ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮನೆಯಲ್ಲಿ ಅಡಗಿದ್ದಂತ ಉಗ್ರನನ್ನು ನುಗ್ಗಿ ಹೊಡೆದು ಉರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದ್ದಾವೆ. ಕಾಶ್ಮೀರದಲ್ಲಿ ಉಗ್ರರು ಅಡಗಿದ್ದಂತ ಮನೆಯನ್ನು ಸ್ಪೋಟಿಸಿದ್ದು, ಈ ಸ್ಪೋಟದಲ್ಲಿ ಮೋಸ್ಟ್ ವಾಂಟೆಡ್ ಸೈಫುಲ್ಲ ಸೇರಿದಂತೆ ಇಬ್ಬರು ಉಗ್ರು ಫಿನಿಶ್ ಆಗಿದ್ದಾರೆ.
ಜಮ್ಮು-ಕಾಶ್ಮೀರದ ಕಿಶ್ತ್ವಾರ್ ನಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದಂತ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಬಲಿಯಾಗಿದ್ದಾರೆ. ಬೆಟ್ಟದ ತಪ್ಪಲಿನಲ್ಲಿರುವ ಮಣ್ಣಿನ ಮನೆಯೊಳಗೆ ಮೋಸ್ಟ್ ವಾಂಟೆಡ್ ಉಗ್ರ ಸೈಪುಲ್ಲ ಸೇರಿದಂತೆ ಇಬ್ಬರು ಅಭಯೋತ್ಪಾದಕರು ಅಡಗಿದ್ದ ವೇಳೆಯಲ್ಲಿ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆಸಿ ಹತ್ಯೆಗೈಯ್ಯಲಾಗಿದೆ.
ಈ ಎನ್ ಕೌಂಟರ್ ನಲ್ಲಿ 2 ಎಕೆ-47 ರೈಫಲ್ ಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದಾವೆ. ಕಾಶ್ಮೀರ ಕಣಿವೆಯಲ್ಲಿ ಉಗ್ರರನ್ನು ಮಟ್ಟ ಹಾಕೋ ಕಾರ್ಯಾಚರಣೆಯಲ್ಲಿ ಸೇನೆ ಮುಂದುವರೆಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ದೆಹಲಿ ಪೊಲೀಸರಿಂದ ಪಾಕ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ 8 ಮಂದಿ ಶಂಕಿತ ಉಗ್ಗರ ಬಂಧನ
ಭಾರತದ ಅತ್ಯಂತ ವೇಗದ ಮೆಟ್ರೋ, ಸಂಪೂರ್ಣ ನಮೋ ಭಾರತ್ ಕಾರಿಡಾರ್ ಪ್ರಧಾನಿ ಮೋದಿ ಉದ್ಘಾಟನೆ








