Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಲ್ಲಿ ಮಹಿಳೆ ಜೊತೆ ವೃದ್ಧ ಅಸಭ್ಯ ವರ್ತನೆ : ಆರೋಪಿ ಅರೆಸ್ಟ್!

BREAKING : ಕೇರಳದಲ್ಲಿ ‘ಶಿಗೆಲ್ಲ ವೈರಸ್’ ಗೆ 4 ವರ್ಷದ ಹೆಣ್ಣು ಮಗು ಬಲಿ : 21 ಜನರಲ್ಲಿ ಸೋಂಕು ದೃಢ | Shigella Virus

Fact Check: ​ಪ್ಲಾಸ್ಟಿಕ್ ನೋಟುಗಳ ಜಾರಿ ಎಂಬುದು ಸುಳ್ಳು ಸುದ್ದಿ: RBI ಮತ್ತು PIB ಸ್ಪಷ್ಟನೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING: ಕರ್ನಾಟಕದಲ್ಲಿ ಕಳೆದ 6 ವರ್ಷಗಳಲ್ಲಿ 14,878 ಮಕ್ಕಳ ಅಪಹರಣ: ಬೆಂಗಳೂರಲ್ಲೇ ಹೆಚ್ಚು !
KARNATAKA

SHOCKING: ಕರ್ನಾಟಕದಲ್ಲಿ ಕಳೆದ 6 ವರ್ಷಗಳಲ್ಲಿ 14,878 ಮಕ್ಕಳ ಅಪಹರಣ: ಬೆಂಗಳೂರಲ್ಲೇ ಹೆಚ್ಚು !

By kannadanewsnow57

ಬೆಂಗಳೂರು: ರಾಜ್ಯದಲ್ಲಿ ಕಳೆದ 6 ವರ್ಷಗಳಲ್ಲಿ 14,878 ಮಕ್ಕಳನ್ನು ಅಪಹರಣ ಮಾಡಿರುವಂತ ಶಾಕಿಂಗ್ ಮಾಹಿತಿಯು ವರದಿಯಿಂದ ಬಹಿರಂಗಗೊಂಡಿದೆ.

ಈ ಬಗ್ಗೆ ರಾಜ್ಯದ ಸರ್ಕಾರಿ ಅಂಕಿ ಅಂಶಗಳಿಂದ ಮಾಹಿತಿ ಬಹಿರಂಗಗೊಂಡಿದ್ದು, ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಮಕ್ಕಳು ಅಪಹರಣಗೊಂಡಿದ್ದಾರೆ. ಬೆಂಗಳೂರು ನಗರ ಒಂದರಲ್ಲೇ 4,849 ಮಕ್ಕಳು ಕಿಡ್ನ್ಯಾಪ್ ಮಾಡಿದ್ದಾರೆ. ಹಿಂದಿನ ಬಿಜೆಪಿ ಅವಧಿಯಲ್ಲೂ ಸಾವಿರಾರು ಮಕ್ಕಳ ಅಪಹರಣ ಉಂಟಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಇತ್ತೀಚೆಗೆ ಬೆಂಗಳೂರಲ್ಲಿ ಮಾಸ್ಕ್ ಮ್ಯಾನ್ ಓಡಾಟ ಹೆಚ್ಚಿರುವ ಹಿನ್ನಲೆ ಸಿಲಿಕಾನ್ ಸಿಟಿ ಪೋಷಕರಿಗೆ ಬೆಚ್ಚಿ ಬೀಳಿಸುವಂತ ಸುದ್ದಿ ಬಹಿರಂಗಗೊಂಡಿದೆ. ರಾಜ್ಯದಲ್ಲಿ ಕಳೆದ 6 ವರ್ಷಗಳಲ್ಲಿ 14,878 ಮಕ್ಕಳು ಅಪಹರಣವಾಗಿದ್ದಾವೆ. 2020-25ರ ಜುಲೈ ತನಕ 14,878 ಮಕ್ಕಳನ್ನು ಅಪಹರಿಸಲಾಗಿದೆ.

