ಕೊಪ್ಪಳ : ಬೀಗರು ತಂದಿದ್ದ ಉಪಹಾರ ಸೇವಿಸಿ ಐವತ್ತಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಬುತ್ತಿ ಊಟ ಸೇವಿಸಿ 50 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಕೊಪ್ಪಳ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ನಡೆದಿದೆ.
ವಧುವನ್ನು ಮನೆತೊಂಬಿಸಿಕೊಳ್ಳುವ ದಿನ ಬೀಗರು ಬುತ್ತಿ ತಂದಿದ್ದರು. ಈ ವೇಳೆ ಬುತ್ತಿ ಉಪಹಾರ ಸೇವಿಸಿ 50 ಕ್ಕು ಹೆಚ್ಚು ಜನ ಅಸ್ವಸ್ಥರಾಗಿದ್ದು, ಸದ್ಯ ಅಸ್ವಸ್ಥರನ್ನು ಗುನ್ನಾಳ ಮತ್ತು ಹಿರೇವಂಕಲಕುಂಟ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಬಳಿಕ ಗುಣಮುಖರಾಗಿ ಎಲ್ಲರೂ ಮನೆಗೆ ತೆರಳಿದ್ದಾರೆ ಎಂದು ಹಿರೇವಂಕಲಕುಂಟ ವೈದ್ಯಾಧಿಕಾರಿ ದಯಾನಂದ ಸ್ವಾಮಿ ಮಾಹಿತಿ ನೀಡಿದರು.








