ತುಮಕೂರು : ರಾಜ್ಯದಲ್ಲಿ ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿ ಆದವನು. ಈ ನಾಡಿನ 6 ಕೋಟಿ ಜನರು ಆಶೀರ್ವಾದ ಮಾಡಿ ನಾನು ಮುಖ್ಯಮಂತ್ರಿ ಆದವನಲ್ಲ ಎಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು.
ಈ ನಾಡಿನ ಆರು ಕೋಟಿ ಜನರು ಆಶೀರ್ವಾದ ಮಾಡಿ ನಾನು ಸಿಎಂ ಆದವನಲ್ಲ. ದೈವ ಪ್ರೇರೇಪಣೆ ಹಾಗೂ ಗುರು ಹಿರಿಯರ ಆಶೀರ್ವಾದದಿಂದ ಸಿಎಂ ಆಗಿದ್ದೆ. ಜೊತೆಗೆ ನಮ್ಮ ಪಕ್ಷದಲ್ಲಿ ಗೆದ್ದ ಶಾಸಕರಿಂದ ನಾನು ಸಿಎಂ ಆಗಿದ್ದೆ. ರಾಜ್ಯದಲ್ಲಿ ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ ನಾನು ಕೊಟ್ಟಿರುವ ಯೋಜನೆಗಳಿಗೆ ಎಂದು ಜಾಹಿರಾತು ನೀಡಿಲ್ಲ. ಜನಸಾಮಾನ್ಯರಿಗೆ ಹತ್ತಿರವಾಗಿ ಕೆಲಸ ಮಾಡಿದ್ದೇನೆ ಎಂದು ಚಿಕ್ಕನಾಯಕನಹಳ್ಳಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ನೀಡಿದರು.
ಈ ಹಿಂದೆ ನಾನು ಹಲವು ಬಾರಿ ಚಿಕ್ಕನಾಯಕನಹಳ್ಳಿಗೆ ಭೇಟಿ ನೀಡಿದ್ದೇನೆ 2018ರಲ್ಲಿ ಗ್ರಾಮ ವಾಸ್ತವ್ಯಕ್ಕೆ ತಿಮ್ಮನಹಳ್ಳಿಗೆ ಭೇಟಿ ನೀಡಿದ್ದೆ ಸಭೆ ಮಾಡುವ ತಯಾರಿ ನಡೆಸಿದರು ಆದರೆ ಸಭೆ ಮಾಡಲು ಆಗಲಿಲ್ಲ ಅದೆಲ್ಲವೂ ಮರೆಯಲು ಸಾಧ್ಯವಿಲ್ಲ. ಎಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು.