ಕಿಡ್ನ್ಯಾಪ್ ಆದ ಕೆಲ ಮಕ್ಕಳು ಏನಾದವು ಅನ್ನೋದೇ ನಿಗೂಢವಾಗಿದೆ. ಕಣ್ಮರೆಯಾದ ಕೆಲ ಮಕ್ಕಳ ಬಗ್ಗೆ ಯಾವುದೇ ಮಾಹಿತಿಯೇ ಈವರೆಗೂ ಸಿಕ್ಕಿಲ್ಲ. 10,792 ಅಪ್ರಾಪ್ತರು ಕಿಡ್ನ್ಯಾಪ್ ಆಗಿದ್ದರೇ, 4,086 ಬಾಲಕರ ಅಪರಣವಾಗಿದೆ. ಅಪಹಣಕ್ಕೊಳಗಾದಂತ 10,792 ಅಪ್ರಾಪ್ತೆಯರಲ್ಲಿ 9,789 ಮಂದಿ ಮಾತ್ರವೇ ಪತ್ತೆಯಾಗಿದ್ದಾರೆ. ಇನ್ನುಳಿದವರ ಬಗ್ಗೆ ಮಾಹಿತಿಯೇ ಇಲ್ಲ.

ಅಪಹರಣಕ್ಕೊಳಗಾದ 4,086 ಬಾಲಕರಲ್ಲಿ 3,753 ಮಂದಿ ಮಾತ್ರ ಪತ್ತೆಯಾಗಿದ್ದರೇ, ಉಳಿದವರು ಕಣ್ಮರೆಯಾಗಿದ್ದಾರೆ. ಒಟ್ಟಾರೆ 14,878 ಕಿಡ್ನ್ಯಾಪ್ ಆದವರಲ್ಲಿ ಕೇವಲ 13,542 ಮಕ್ಕಳು ಮಾತ್ರವೇ ಪತ್ತೆಯಾಗಿದ್ದಾರೆ. 1,336 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಯಾವುದೇ ಮಾಹಿತಿಯೂ ಸಿಕ್ಕಿಲ್ಲ.

ಮಕ್ಕಳ ಅಪಹರಣ ತಡೆಗೆ ಪೋಷಕರು ವಹಿಸಬೇಕಾದ ಮುನ್ನೆಚ್ಚರಿಕೆಗಳಿವು

ಇತ್ತೀಚಿನ ದಿನಗಳಲ್ಲಿ ಮಕ್ಕಳ ಅಪಹರಣದ ವದಂತಿಗಳು ಮತ್ತು ಘಟನೆಗಳು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿವೆ. ಅಪರಿಚಿತರ ಕೈಗೆ ಮಕ್ಕಳು ಸಿಲುಕದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಪೋಷಕರ ಮತ್ತು ನಾಗರಿಕರ ಜವಾಬ್ದಾರಿಯಾಗಿದೆ. ಈ ಕುರಿತು ಜಾಗೃತಿ ಮೂಡಿಸಲು ಕೆಲವು ಮುಖ್ಯ ಅಂಶಗಳು ಇಲ್ಲಿವೆ:

1. ಮಕ್ಕಳಿಗೆ ‘ಅಪರಿಚಿತರ’ ಬಗ್ಗೆ ತಿಳಿಹೇಳಿ
ಮಕ್ಕಳಿಗೆ ಯಾರಾದರೂ ಅಪರಿಚಿತರು ಚಾಕೊಲೇಟ್, ಆಟಿಕೆ ಅಥವಾ ಹಣದ ಆಮಿಷ ಒಡ್ಡಿದರೆ ಅದನ್ನು ಸ್ವೀಕರಿಸಬಾರದು ಎಂದು ಕಟ್ಟುನಿಟ್ಟಾಗಿ ಕಲಿಸಿಕೊಡಿ. “ನಾನು ನಿಮ್ಮ ಅಪ್ಪ/ಅಮ್ಮನ ಸ್ನೇಹಿತ” ಎಂದು ಹೇಳುವವರನ್ನು ನಂಬಬಾರದು ಎಂದು ತಿಳಿಸಿ.

