Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಸಾಗರದಲ್ಲಿ ‘ಪೆಟ್ರೋಲ್ ಕದಿಯೋ ಗ್ಯಾಂಗ್’ ಆಕ್ಟೀವ್: ಬಸ್, ರೈಲ್ವೆ ನಿಲ್ದಾಣದ ‘ಬೈಕ್’ಗಳೇ ಕಳ್ಳರ ಟಾರ್ಗೆಟ್!

BREAKING: ಎಲೋನ್ ಮಸ್ಕ್ ಒಡೆತನದ ‘SpaceX’ ಮತ್ತು ‘Starlink’ ಅನ್ನು ಮಿಲಿಟರಿ ಟಾರ್ಗೆಟ್ ಎಂದು ಘೋಷಿಸಿದ ಇರಾನ್!

​ಜುಲೈ 15ರೊಳಗೆ ಬರಲಿದೆ ಹೊಸ ರೂಪದ ‘IRCTC’ ವೆಬ್‌ಸೈಟ್: ರೈಲು ಟಿಕೆಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಆಗಲಿವೆ ಭಾರಿ ಬದಲಾವಣೆಗಳು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೀರಾವರಿ ಯೋಜನೆಗಳಿಗೆ ಅಗತ್ಯ ಸಹಕಾರ ನೀಡಿ: ಮದ್ದೂರು ಶಾಸಕ ಕೆ.ಎಂ.ಉದಯ್
KARNATAKA

ನೀರಾವರಿ ಯೋಜನೆಗಳಿಗೆ ಅಗತ್ಯ ಸಹಕಾರ ನೀಡಿ: ಮದ್ದೂರು ಶಾಸಕ ಕೆ.ಎಂ.ಉದಯ್

By ವಸಂತ ಬಿ ಈಶ್ವರಗೆರೆ

ಮಂಡ್ಯ : ದೇಶಹಳ್ಳಿ ಕೆರೆ ಅಚ್ಚುಕಟ್ಟು ಪ್ರದೇಶದ ಬೈರನ್, ಚಾಮನಹಳ್ಳಿ ಹಾಗೂ ವೈದ್ಯನಾಥಪುರ ನಾಲೆಗಳ ಆಧುನಿಕರಣ ಕಾಮಗಾರಿಗೆ ಚಾಲನೆ ನೀಡಲಿದ್ದು, ರೈತರು ಅಗತ್ಯ ಸಹಕಾರ ನೀಡಬೇಕೆಂದು ಶಾಸಕ ಕೆ.ಎಂ.ಉದಯ್ ಮನವಿ ಮಾಡಿದರು.

ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಬೈರನ್, ಚಾಮನಹಳ್ಳಿ ಹಾಗೂ ವೈದ್ಯನಾಥಪುರ ನಾಲೆಗಳ ಅಚ್ಚುಕಟ್ಟು ಪ್ರದೇಶಗಳ ರೈತರೊಂದಿಗೆ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶಹಳ್ಳಿ ಕೆರೆಯನ್ನು ಅಭಿವೃದ್ಧಿ ಪಡಿಸಲು ಕ್ರಮವಹಿಸಲಾಗುತ್ತಿದ್ದು, ಈಗಾಗಲೇ ಒತ್ತುವರಿ ತೆರವು ಕಾರ್ಯಚರಣೆ ನಡೆಯುತ್ತಿದ್ದು, ನಂತರ ಹೂಳೆತ್ತಲು ಕೂಡಾ ಕ್ರಮ ವಹಿಸಲಾಗುವುದು. ಇದರಿಂದಾಗಿ ಹೆಚ್ಚಿನ ನೀರಿನ ಸಂಗ್ರಹಣೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.

