Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎಟಿಎಂ ಕಾರ್ಡ್ ಮರೆತಿರಾ? ಚಿಂತಿಸಬೇಡಿ, ಆಧಾರ್ ಮೂಲಕ ಹಣ ಪಡೆಯುವ ಸುಲಭ ಹಂತಗಳು ಇಲ್ಲಿವೆ!

24/02/2026 1:17 PM

ನಾನು ಮಂತ್ರಿಯಾಗಿ 36 ವರ್ಷ ಆಯ್ತು, ಶಾಸಕರು ಪತ್ರ ಬರೆದು ಸಚಿವ ಸ್ಥಾನ ಕೇಳಿರುವುದರಲ್ಲಿ ತಪ್ಪೇನಿದೆ? : ಡಿಸಿಎಂ ಡಿಕೆ ಶಿವಕುಮಾರ್

24/02/2026 1:16 PM

ವಿಶ್ವದಲ್ಲೇ ಮೊದಲು: ಹೊಸ ಚಿಕಿತ್ಸೆ ಮೂಲಕ `ಮಧುಮೇಹ’ಕ್ಕೆ ಶಾಶ್ವತ ಪರಿಹಾರ ಕಂಡುಕೊಂಡ ವಿಜ್ಞಾನಿಗಳು !

24/02/2026 1:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ `ಕಾರ್ಮಿಕರಿಗೆ ಗುಡ್ ನ್ಯೂಸ್’ : ಈ ಯೋಜನೆಯಡಿ ಪ್ರತಿ ತಿಂಗಳು ನಿಮಗೆ ಸಿಗಲಿದೆ 3,000 ರೂ. ಪಿಂಚಣಿ !
KARNATAKA

ರಾಜ್ಯದ `ಕಾರ್ಮಿಕರಿಗೆ ಗುಡ್ ನ್ಯೂಸ್’ : ಈ ಯೋಜನೆಯಡಿ ಪ್ರತಿ ತಿಂಗಳು ನಿಮಗೆ ಸಿಗಲಿದೆ 3,000 ರೂ. ಪಿಂಚಣಿ !

By kannadanewsnow5724/02/2026 1:05 PM

ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವೃದ್ಧಾಪ್ಯ, ಮರಣಾ ನಂತರ ಕುಟುಂಬಕ್ಕೆ ಆಸರೆಯಾಗುವ ಪಿಂಚಣಿ ಯೋಜನೆಗಳನ್ನು ನೀಡುತ್ತಿದೆ. 60 ವರ್ಷ ತುಂಬಿದವರಿಗೆ ಮಾಸಿಕ 3000 ರೂ. ಪಿಂಚಣಿ, ಅಂಗವಿಕಲರಿಗೆ 2000 ರೂ. ಹಾಗೂ ಮರಣಾ ನಂತರ ಕುಟುಂಬಕ್ಕೆ 1500 ರೂ. ಪಿಂಚಣಿ ಲಭ್ಯವಿದೆ.

ಶೈಕ್ಷಣಿಕ, ಹೆರಿಗೆ, ಮದುವೆ, ಉಪಕರಣಗಳ ನೆರವೂ ಇದೆ. ನೋಂದಣಿ ಮತ್ತು ನವೀಕರಣಕ್ಕೆ ಅವಕಾಶವಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ರಾಜ್ಯದ ಲಕ್ಷಾಂತರ ಕಾರ್ಮಿಕರ ಹಿತದೃಷ್ಟಿಯಿಂದ ಹಲವಾರು ಆರ್ಥಿಕ ನೆರವಿನ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಮುಖ್ಯವಾಗಿ ವೃದ್ಧಾಪ್ಯದಲ್ಲಿ ಆಸರೆಯಾಗುವ ಮಾಸಿಕ ಪಿಂಚಣಿ ಮತ್ತು ಕಾರ್ಮಿಕರ ಮರಣದ ನಂತರ ಅವರ ಕುಟುಂಬಕ್ಕೆ ಆಸರೆಯಾಗುವ ಕುಟುಂಬ ಪಿಂಚಣಿ ಸೌಲಭ್ಯಗಳು ಸೇರಿವೆ.

