ಬೀದರ್ : ಆಕಸ್ಮಿಕವಾಗಿ ಕಾರಂಜಾ ಡ್ಯಾಂ ಕಾಲುವೆಗೆ ಬಿದ್ದು ತಂದೆ ಮಗ ಸಾವನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಬಾಲಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿ ಈ ಒಂದು ದುರಂತ ನಡೆದಿದೆ. ಕಾಲುವೆ ಬಿದ್ದು ತಂದೆ ವಿಶ್ವನಾಥ್ ಮತ್ತು ಪುತ್ರ ಅಮರೇಶ್ ಸಾವನ್ನಪ್ಪಿದ್ದಾರೆ.
ಹಳ್ಳಿಕೇಡ್ ಬಿ ಗ್ರಾಮದ ವಿಶ್ವನಾಥ ಹಾಗೂ ಅಮರೇಶ್ (23) ಸಾವನ್ನಪ್ಪಿದ್ದಾರೆ ಬೀದರ್ನಲ್ಲಿ ಸಿಮೆಂಟ್ ಖಾಲಿ ಮಾಡಿ ವಾಪಸ್ ಊರಿಗೆ ಹೋಗುತ್ತಿದ್ದರು. ಈ ವೇಳೆ ಕಾಲು ತೊಳೆದುಕೊಳ್ಳುತ್ತಿದ್ದ ಅಮರೇಶ್ ಕಾಲು ಜಾರಿ ಕಾರಂಜಾ ಡ್ಯಾಮ್ ಕಾಲುವೆಗೆ ಬಿದ್ದಿದ್ದಾನೆ. ಪುತ್ರನ ರಕ್ಷಣೆಗೆ ಹೋದ ತಂದೆ ವಿಶ್ವನಾಥ್ ಜಮಾದಾರ್ ಸಹ ಸಾವನಪ್ಪಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ತಂದೆ ಹಾಗೂ ಮಗನ ಶವ ಹೊರ ತೆಗೆದಿದ್ದು, ಧನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