2. ವೈಯಕ್ತಿಕ ಮಾಹಿತಿ ಗೌಪ್ಯವಾಗಿರಲಿ
ಮಕ್ಕಳ ಶಾಲಾ ಬ್ಯಾಗ್ ಅಥವಾ ನೀರಿನ ಬಾಟಲಿಗಳ ಮೇಲೆ ಅವರ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಬರೆಯಬೇಡಿ. ಅಪರಿಚಿತರು ಆ ಹೆಸರನ್ನು ಕೂಗಿ ಕರೆದಾಗ ಮಕ್ಕಳು ಅವರು ಪರಿಚಯದವರು ಎಂದು ನಂಬುವ ಸಾಧ್ಯತೆ ಇರುತ್ತದೆ.

3. ತುರ್ತು ಸಂಪರ್ಕ ಸಂಖ್ಯೆಗಳು
ಮಕ್ಕಳಿಗೆ ತಮ್ಮ ಪೋಷಕರ ಫೋನ್ ಸಂಖ್ಯೆ ಮತ್ತು ಮನೆಯ ವಿಳಾಸವನ್ನು ನೆನಪಿಟ್ಟುಕೊಳ್ಳುವಂತೆ ಮಾಡಿ. ತುರ್ತು ಸಂದರ್ಭದಲ್ಲಿ ‘112’ (Help Line) ಸಂಖ್ಯೆಗೆ ಕರೆ ಮಾಡಲು ಅಥವಾ ಹತ್ತಿರದ ಪೊಲೀಸ್ ಸಿಬ್ಬಂದಿಯ ಸಹಾಯ ಪಡೆಯಲು ಕಲಿಸಿ.

4. ಶಾಲಾ ವಾಹನ ಮತ್ತು ಸುರಕ್ಷತೆ
ಮಕ್ಕಳನ್ನು ಶಾಲೆಗೆ ಬಿಡುವಾಗ ಮತ್ತು ಕರೆತರುವಾಗ ಅಧಿಕೃತ ವಾಹನಗಳನ್ನೇ ಬಳಸಿ. ಶಾಲೆಯಿಂದ ಮಗುವನ್ನು ಕರೆತರಲು ಪೋಷಕರನ್ನು ಬಿಟ್ಟು ಬೇರೆ ಯಾರಾದರೂ ಬರುವುದಿದ್ದರೆ, ಆ ಮೊದಲೇ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿ.

5. ಕಿರುಚಲು ಹಿಂಜರಿಯಬೇಡಿ
ಯಾರಾದರೂ ಬಲವಂತವಾಗಿ ಎಳೆದೊಯ್ಯಲು ಪ್ರಯತ್ನಿಸಿದರೆ ಜೋರಾಗಿ ಕಿರುಚಲು (Help! ಇವರು ನನ್ನ ತಂದೆ/ತಾಯಿ ಅಲ್ಲ!) ಮಕ್ಕಳಿಗೆ ಧೈರ್ಯ ತುಂಬಿ. ಇದು ಸುತ್ತಮುತ್ತಲಿನವರ ಗಮನ ಸೆಳೆಯಲು ಸಹಾಯ ಮಾಡುತ್ತದೆ.

SHOCKING: 14878 children kidnapped in Karnataka in the last 6 years: Most in Bengaluru!
Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ಮಹಿಳೆ ಜೊತೆ ವೃದ್ಧ ಅಸಭ್ಯ ವರ್ತನೆ : ಆರೋಪಿ ಅರೆಸ್ಟ್!