ಕುಟುಂಬದಲ್ಲಿ ದುಡಿಯುವ ವ್ಯಕ್ತಿಗೆ 60 ವರ್ಷಗಳು ತುಂಬಿದ ಸಂದರ್ಭದಲ್ಲಿ ಮಾಸಿಕ ಪಿಂಚಣಿ ಸೌಲಭ್ಯ ದೊರೆಯಲಿದೆ. ಒಂದು ವೇಳೆ ಕುಟುಂಬದಲ್ಲಿ ದುಡಿಯುವ ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ ಕುಟುಂಬದ ನಿರ್ವಹಣೆಗೆ ಪಿಂಚಣಿ ನೀಡಲಾಗುತ್ತದೆ. ಇದರ ಜೊತೆಗೆ ಇನ್ನಿತರ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಕುರಿತ ವಿವರಗಳು ಇಲ್ಲಿವೆ.

ಏನಿದು ಕಟ್ಟಡ ಕಾರ್ಮಿಕರ ಪಿಂಚಣಿ ಯೋಜನೆ?

ಕರ್ನಾಟಕ ಸರ್ಕಾರವು ಕಟ್ಟಡ ಕಾರ್ಮಿಕರಿಗಾಗಿ ಜಾರಿಗೆ ತಂದಿರುವ ಈ ಯೋಜನೆಯನ್ನು “ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪಿಂಚಣಿ ಮತ್ತು ಕಲ್ಯಾಣ ಯೋಜನೆ” ಎಂದು ಕರೆಯಲಾಗುತ್ತದೆ. ಈ ಯೋಜನೆಯಡಿ, ಮಂಡಳಿಯಲ್ಲಿ ನೋಂದಾಯಿತರಾದ ಕಟ್ಟಡ ಕಾರ್ಮಿಕರು 60 ವರ್ಷ ಪೂರೈಸಿದ ನಂತರ ಮಾಸಿಕ 3,000 ರೂ. ಗಳ ಪಿಂಚಣಿ ಪಡೆಯಬಹುದು ಹಾಗೂ ಅವರ ಮರಣಾನಂತರ ಪತಿ ಅಥವಾ ಪತ್ನಿ 1,500 ರೂ.ಗಳ ಕುಟುಂಬ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.

ಮಾಸಿಕ ಪಿಂಚಣಿ ಸೌಲಭ್ಯ

ಮಾಸಿಕ ಪಿಂಚಣಿ: 60 ವರ್ಷ ಪೂರೈಸಿದ ನೋಂದಾಯಿತ ಫಲಾನುಭವಿಗೆ ಪ್ರತಿ ತಿಂಗಳು 3,000 ರೂ. ಗಳ ಪಿಂಚಣಿ ನೀಡಲಾಗುತ್ತದೆ.

ದುರ್ಬಲತೆ ಪಿಂಚಣಿ: ಒಂದು ವೇಳೆ ಕಾರ್ಮಿಕರು ಕಾಯಿಲೆ ಅಥವಾ ಅಪಘಾತದಿಂದ ಶಾಶ್ವತ ಅಥವಾ ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ 2,000 ರೂ. ಪಿಂಚಣಿ ನೀಡಲಾಗುತ್ತದೆ. ಇದರ ಜೊತೆಗೆ ಅಂಗವಿಕಲತೆಯ ತೀವ್ರತೆಯ ಆಧಾರದ ಮೇಲೆ 2,00,000 ರೂ. ವರೆಗೆ ಅನುಗ್ರಹ ರಾಶಿ ಸಹಾಯಧನ ದೊರೆಯುತ್ತದೆ.

ಕುಟುಂಬ ಪಿಂಚಣಿ ಮತ್ತು ಮರಣ ಸೌಲಭ್ಯಗಳು

ಕುಟುಂಬ ಪಿಂಚಣಿ: ಮೃತ ಕಾರ್ಮಿಕನು ಪಡೆಯುತ್ತಿದ್ದ ಪಿಂಚಣಿಯ ಅರ್ಧದಷ್ಟು ಅಂದರೆ ಮಾಸಿಕ 1,500 ರೂ. ಮೊತ್ತವನ್ನು ಅವರ ಪತಿ ಅಥವಾ ಪತ್ನಿ ಪಡೆಯಲು ಅರ್ಹರಿರುತ್ತಾರೆ.

ಅಂತ್ಯಕ್ರಿಯೆ ವೆಚ್ಚ: ಕಾರ್ಮಿಕರ ಮರಣದ ನಂತರ ಅಂತ್ಯಕ್ರಿಯೆಗಾಗಿ 4,000 ರೂ.ಮತ್ತು 71,000 ರೂ. ವರೆಗೆ ಅನುಗ್ರಹ ರಾಶಿ ಸಹಾಯಧನ ನೀಡಲಾಗುತ್ತದೆ.

