೆ ‘ಪ್ರತಿಕೂಲ’ (Adverse) ವರದಿ ನೀಡಬೇಕಾದಲ್ಲಿ, ಅದಕ್ಕೆ ಸರಿಯಾದ ಪುರಾವೆಗಳನ್ನು ಅಧಿಕಾರಿಗಳು ಒದಗಿಸಬೇಕು.
6. ಮೇಲ್ವಿಚಾರಣೆ
ಈ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿವೆಯೇ ಎಂದು ಆಯಾ ವಿಭಾಗದ ಡಿಸಿಪಿ (DCP) ಅವರು ವಾರಕ್ಕೊಮ್ಮೆ ವರದಿ ಸಲ್ಲಿಸಬೇಕು. ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.








