ತುಮಕೂರು : ಕೋತಿ ಅಡ್ಡ ಬಂದ ಪರಿಣಾಮ ಸಡನ್ ಆಗಿ ಬ್ರೇಕ್ ಹಾಕಿದಕ್ಕೆ ಆಟೋ ಪಲ್ಟಿಯಾಗಿದೆ ಪಲ್ಟಿಯಾದ ಆಟೋಗೆ ಕಾರು ಡಿಕ್ಕಿ ಹೊಡೆದು ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆಯ ಜಂಪೇನಹಳ್ಳಿ, ಕೆರೆಯ ಬಳಿ ಈ ಒಂದು ಅಪಘಾತ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಮಹೇಂದ್ರ ಕುಮಾರ್ ಎಂದು ತಿಳಿದುಬಂದಿದೆ . ರಸ್ತೆಯಲ್ಲಿ ಕೋತಿ ಏಕಾಎಕಿ ಅಡ್ಡ ಬಂದಿದೆ. ಈ ವೇಳೆ ಮಹೇಂದ್ರ ಕುಮಾರ್ ಸಡನ್ ಆಗಿ ಬ್ರೇಕ್ ಹೊಡೆದಾಗ ಆಟೋ ಪಲ್ಟಿ ಆಗಿದೆ. ಆಗ ಎದುರುಗಡೆ ಬರುತ್ತಿದ್ದ ಕಾರು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮಹೇಂದ್ರ ಕುಮಾರ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಈ ಕುರಿತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.








