ಬೆಂಗಳೂರು: ಕಾಸರಗೋಡು ಕೇವಲ ಗಡಿ ಪ್ರದೇಶವಲ್ಲ; ಅದು ಕನ್ನಡ ಹೃದಯಭೂಮಿ. ಇಲ್ಲಿನ ಪ್ರತಿಯೊಬ್ಬ ಕನ್ನಡಿಗನ ಕನಸು ಸಾಕಾರವಾಗುವ ದಿನ ಬರಬೇಕು ಎಂದು ಕಾಸರಗೋಡಿನ ಕನ್ನಡ ಭವನ ಸಂಸ್ಥಾಪಕ ಅಧ್ಯಕ್ಷರಾದ ಡಾ. ವಾಮನರಾವ್ ರಾವ್ ಬೇಕಲ್ ಆಶಯ ವ್ಯಕ್ತಪಡಿಸಿದರು.
ಕನ್ನಡ ಭವನದ ರಜತ ಸಂಭ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಕನ್ನಡಿಗರ ಏಕತೆ ಮತ್ತು ಸಂಕಲ್ಪವೇ ಕಾಸರಗೋಡಿನ ಭವಿಷ್ಯವನ್ನು ರೂಪಿಸಲಿದೆ. ಜೊತೆಗೆ ಗಡಿ ಪ್ರದೇಶದ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಮತ್ತು ಕೇರಳ ಸರ್ಕಾರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಸಾಹಿತಿ ಗೊರೂರು ಪಂಕಜ ಅವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯಾದ ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್- 2026 ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಾಹಿತಿ ರಾಧಾಕೃಷ್ಣ ಕೆ. ಉಳಿಯತಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಎಡನೀರು ಮಠದ ರಮೇಶ್ ಗೋವಿನಾಳ ಮಹಾಸ್ವಾಮಿಜಿ, ಡಾ. ವೆಂಕಟರಮಣ ಹೊಳ್ಳ, ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್, ಪ್ರಕಾಶಕಿ ಸಂಧ್ಯಾರಾಣಿ ಟೀಚರ್, ರಾಧಾಕೃಷ್ಣ ಉಳಿಯತಡ್ಕ, ಡಾ. ಶಾಂತಾ ಪುತ್ತೂರು, ಡಾ. ಕೊಲಚಪ್ಪೆ ಗೋವಿಂದ ಭಟ್, ಕ. ರ. ವೇ ರಾಜ್ಯ ಸಂಚಾಲಕ ವಿಜಯ ಕುಮಾರ್ ಮುಂತಾದವರು ಮಾತನಾಡಿದರು.
ಈ ವೇಳೆ ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೊರೂರು ಪಂಕಜ ಅವರಿಗೆ ಪ್ರತಿಷ್ಠಿತ ರಾಷ್ಟ್ರೀಯ ಕನ್ನಡ ಪಯಸ್ವಿನಿ ಅಚ್ಯುಮೆಂಟ್ ಅವಾರ್ಡ್- 2026 ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಡನೀರು ಮಠದ ರಮೇಶ್ ಗೋವಿನಾಳ ಮಹಾಸ್ವಾಮಿಜಿ, ಡಾ. ವೆಂಕಟರಮಣ ಹೊಳ್ಳ, ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್, ಪ್ರಕಾಶಕಿ ಸಂಧ್ಯಾರಾಣಿ ಟೀಚರ್, ರಾಧಾಕೃಷ್ಣ ಉಳಿಯತಡ್ಕ, ಡಾ. ಶಾಂತಾ ಪುತ್ತೂರು, ಡಾ. ಕೊಲಚಪ್ಪೆ ಗೋವಿಂದ ಭಟ್ ಉಪಸ್ಥಿತರಿದ್ದರು.
BREAKING: ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ವೇಳಾಪಟ್ಟಿ ಪ್ರಕಟ: ಜೂನ್ 14ಕ್ಕೆ ಭಾರತ-ಪಾಕ್ ಹೈವೋಲ್ಟೇಜ್ ಫೈಟ್!