ನೋಂದಾಯಿಸದ ಕಾರ್ಮಿಕರಿಗೆ: ನೋಂದಾಯಿಸದ ಕಾರ್ಮಿಕರು ಮೃತಪಟ್ಟರೂ ಅವರ ಅವಲಂಬಿತರಿಗೆ ಒಂದು ಬಾರಿಯ ನೆರವು ರೂಪದಲ್ಲಿ 50,000 ರೂ. ವರೆಗೆ ಸಹಾಯಧನ ಸಿಗುವ ಸಾಧ್ಯತೆ ಇರುತ್ತದೆ.

ಅರ್ಹತಾ ಮಾನದಂಡಗಳು

ಅರ್ಜಿದಾರರು ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಾಗಿರಬೇಕು.

ಕನಿಷ್ಠ 60 ವರ್ಷ ವಯಸ್ಸಾಗಿರಬೇಕು.

60 ವರ್ಷ ಪೂರ್ಣಗೊಳ್ಳುವ ಮೊದಲು ಕನಿಷ್ಠ 3 ವರ್ಷಗಳ ಕಾಲ ನಿರಂತರವಾಗಿ ಮಂಡಳಿಯ ಫಲಾನುಭವಿಯಾಗಿರಬೇಕು.

ವರ್ಷಕ್ಕೆ ಕನಿಷ್ಠ 90 ದಿನಗಳ ಕಾಲ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿರಬೇಕು.

ಇತರೆ ಪ್ರಮುಖ ಸೌಲಭ್ಯಗಳು

ಶೈಕ್ಷಣಿಕ ಸಹಾಯಧನ (ಕಲಿಕೆ ಭಾಗ್ಯ): ನೋಂದಾಯಿತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಲು, ಮಂಡಳಿಯು ವಾರ್ಷಿಕವಾಗಿ 2,000 ರೂ. ನಿಂದ 30,000 ರೂ. ವರೆಗೆ ಶೈಕ್ಷಣಿಕ ಧನಸಹಾಯವನ್ನು ನೀಡುತ್ತದೆ.

ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್): ಮಹಿಳಾ ಫಲಾನುಭವಿಗಳಿಗೆ ಅವರ ಮೊದಲ ಎರಡು ಮಕ್ಕಳ ಜನನದ ಸಂದರ್ಭದಲ್ಲಿ ಆರ್ಥಿಕ ಭದ್ರತೆಗಾಗಿ ತಲಾ 50,000 ರೂ. ಗಳ ಸಹಾಯಧನವನ್ನು ಒದಗಿಸಲಾಗುತ್ತದೆ.

ಮದುವೆ ಸಹಾಯಧನ: ಕಾರ್ಮಿಕರಿಗೆ ಸ್ವಂತ ಮದುವೆಗಾಗಿ ಅಥವಾ ಅವರ ಇಬ್ಬರು ಮಕ್ಕಳ ವಿವಾಹದ ಖರ್ಚಿಗಾಗಿ ಮಂಡಳಿಯಿಂದ 50,000 ರೂ. ಗಳ ಆರ್ಥಿಕ ನೆರವು ದೊರೆಯುತ್ತದೆ.

ಉಪಕರಣಗಳ ನೆರವು (ಟೂಲ್‌ಕಿಟ್): ಕಾರ್ಮಿಕರ ವೃತ್ತಿ ಕೌಶಲ್ಯವನ್ನು ಹೆಚ್ಚಿಸಲು ಮತ್ತು ಕೆಲಸಕ್ಕೆ ಅಗತ್ಯವಾದ ಆಧುನಿಕ ಉಪಕರಣಗಳನ್ನು ಖರೀದಿಸಲು 20,000 ರೂ. ವರೆಗೆ ಧನಸಹಾಯ ನೀಡಲಾಗುತ್ತದೆ.

ನೋಂದಣಿ ಆಗುವುದು ಹೇಗೆ?

ಮೊದಲಿಗೆ ಮಂಡಳಿಯ ಅಧಿಕೃತ ವೆಬ್‌ಸೈಟ್‌ karbwwb.karnataka.gov.in/ ಗೆ ಭೇಟಿ ನೀಡಿ ಮತ್ತು “Register” ಬಟನ್ ಮೇಲೆ ಕ್ಲಿಕ್ ಮಾಡಿ.

