ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಬಿಬಿಎಂಪಿ ನಿವೃತ್ತ ಇಂಜಿನಿಯರ್ ಪರಮೇಶ್ವರಯ್ಯ (63) ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಕೋರಮಂಗಲದ ಮನೆಯಲ್ಲಿ ಈ ಒಂದು ಆತ್ಮಹತ್ಯೆ ಘಟನೆ ನಡೆದಿದೆ.
ಬಿಬಿಎಂಪಿ ನಿವೃತ್ತ ನೌಕರ ಪರಮೇಶ್ವರಯ್ಯ ಅವರು ಮಾನಸಿಕವಾಗಿ ಕುಗ್ಗಿಹೋಗಿದ್ದು ಹಾಗೂ ಚಿಕಿತ್ಸೆ ಸಹ ಪಡೆಯುತ್ತಿದ್ದರು. ಬಿಬಿಎಂಪಿ ಮಹದೇವಪುರ ವ್ಯಾಪ್ತಿಯ ಮುಖ್ಯ ಇಂಜಿನಿಯರ್ ಆಗಿದ್ದ ಪರಮೇಶ್ವರ ಸಿಬಿಐ ತನಿಖೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. 2021 ರಲ್ಲಿ ಗುತ್ತಿಗೆದಾರ ಅನಿಲ್ ನಿವಾಸದ ಮೇಲೆ ಐಟಿ ದಾಳಿ ಮಾಡಿತ್ತು. ಬಿಬಿಎಂಪಿ ಗುತ್ತಿಗೆದಾರ ಅನಿಲ್ ನಿವಾಸದಲ್ಲಿ ಸೂಟ್ಕೇಸ್ ನಲ್ಲಿ ಮೂರು ಲಾಕ್ ಪತ್ತೆಯಾಗಿತ್ತು.
ಅದರಲ್ಲಿ 1.35 ಲಕ್ಷ ನಗದು ಹಣ 275.98 ಗ್ರಾಂ ಚಿನ್ನಾಭರಣ ಪತ್ತೆಯಾಗಿತ್ತು. ಅಲ್ಲದೆ ಹಲವು ಜಮೀನು ಮತ್ತು ಸೈಟ್ ದಾಖಲಾತಿ ಪತ್ತೆಯಾಗಿದ್ದವು. ಇದೆಲ್ಲವೂ ಪರಮೇಶ್ವರ್ ಗೆ ಸೇರಿದ್ದು ಅಂತ ಅನಿಲ್ ಕುಮಾರ್ ಹೇಳಿದ್ದರು. 2021ರ ಡಿಸೆಂಬರ್ 4ರಂದು ಪರಮೇಶ್ವರಯ್ಯ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು ಈ ವೇಳೆ ಸೂಟ್ಕೇಸ್ ತನ್ನದೇ ಎಂದು ಪರಮೇಶ್ವರಯ್ಯ ಒಪ್ಪಿಕೊಂಡಿದ್ದರು. 2021 ಡಿಸೆಂಬರ್ 6ರಂದು ಐಟಿ ಅಧಿಕಾರಿಗಳು ಬ್ಯಾಂಕ್ ಪರಿಶೀಲನೆ ಮಾಡಿದ್ದರು ಬ್ಯಾಂಕ್ ಲಾಕರ್ ಗಳಲ್ಲಿ 86.35 ಲಕ್ಷ ನಗದು ಹಣ ಸಹ ಪತ್ತೆಯಾಗಿತ್ತು.
ಲಾಕರ್ ಜಿ ಕಿಶೋರ್ ನಾಯ್ಡು ಎಂಬುವರ ಹೆಸರಿನಲ್ಲಿ ಇದ್ದು ಲಾಕರ್ ಕಿ ಪರಮೇಶ್ವರಯ್ಯ ಪತ್ನಿ ಮಹಾಲಕ್ಷ್ಮಿ ಹೆಸರಿನಲ್ಲಿತ್ತು. ಆದರೆ ಹಣದ ವಿವರ ಪರಮೇಶ್ವರಯ್ಯ ನೀಡಿರಲಿಲ್ಲ 2012ರಲ್ಲಿ ಪರಮೇಶ್ವರಯ್ಯ ಆಸ್ತಿ ಮೌಲ್ಯ 29.64 ಲಕ್ಷ ಇತ್ತು 2021 ರಲ್ಲಿ ಪರಮೇಶ್ವರ ಆಸ್ತಿ ಮೌಲ್ಯ 5.85 ಕೋಟಿಗೆ ಹೆಚ್ಚಳವಾಗಿತ್ತು. ಬೆಂಗಳೂರು ತುಮಕೂರಿನಲ್ಲಿ ನಿವೇಶನ, ಕೋರಮಂಗಲದಲ್ಲಿ ಸೈಟ್ ಮತ್ತು ಮನೆ ಹೊಂದಿದ್ದರು. ಅಪಾರ್ಟ್ಮೆಂಟ್ ಸಹ ಹೊಂದಿದ್ದರು.ಪರಮೇಶ್ವರಯ್ಯ ಭ್ರಷ್ಟಾಚಾರ ನಡೆಸಿರುವುದು ಪತ್ತೆಯಾಗಿದೆ. ಹೀಗಾಗಿ ಸಿಸಿಬಿಯಲ್ಲಿ 2026 ಜನವರಿ 31 ಇದರಿಂದ ಪರಮೇಶ್ವರಯ್ಯ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಟ್ಟಿದ್ದಾರೆ ಎಂದು ಅನುಮಾನ ವ್ಯಕ್ತವಾಗಿದೆ. ಕೋರಮಂಗಲ ಠಾಣೆಯಲ್ಲಿ ಈ ಕುರಿತು ಯುಡಿಆರ್ ಪ್ರಕರಣ ದಾಖಲಾಗಿದೆ.








