Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸೋಲುವ ಭಯದಲ್ಲಿ ಹಿಮಂತ್ ಬಿಸ್ವಾಸ್ ಶರ್ಮಾ ಆಧಾರರಹಿತ ಹೇಳಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

19/02/2026 5:32 PM

ಜಾಗತಿಕ ‘ಸ್ವಾನ್’ (SWAN) ಹಿರಿಯ ಸಲಹಾ ಸಮಿತಿಗೆ BWSSB ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಆಯ್ಕೆ

19/02/2026 5:27 PM

‘ನೋಂದಣಿ ಮಾಡದ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ: ಕರ್ನಾಟಕದ ಹಕ್ಕಿ ಪಿಕ್ಕಿ ಜನಾಂಗದ 26 ಮಂದಿ ಘಾನಾದಲ್ಲಿ ಅರೆಸ್ಟ್

19/02/2026 5:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಾಗತಿಕ ‘ಸ್ವಾನ್’ (SWAN) ಹಿರಿಯ ಸಲಹಾ ಸಮಿತಿಗೆ BWSSB ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಆಯ್ಕೆ
KARNATAKA

ಜಾಗತಿಕ ‘ಸ್ವಾನ್’ (SWAN) ಹಿರಿಯ ಸಲಹಾ ಸಮಿತಿಗೆ BWSSB ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಆಯ್ಕೆ

By kannadanewsnow0919/02/2026 5:27 PM

ಲಂಡನ್ / ಬೆಂಗಳೂರು : ಸ್ಮಾರ್ಟ್ ವಾಟರ್ ವಲಯದ ಜಾಗತಿಕ ಸಂಸ್ಥೆಯಾದ ‘ಸ್ಮಾರ್ಟ್ ವಾಟರ್ ನೆಟ್‌ವರ್ಕ್ಸ್ ಫೋರಮ್’ (SWAN), ತನ್ನ 5ನೇ ‘ಹಿರಿಯ ಯುಟಿಲಿಟಿ ಸಲಹಾ ಸಮಿತಿ’ಯನ್ನು ಪ್ರಕಟಿಸಿದೆ. ಈ ಜಾಗತಿಕ ಹಿರಿಯ ಸಲಹಾ ಸಮಿತಿಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಬೆಂಗಳೂರು ಜಲಮಂಡಳಿ (BWSSB) ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಈ ಜಾಗತಿಕ ಗಣ್ಯರ ಸಮಿತಿಗೆ ಆಯ್ಕೆಯಾಗಿದ್ದಾರೆ.

ಈ ಪ್ರತಿಷ್ಠಿತ ಸಮಿತಿಗೆ ಆಯ್ಕೆಯಾದ ಭಾರತದ ಏಕೈಕ ಜಲಮಂಡಳಿ ಮುಖ್ಯಸ್ಥರು ಡಾ. ಮನೋಹರ್ ಆಗಿರುವುದು ವಿಶೇಷವಾಗಿದೆ. ಇವರೊಂದಿಗೆ ಆಸ್ಟ್ರೇಲಿಯಾ, ಕೆನಡಾ, ಪೋರ್ಚುಗಲ್, ಬ್ರೆಜಿಲ್ ಮತ್ತು ಅಮೆರಿಕದ ತಜ್ಞರು ಈ ಸಮಿತಿಯಲ್ಲಿದ್ದಾರೆ.

ಆಯ್ಕೆಯಾದ ಸಮಿತಿ ಸದಸ್ಯರು ಜಾಗತಿಕ ಮಟ್ಟದಲ್ಲಿ ನೀರಿನ ಸವಾಲುಗಳು, ಪ್ರಾದೇಶಿಕ ಟ್ರೆಂಡ್‌ಗಳು ಮತ್ತು ಕಾರ್ಯತಂತ್ರದ ಸಂಶೋಧನಾ ಆದ್ಯತೆಗಳನ್ನು ಗುರುತಿಸಲು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಉದ್ಯಮಕ್ಕೆ ನೀಡಿದ ವ್ಯಾಪಕ ಕೊಡುಗೆಯ ಆಧಾರದ ಮೇಲೆ ಆಯ್ಕೆಯಾಗಿರುವ ಈ ತಂಡ, ‘ಸ್ವಾನ್’ನ ಭವಿಷ್ಯದ ಯೋಜನೆಗಳು ಮತ್ತು ಜಾಗತಿಕ ಉಪಕ್ರಮಗಳನ್ನು ಪರಿಶೀಲಿಸಲಿದೆ.