ನಂತರ “Register as New Construction Worker” ಆಯ್ಕೆಯನ್ನು ಆರಿಸಿ, ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಓಟಿಪಿ ಮೂಲಕ ಪರಿಶೀಲಿಸಿ.

ಲಾಗಿನ್ ಆದ ನಂತರ ಡ್ಯಾಶ್‌ಬೋರ್ಡ್‌ನಲ್ಲಿರುವ “Registration” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಕೇಳಲಾದ ಎಲ್ಲಾ ಕಡ್ಡಾಯ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು “Final Submit” ಬಟನ್ ಒತ್ತುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.ಸದಸ್ಯತ್ವ ನವೀಕರಣ ಪ್ರಕ್ರಿಯೆ:

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಲಾಗಿನ್ ಆಗಿ, ಡ್ಯಾಶ್‌ಬೋರ್ಡ್‌ನಲ್ಲಿರುವ “Renewal” ಆಯ್ಕೆಯನ್ನು ಆರಿಸಿ.

ಅಗತ್ಯವಿರುವ ಕಡ್ಡಾಯ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ಸಂಬಂಧಿತ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ “Submit” ಬಟನ್ ಕ್ಲಿಕ್ ಮಾಡಿ ನವೀಕರಣ ಪ್ರಕ್ರಿಯೆ ಮುಕ್ತಾಯಗೊಳಿಸಿ.

ಅಗತ್ಯ ದಾಖಲೆಗಳು:

ಮೃತ ಕಾರ್ಮಿಕನ ಮರಣ ಪ್ರಮಾಣ ಪತ್ರ.

ಕಂದಾಯ ಇಲಾಖೆಯಿಂದ ಪಡೆದ ವಾರಸುದಾರರ (ಪತಿ/ಪತ್ನಿ) ಪ್ರಮಾಣ ಪತ್ರ.

ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ಪ್ರತಿ.

ಭಾವಚಿತ್ರ.

ಪ್ರಮುಖ ಸೂಚನೆಗಳು

ನವೀಕರಣದ ಅವಧಿ: ಪ್ರತಿಯೊಬ್ಬ ಕಾರ್ಮಿಕರು ತಮ್ಮ ನೋಂದಣಿಯನ್ನು ಪ್ರತಿ 3 ವರ್ಷಕ್ಕೊಮ್ಮೆ ಕಡ್ಡಾಯವಾಗಿ ನವೀಕರಿಸಬೇಕು.

ಸವಲತ್ತು: ಒಂದು ವೇಳೆ ನಿಗದಿತ ಸಮಯದಲ್ಲಿ ನವೀಕರಿಸದಿದ್ದರೆ, 1 ವರ್ಷದ ಸವಲತ್ತು ಅವಧಿಯನ್ನು ನೀಡಲಾಗುತ್ತದೆ. ಅದರ ನಂತರವೂ ನವೀಕರಿಸದಿದ್ದರೆ ನೋಂದಣಿ ರದ್ದಾಗುತ್ತದೆ.

ಸಹಾಯವಾಣಿ ಸಂಖ್ಯೆ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ , ಕಾರ್ಮಿಕ ಭವನ, ಡೈರಿ ಸರ್ಕಲ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-29. ದೂರವಾಣಿ ಸಂಖ್ಯೆ: 080-29753078

Good news for the state's workers: Under this scheme you will get Rs. 3000 every month. Pension.!
Share. Facebook Twitter LinkedIn WhatsApp Email

Related Posts

ನಾನು ಮಂತ್ರಿಯಾಗಿ 36 ವರ್ಷ ಆಯ್ತು, ಶಾಸಕರು ಪತ್ರ ಬರೆದು ಸಚಿವ ಸ್ಥಾನ ಕೇಳಿರುವುದರಲ್ಲಿ ತಪ್ಪೇನಿದೆ? : ಡಿಸಿಎಂ ಡಿಕೆ ಶಿವಕುಮಾರ್

24/02/2026 1:16 PM1 Min Read

BIG NEWS : 144 ಸೆಕ್ಷನ್ ಜಾರಿಗೊಳಿಸಿ ವನ್ಯ ಜೀವಿ ಸೆರೆ ಕಾರ್ಯಾಚರಣೆ ನಡೆಸಿ: ಅಧಿಕಾರಿಗಳಿಗೆ ಸಚಿವ ಖಂಡ್ರೆ ಸೂಚನೆ

24/02/2026 12:50 PM2 Mins Read

BREAKING : ಶಿವಮೊಗ್ಗದಲ್ಲಿ ‘SSLC’ ವಿದ್ಯಾರ್ಥಿ ಕೊಲೆ ಕೇಸ್ : ರಾಜ್ಯ ಸರ್ಕಾರದಿಂದ ಮೃತ ಸಾಂಕೇತ ಕುಟುಂಬಕ್ಕೆ 15 ಲಕ್ಷ ಪರಿಹಾರ ಘೋಷಣೆ!