ಕೆಮ್ಮಣ್ಣು ನಾಲಾ ಆಧುನೀಕರಣ ಕೆಲಸವು ಉತ್ತಮವಾಗಿ ನಡೆಯುತ್ತಿದ್ದು, ಇನ್ನು ಎರಡು ಮೂರು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅಭಿವೃದ್ಧಿ ಕಾಮಗಾರಿಯಿಂದ ಬೈರನ್, ಚಾಮನಹಳ್ಳಿ ಹಾಗೂ ವೈದ್ಯನಾಥಪುರ ನಾಲೆಗಳ ಅಚ್ಚುಕಟ್ಟು ಪ್ರದೇಶದ
ರೈತರಿಗೆ ತೊಂದರೆಯಾಗಬಹುದು. ಆದರೆ, ಕೆಲವು ದಿನಗಳು ಸಹಕರಿಸಿದರೆ ನಾಲೆಗಳ ಆಧುನಿಕರಣ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು, ಮುಂದಿನ 50 ರಿಂದ 70 ವರ್ಷಗಳವರೆಗೆ ಸಮೃದ್ಧಿಯ ಬೆಳೆ ಬೆಳೆಗಳನ್ನು ಬೆಳೆಯಲು ಅನುಕೂಲವಾಗಲಿದೆ ಎಂಬುದನ್ನು ಅರಿಯಬೇಕು ಎಂದರು.

ಬೇಸಿಗೆ ಬೆಳೆಯ ವಿಷಯದಲ್ಲಿ ರೈತರು ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕರಿಸಿದರೆ ಮುಂದಿನ ಬೆಳೆಯಿಂದ ಸಮರ್ಪಕವಾಗಿ ಬೆಳೆಗಳಿಗೆ ನೀರು ಹರಿಸಲು ಅನುಕೂಲವಾಗಲಿದ್ದು, ಇದರಿಂದ ಶಾಶ್ವತವಾದ ನೀರಾವರಿ ಪರಿಹಾರ ಈ ಆಗಲಿದೆ ಎಂದರು.

8 ರಿಂದ 10 ದಿನ ನೀರು ಹರಿಸಿ 20 ದಿನ ಕಾಮಗಾರಿಯನ್ನು ನಡೆಸಿ ರೈತರಿಗೆ ಅನುಕೂಲವಾಗಲಿದೆ. ಈಗಾಗಲೇ ಇರುವ ಬೆಳೆಗಳಿಗೆ ತೊಂದರೆಯಾಗದಂತೆ ಹಾಗೂ ತೆಂಗು ಬೆಳೆಗೂ ನೀರಿನ ತೊಂದರೆಯಾಗದಂತೆ ಕ್ರಮವಹಿಸಬೇಕೆಂದು ಸಭೆಯಲ್ಲಿ ಭಾಗವಹಿಸಿದ್ದ ರೈತರು ಸಭೆಯಲ್ಲಿ ಮನವಿ ಮಾಡಿದರು. 75 ರಿಂದ 100 ವರ್ಷ ಉಳಿಯಬಹುದಾದ ಕೆಮ್ಮಣ್ಣು ನಾಲಾ ಅಭಿವೃದ್ಧಿ ಕೆಲಸವಾಗುತ್ತಿದೆ. ಅಷ್ಟೊಂದು ಉತ್ತಮ ಕೆಲಸ ನಿಮ್ಮಿಂದ ಆಗುತ್ತಿದ್ದು, ಕೆಮ್ಮಣ್ಣು ನಾಲಾ ಅಚ್ಚುಕಟ್ಟು ಪ್ರದೇಶದ ರೈತರು ಎಷ್ಟು ವರ್ಷವಾದರೂ ಮರೆಯುವುದಿಲ್ಲ ಎಂದು ಶಾಸಕ ಉದಯ್ ಅವರ ಕಾರ್ಯ ವೈಖರಿ ಬಗ್ಗೆ ರೈತರು ಹರ್ಷ ವ್ಯಕ್ತಪಡಿಸಿದರು.

ಸಭೆಯಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ತಾಲೂಕು ಬ್ಲಾಕ್ ಕಾಂಗ್ರೆಸ್ ಮಹಿಳಾಧ್ಯಕ್ಷೆ ಮಮತಾ ಶಂಕರೇಗೌಡ, ನಗರ ಸಭಾ ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಕಾವೇರಿ ನೀರಾವರಿ ನಿಗಮದ ಇಇ ನಂಜುಂಡೇಗೌಡ, ಎಇಇ ನಾಗರಾಜು, ಸೇರಿದಂತೆ ಅಚ್ಚುಕಟ್ಟು ಪ್ರದೇಶದ ರೈತರು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

Watch Video: ಗಂಡನನ್ನು ಕುತ್ತಿಗೆಯವರೆಗೂ ಹೂತು, ತಲೆಯ ಮೇಲೆ ಹೂ ಹಾಕಿ ಪೂಜಿಸಿದ ಮಹಿಳೆ: ವೀಡಿಯೋ ವೈರಲ್