ಇತ್ತೀಚೆಗೆ ಜಲಮಂಡಳಿಯಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ದತ್ತಾಂಶ-ಆಧಾರಿತ (data-driven) ಉಪಕ್ರಮಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಕ್ಕಾಗಿ ಡಾ. ಮನೋಹರ್ ಅವರಿಗೆ ಜಾಗತಿಕ ಮಟ್ಟದಲ್ಲಿ ಈ ನೇರ ಮನ್ನಣೆ ದೊರೆತಿದೆ. ಅವರ ಪ್ರಯತ್ನಗಳಿಂದಾಗಿ ಬೆಂಗಳೂರು ಸ್ಮಾರ್ಟ್ ನೀರು ನಿರ್ವಹಣೆಯ ಪ್ರಮುಖ ಸರ್ಕಾರಿ ಜಲ ನಿರ್ವಹಣಾ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಭಾರತ ದೇಶದ ನೀರಿನ ಸವಾಲುಗಳು ಮತ್ತು ತಾಂತ್ರಿಕ ಪರಿಹಾರಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರತಿನಿಧಿಸಲು ಇದು ಸಹಕಾರಿಯಾಗಿದೆ.

ತಮ್ಮ ಆಯ್ಕೆಯ ಡಾ. ರಾಮ್ ಪ್ರಸಾತ್ ಮನೋಹರ್ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿಯಿಂದ ಬೆಂಗಳೂರು ಜಲಮಂಡಳಿ ಜಾಗತಿಕ ಮಟ್ಟದಲ್ಲಿ ಹೆಸರು ಪಡೆಯಲು ಸಾಧ್ಯವಾಗಿದೆ. ಮಾನ್ಯ ಉಪಮುಖ್ಯಮಂತ್ರಿಗಳ ‘ಬ್ರಾಂಡ್ ಬೆಂಗಳೂರು’ (Brand Bengaluru) ಪರಿಕಲ್ಪನೆಗೆ ಪೂರಕವಾಗಿ, ಜಲಮಂಡಳಿಯು ನಗರದ ಮೂಲಸೌಕರ್ಯವನ್ನು ಉನ್ನತೀಕರಿಸಲು ವಿಶ್ವದರ್ಜೆಯ, ಎಐ-ಚಾಲಿತ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದೆ. ಬೆಂಗಳೂರಿನ ನಾಗರಿಕರಿಗೆ ಸೇವೆ ಸಲ್ಲಿಸಲು ಪ್ರತಿದಿನ ಈ ತಾಂತ್ರಿಕ ಯೋಜನೆಗಳನ್ನು ಕಾರ್ಯಗತಗೊಳಿಸುವ ಜಲಮಂಡಳಿಯ ತಾಂತ್ರಿಕ ತಂಡ ಮತ್ತು ಸಿಬ್ಬಂದಿಯ ಅವಿರತ ಶ್ರಮಕ್ಕೆ ನಾನು ಈ ಮೈಲಿಗಲ್ಲನ್ನು ಅರ್ಪಿಸುತ್ತೇನೆ. ಜಾಗತಿಕವಾಗಿ ಸ್ಮಾರ್ಟ್ ವಾಟರ್ ವ್ಯವಸ್ಥೆಯನ್ನು ರೂಪಿಸುವಲ್ಲಿ ‘ಸ್ವಾನ್’ ಸಂಸ್ಥೆಯ ದೂರದೃಷ್ಟಿ ನನಗೆ ಅತ್ಯಂತ ಇಷ್ಟವಾಗಿದೆ. ನಾವು ಇಂದು ಎದುರಿಸುತ್ತಿರುವ ಸಂಕೀರ್ಣ ನೀರಿನ ಸವಾಲುಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳಲು ಜಾಗತಿಕ ತಜ್ಞರೊಂದಿಗೆ (UAG) ಕಾರ್ಯನಿರ್ವಹಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.