1 Min Read

SHOCKING : ಉತ್ತರಕನ್ನಡದಲ್ಲಿ ಆಝಾನ್ ಕೊಡುತ್ತಿದ್ದ ವೇಳೆಯೆ ಹೃದಯಾಘಾತದಿಂದ ಧರ್ಮಗುರು ನಿಧನ | Watch Video

1 Min Read

ಇನ್ಮುಂದೆ UPIನಲ್ಲೇ ಸಿಗುತ್ತೆ ಸಾಲ: ನಿಮ್ಮ ಮೊಬೈಲ್‌ ನಲ್ಲೇ ಆಕ್ಟಿವೇಟ್ ಆಗಲಿದೆ ‘ಮಿನಿ ಕ್ರೆಡಿಟ್ ಕಾರ್ಡ್’!

2 Mins Read
Recent News

BREAKING : ಬೆಂಗಳೂರಲ್ಲಿ ಮಹಿಳೆ ಜೊತೆ ವೃದ್ಧ ಅಸಭ್ಯ ವರ್ತನೆ : ಆರೋಪಿ ಅರೆಸ್ಟ್!

BREAKING : ಕೇರಳದಲ್ಲಿ ‘ಶಿಗೆಲ್ಲ ವೈರಸ್’ ಗೆ 4 ವರ್ಷದ ಹೆಣ್ಣು ಮಗು ಬಲಿ : 21 ಜನರಲ್ಲಿ ಸೋಂಕು ದೃಢ | Shigella Virus

Fact Check: ​ಪ್ಲಾಸ್ಟಿಕ್ ನೋಟುಗಳ ಜಾರಿ ಎಂಬುದು ಸುಳ್ಳು ಸುದ್ದಿ: RBI ಮತ್ತು PIB ಸ್ಪಷ್ಟನೆ

SHOCKING : ಉತ್ತರಕನ್ನಡದಲ್ಲಿ ಆಝಾನ್ ಕೊಡುತ್ತಿದ್ದ ವೇಳೆಯೆ ಹೃದಯಾಘಾತದಿಂದ ಧರ್ಮಗುರು ನಿಧನ | Watch Video

State News
KARNATAKA

BREAKING : ಬೆಂಗಳೂರಲ್ಲಿ ಮಹಿಳೆ ಜೊತೆ ವೃದ್ಧ ಅಸಭ್ಯ ವರ್ತನೆ : ಆರೋಪಿ ಅರೆಸ್ಟ್!

By ಸುರೇಶ್‌ KARNATAKA 1 Min Read

ಬೆಂಗಳೂರು : ಬೆಂಗಳೂರಲ್ಲಿ ಮಹಿಳೆಯ ಜೊತೆಗೆ ವೃದ್ಧನೊಬ್ಬ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ. ಪಕ್ಕದ ಮನೆಯ ಮನೆಯ ಮಹಿಳೆಗೆ ಕಿರುಕುಳ ನೀಡಿರುವ…

SHOCKING : ಉತ್ತರಕನ್ನಡದಲ್ಲಿ ಆಝಾನ್ ಕೊಡುತ್ತಿದ್ದ ವೇಳೆಯೆ ಹೃದಯಾಘಾತದಿಂದ ಧರ್ಮಗುರು ನಿಧನ | Watch Video

ಇನ್ಮುಂದೆ UPIನಲ್ಲೇ ಸಿಗುತ್ತೆ ಸಾಲ: ನಿಮ್ಮ ಮೊಬೈಲ್‌ ನಲ್ಲೇ ಆಕ್ಟಿವೇಟ್ ಆಗಲಿದೆ ‘ಮಿನಿ ಕ್ರೆಡಿಟ್ ಕಾರ್ಡ್’!

ಗಮನಿಸಿ : `ಆಧಾರ್ ಕಾರ್ಡ್‌’ನಲ್ಲಿ ನಿಮ್ಮ ಹಳೆಯ ಫೋಟೋ ಬದಲಾಯಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.