ಸಾಗರದಲ್ಲೊಂದು 50 ವರ್ಷವೇ ಕಳೆದರು ‘ಟಾರ್’ ಕಾಣದ ರಸ್ತೆ: ‘ಡಾಂಬಾರೀಕರಣ’ಕ್ಕೆ ನಿವಾಸಿಗಳ ಒತ್ತಾಯ

Share. Facebook Twitter LinkedIn WhatsApp Email

Related Posts

BIG NEWS: ಸಾಗರದಲ್ಲಿ ‘ಪೆಟ್ರೋಲ್ ಕದಿಯೋ ಗ್ಯಾಂಗ್’ ಆಕ್ಟೀವ್: ಬಸ್, ರೈಲ್ವೆ ನಿಲ್ದಾಣದ ‘ಬೈಕ್’ಗಳೇ ಕಳ್ಳರ ಟಾರ್ಗೆಟ್!

2 Mins Read

GOOD NEWS: ರಾಜ್ಯದ ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ 10 ಕೆಜಿ ಅಕ್ಕಿ ವಿತರಣೆಗೆ ಸರ್ಕಾರದ ಆದೇಶ

1 Min Read

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಕೆ

1 Min Read
Recent News

BIG NEWS: ಸಾಗರದಲ್ಲಿ ‘ಪೆಟ್ರೋಲ್ ಕದಿಯೋ ಗ್ಯಾಂಗ್’ ಆಕ್ಟೀವ್: ಬಸ್, ರೈಲ್ವೆ ನಿಲ್ದಾಣದ ‘ಬೈಕ್’ಗಳೇ ಕಳ್ಳರ ಟಾರ್ಗೆಟ್!

BREAKING: ಎಲೋನ್ ಮಸ್ಕ್ ಒಡೆತನದ ‘SpaceX’ ಮತ್ತು ‘Starlink’ ಅನ್ನು ಮಿಲಿಟರಿ ಟಾರ್ಗೆಟ್ ಎಂದು ಘೋಷಿಸಿದ ಇರಾನ್!

​ಜುಲೈ 15ರೊಳಗೆ ಬರಲಿದೆ ಹೊಸ ರೂಪದ ‘IRCTC’ ವೆಬ್‌ಸೈಟ್: ರೈಲು ಟಿಕೆಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಆಗಲಿವೆ ಭಾರಿ ಬದಲಾವಣೆಗಳು!

​ಬಾದಾಮಿ ಖರೀದಿಯಲ್ಲಿ ₹82 ರೂಪಾಯಿ ವಂಚನೆ: ಗ್ರಾಹಕ ನ್ಯಾಯಾಲಯದಲ್ಲಿ ಹೋರಾಡಿ ₹7,000 ಪರಿಹಾರ ಗೆದ್ದ ಗ್ರಾಹಕ!

State News
KARNATAKA

BIG NEWS: ಸಾಗರದಲ್ಲಿ ‘ಪೆಟ್ರೋಲ್ ಕದಿಯೋ ಗ್ಯಾಂಗ್’ ಆಕ್ಟೀವ್: ಬಸ್, ರೈಲ್ವೆ ನಿಲ್ದಾಣದ ‘ಬೈಕ್’ಗಳೇ ಕಳ್ಳರ ಟಾರ್ಗೆಟ್!

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ದಿನದಿಂದ ದಿನಕ್ಕೆ ಪೆಟ್ರೋಲ್ ದರ ಗಗನಕ್ಕೇರುತ್ತಿರುವ ಬೆನ್ನಲ್ಲೇ, ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲು ವಿನೂತನ ಕಳ್ಳರ ಗ್ಯಾಂಗ್…

GOOD NEWS: ರಾಜ್ಯದ ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ 10 ಕೆಜಿ ಅಕ್ಕಿ ವಿತರಣೆಗೆ ಸರ್ಕಾರದ ಆದೇಶ

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಕೆ

GOOD NEWS: ರಾಜ್ಯದ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್: ಇನ್ನೆರಡು ದಿನದಲ್ಲಿ ‘ಉಚಿತ ಬಸ್ ಪಾಸ್’ ವಿತರಣೆ ಪ್ರಕ್ರಿಯೆ ಆರಂಭ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.