ಸ್ವಾನ್ (SWAN) 5ನೇ ಯುಟಿಲಿಟಿ ಸಲಹಾ ಸಮಿತಿಯ ಸದಸ್ಯರು:

– ಡಾ. ರಾಮ್ ಪ್ರಸಾತ್ ಮನೋಹರ್, ಅಧ್ಯಕ್ಷರು – ಬೆಂಗಳೂರು ಜಲಮಂಡಳಿ (ಭಾರತ)
– ಜೊನೆಟ್ಟಾ ಇ. ಇಂಗ್ಲಿಷ್ (Zonetta E. English) – ಲೂಯಿಸ್ವಿಲ್ಲೆ ಎಂಎಸ್‌ಡಿ (ಅಮೆರಿಕ)
– ಡೇವಿಡ್ ಹ್ಯೂಸ್-ಓವನ್ (David Hughes-Owen), ಸಿಇಒ – ಬಸ್ಸೆಲ್ಟನ್ ವಾಟರ್ (ಆಸ್ಟ್ರೇಲಿಯಾ)
– ಜೋವಾನಾ ಅರಾಜೊ (Joana Araújo) – ಅಗ್ವಾಸ್ ಇ ಎನರ್ಜಿಯಾ ದೋ ಪೋರ್ಟೊ (ಪೋರ್ಚುಗಲ್)
– ಅರಾಶ್ ಫರಾಜಿಯಾನ್ (Arash Farajian) – ಟೊರೊಂಟೊ ವಾಟರ್ (ಕೆನಡಾ)
– ಡೆನಿಸ್ ಮಾಯಾ (Denis Maia) – ಸಬೆಸ್ಪ್ (ಬ್ರೆಜಿಲ್)

ಈ ಘೋಷಣೆಯು 2026ರ ಜೂನ್ 2 ರಿಂದ 4 ರವರೆಗೆ ಅಮೆರಿಕದ ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆಯಲಿರುವ ‘ಸ್ವಾನ್ 16ನೇ ವಾರ್ಷಿಕ ಸಮ್ಮೇಳನ’ದ ನಿರೀಕ್ಷೆಯನ್ನು ಹೆಚ್ಚಿಸಿದೆ. ಡಾ. ಮನೋಹರ್ ಸೇರಿದಂತೆ UAG ಸದಸ್ಯರು “ನಿಮ್ಮ ಡಿಜಿಟಲ್ ಪ್ರಯಾಣದ ಅಳವಡಿಕೆ” (Adapting your digital journey) ಎಂಬ ವಿಷಯದ ಮೇಲೆ ನಡೆಯಲಿರುವ ಈ ಸಮ್ಮೇಳನದ ರೂಪುರೇಷೆಗಳಿಗೆ ಕಾರ್ಯತಂತ್ರದ ಸಲಹೆಗಳನ್ನು ನೀಡಲಿದ್ದಾರೆ.

ಸ್ವಾನ್ (SWAN) ಕುರಿತು:

2010 ರಲ್ಲಿ ಸ್ಥಾಪನೆಯಾದ SWAN ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಪ್ರಪಂಚದಾದ್ಯಂತ ಕುಡಿಯುವ ನೀರು, ತ್ಯಾಜ್ಯನೀರು ಮತ್ತು ಮಳೆನೀರು ಜಾಲಗಳ ನಿರ್ವಹಣೆಯಲ್ಲಿ ಡೇಟಾ-ಚಾಲಿತ “ಸ್ಮಾರ್ಟ್” ಪರಿಹಾರಗಳನ್ನು ಅಳವಡಿಸಿಕೊಳ್ಳಲು ಶ್ರಮಿಸುತ್ತಿದೆ.