24/02/2026 12:28 PM2 Mins Read
Recent News

ಎಟಿಎಂ ಕಾರ್ಡ್ ಮರೆತಿರಾ? ಚಿಂತಿಸಬೇಡಿ, ಆಧಾರ್ ಮೂಲಕ ಹಣ ಪಡೆಯುವ ಸುಲಭ ಹಂತಗಳು ಇಲ್ಲಿವೆ!

24/02/2026 1:17 PM

ನಾನು ಮಂತ್ರಿಯಾಗಿ 36 ವರ್ಷ ಆಯ್ತು, ಶಾಸಕರು ಪತ್ರ ಬರೆದು ಸಚಿವ ಸ್ಥಾನ ಕೇಳಿರುವುದರಲ್ಲಿ ತಪ್ಪೇನಿದೆ? : ಡಿಸಿಎಂ ಡಿಕೆ ಶಿವಕುಮಾರ್

24/02/2026 1:16 PM

ವಿಶ್ವದಲ್ಲೇ ಮೊದಲು: ಹೊಸ ಚಿಕಿತ್ಸೆ ಮೂಲಕ `ಮಧುಮೇಹ’ಕ್ಕೆ ಶಾಶ್ವತ ಪರಿಹಾರ ಕಂಡುಕೊಂಡ ವಿಜ್ಞಾನಿಗಳು !

24/02/2026 1:13 PM

ರಾಜ್ಯದ `ಕಾರ್ಮಿಕರಿಗೆ ಗುಡ್ ನ್ಯೂಸ್’ : ಈ ಯೋಜನೆಯಡಿ ಪ್ರತಿ ತಿಂಗಳು ನಿಮಗೆ ಸಿಗಲಿದೆ 3,000 ರೂ. ಪಿಂಚಣಿ !

24/02/2026 1:05 PM
State News
KARNATAKA

ನಾನು ಮಂತ್ರಿಯಾಗಿ 36 ವರ್ಷ ಆಯ್ತು, ಶಾಸಕರು ಪತ್ರ ಬರೆದು ಸಚಿವ ಸ್ಥಾನ ಕೇಳಿರುವುದರಲ್ಲಿ ತಪ್ಪೇನಿದೆ? : ಡಿಸಿಎಂ ಡಿಕೆ ಶಿವಕುಮಾರ್

By kannadanewsnow0524/02/2026 1:16 PM KARNATAKA 1 Min Read

ಬೆಂಗಳೂರು : ಸಚಿವ ಸಂಪುಟ ಪುನಾರಚನಿಗೆ 31 ಶಾಸಕರು ಕಾಂಗ್ರೆಸ್ ಹೈಕಮಾಂಡ್ಗೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ…

ರಾಜ್ಯದ `ಕಾರ್ಮಿಕರಿಗೆ ಗುಡ್ ನ್ಯೂಸ್’ : ಈ ಯೋಜನೆಯಡಿ ಪ್ರತಿ ತಿಂಗಳು ನಿಮಗೆ ಸಿಗಲಿದೆ 3,000 ರೂ. ಪಿಂಚಣಿ !

24/02/2026 1:05 PM

BIG NEWS : 144 ಸೆಕ್ಷನ್ ಜಾರಿಗೊಳಿಸಿ ವನ್ಯ ಜೀವಿ ಸೆರೆ ಕಾರ್ಯಾಚರಣೆ ನಡೆಸಿ: ಅಧಿಕಾರಿಗಳಿಗೆ ಸಚಿವ ಖಂಡ್ರೆ ಸೂಚನೆ

24/02/2026 12:50 PM

BREAKING : ಶಿವಮೊಗ್ಗದಲ್ಲಿ ‘SSLC’ ವಿದ್ಯಾರ್ಥಿ ಕೊಲೆ ಕೇಸ್ : ರಾಜ್ಯ ಸರ್ಕಾರದಿಂದ ಮೃತ ಸಾಂಕೇತ ಕುಟುಂಬಕ್ಕೆ 15 ಲಕ್ಷ ಪರಿಹಾರ ಘೋಷಣೆ!

24/02/2026 12:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.