ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದು, ಇದೀಗ ಮುಷ್ಕರ ಸ್ಥಳಕ್ಕೆ ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷಾ ಅವರು ಬಂದು ಹಲವು ಭರವಸೆಗಳನ್ನು ನೀಡಿದರು. ಆದರೂ ಇದಕ್ಕೆ ಸಾರಿಗೆ ನೌಕರರು ಒಪ್ಪದೇ ಮೊದಲು ನಮ್ಮ ಪ್ರಮುಖ ಎರಡು ಬೇಡಿಕೆಗಳನ್ನು ಈಡೇರಿಸಿ ಎಂದು ಆಗ್ರಹಿಸಿದರು.
ಕೆಎಸ್ಆರ್ಟಿಸಿ ಅಂಗಡಿ ಭರವಸೆ ಮೇಲೆ ಬಸ್ ಬಂದ್ ಭವಿಷ್ಯ ನಿರ್ಧಾರವಾಗಲಿದೆ. ಯಾವ ಭರವಸೆ ನೀಡುತ್ತಾರೆ ಎಂದು ನೌಕರರು ಕಾಯುತ್ತಿದ್ದರು.ಸಾರಿಗೆ ಸಿಬ್ಬಂದಿ ಬೇಡಿಕೆಗಳು ಈಡೇರಿಕೆಗೆ ಮೊದಲ ಆದ್ಯತೆ ನೀಡಿದ್ದೇವೆ. ನಿವೃತ್ತ ನೌಕರರಿಗೆ ಗ್ರ್ಯಾಚುಟಿ 100 ಕೋಟಿ ಬಿಡುಗಡೆ ಮಾಡಿದ್ದೇವೆ. ಅಲ್ಲದೆ 1,272 ಕೋಟಿ ಹಿಂಬಾಕಿ ವೇತನ ನೀಡಲು ಸರ್ಕಾರ ನಿರ್ಧರಿಸಿದೆ. ಉಳಿದ ವಿಚಾರಗಳ ಬಗ್ಗೆ ಸಂಘಟನೆ ಮುಖಂಡರ ಜೊತೆಗೆ ಚರ್ಚಿಸುತ್ತೇವೆ ಎಂದು ಫ್ರೀಡಂ ಪಾರ್ಕ್ ನಲ್ಲಿ ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷಾ ಹೇಳಿಕೆ ನೀಡಿದರು.
1,271 ಕೋಟಿ ಹಣ ಕೊಡಲು ಸರ್ಕಾರ ಒಪ್ಪಿಕೊಂಡಿದೆ. ಬಜೆಟ್ ನಲ್ಲಿ ಹಣ ಪಡೆದುಕೊಂಡು ಅತಿ ಶೀಘ್ರದಲ್ಲಿ ನೀಡುತ್ತೇವೆ ಎಂದು ಪ್ರತಿಭಟನಾ ಸ್ಥಳದಲ್ಲಿ ಕೆಎಸ್ಆರ್ಟಿಸಿ ಎಮ್ ಡಿ ಅಕ್ರಂ ಪಾಷಾಭರವಸೆ ನೀಡಿದರು. ಆದರೆ ಸಾರಿಗೆ ನೌಕರರು ಮತ್ತೆ ವಿರೋಧ ವ್ಯಕ್ತಪಡಿಸಿದರು. ನಾವು ಇದನ್ನು ಒಪ್ಪಿಕೊಳ್ಳಲ್ಲ ನಾವು ನಿಮ್ಮ ಮುಂದೆ ಪ್ರಮುಖ 2 ಬೇಡಿಕೆಗಳನ್ನು ನಿಮ್ಮ ಮುಂದೆ ಇಟ್ಟಿದ್ದೇವೆ ಅದನ್ನು ಈಡೇರಿಸುವಂತಹ ಕೆಲಸವನ್ನು ಮೊದಲು ಮಾಡಿ ಎಂದು ಸಾರಿಗೆ ನೌಕರರು ಆಗ್ರಹಿಸಿದ್ದಾರೆ. ಹಾಗಾಗಿ ಮುಷ್ಕರ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.