‘ನೋಂದಣಿ ಮಾಡದ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ: ಕರ್ನಾಟಕದ ಹಕ್ಕಿ ಪಿಕ್ಕಿ ಜನಾಂಗದ 26 ಮಂದಿ ಘಾನಾದಲ್ಲಿ ಅರೆಸ್ಟ್

Share. Facebook Twitter LinkedIn WhatsApp Email

Related Posts

ಸೋಲುವ ಭಯದಲ್ಲಿ ಹಿಮಂತ್ ಬಿಸ್ವಾಸ್ ಶರ್ಮಾ ಆಧಾರರಹಿತ ಹೇಳಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

19/02/2026 5:32 PM1 Min Read

‘ನೋಂದಣಿ ಮಾಡದ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ: ಕರ್ನಾಟಕದ ಹಕ್ಕಿ ಪಿಕ್ಕಿ ಜನಾಂಗದ 26 ಮಂದಿ ಘಾನಾದಲ್ಲಿ ಅರೆಸ್ಟ್

19/02/2026 5:23 PM1 Min Read

ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಬಾಕಿಪ್ರಕರಣಗಳ ವಿಲೇಗೆ ಮಹತ್ವದ ಹೆಜ್ಜೆ

19/02/2026 5:16 PM2 Mins Read
Recent News

ಸೋಲುವ ಭಯದಲ್ಲಿ ಹಿಮಂತ್ ಬಿಸ್ವಾಸ್ ಶರ್ಮಾ ಆಧಾರರಹಿತ ಹೇಳಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

19/02/2026 5:32 PM

ಜಾಗತಿಕ ‘ಸ್ವಾನ್’ (SWAN) ಹಿರಿಯ ಸಲಹಾ ಸಮಿತಿಗೆ BWSSB ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಆಯ್ಕೆ

19/02/2026 5:27 PM

‘ನೋಂದಣಿ ಮಾಡದ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ: ಕರ್ನಾಟಕದ ಹಕ್ಕಿ ಪಿಕ್ಕಿ ಜನಾಂಗದ 26 ಮಂದಿ ಘಾನಾದಲ್ಲಿ ಅರೆಸ್ಟ್

19/02/2026 5:23 PM

ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಬಾಕಿಪ್ರಕರಣಗಳ ವಿಲೇಗೆ ಮಹತ್ವದ ಹೆಜ್ಜೆ

19/02/2026 5:16 PM
State News
KARNATAKA

ಸೋಲುವ ಭಯದಲ್ಲಿ ಹಿಮಂತ್ ಬಿಸ್ವಾಸ್ ಶರ್ಮಾ ಆಧಾರರಹಿತ ಹೇಳಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

By kannadanewsnow0919/02/2026 5:32 PM KARNATAKA 1 Min Read

ಗುವಾಹಟಿ : “ಸೋಲುವ ಭಯದಲ್ಲಿ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾಸ್ ಶರ್ಮಾ ಅವರು ಕಾಂಗ್ರೆಸ್ ವಿರುದ್ಧ ಆಧಾರರಹಿತ ಹೇಳಿಕೆ ನೀಡುತ್ತಿದ್ದಾರೆ” ಎಂದು…

ಜಾಗತಿಕ ‘ಸ್ವಾನ್’ (SWAN) ಹಿರಿಯ ಸಲಹಾ ಸಮಿತಿಗೆ BWSSB ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಆಯ್ಕೆ

19/02/2026 5:27 PM

‘ನೋಂದಣಿ ಮಾಡದ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ: ಕರ್ನಾಟಕದ ಹಕ್ಕಿ ಪಿಕ್ಕಿ ಜನಾಂಗದ 26 ಮಂದಿ ಘಾನಾದಲ್ಲಿ ಅರೆಸ್ಟ್

19/02/2026 5:23 PM

ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಬಾಕಿಪ್ರಕರಣಗಳ ವಿಲೇಗೆ ಮಹತ್ವದ ಹೆಜ್ಜೆ

19/02/2026 5:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.