ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಪಾಕಿಸ್ತಾನವನ್ನು ಟೀಂ ಇಂಡಿಯಾ ಬಗ್ಗು ಬಡೆದಿದೆ.
ಶ್ರೀಲಂಕಾದ ಕೊಲಂಬೋದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಈ ಪಂದ್ಯದಲ್ಲಿ ಭಾರತವು ಭರ್ಜರಿ ಗೆಲುವು ಸಾಧಿಸಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಗೆಲುವು ಸಾಧಿಸಿದೆ.
ಭಾರತದ ವೇಗ, ಸ್ಪಿನ್ ಮೋಡಿಗೆ ಪಾಕಿಸ್ತಾನದ ಬ್ಯಾಟರ್ ಗಳು ತತ್ತರಿಸಿ ಹೋಗಿದ್ದಾರೆ. ಬೂಮ್ರಾ, ಹಾರ್ದಿಕ್, ಅಕ್ಷರ್, ವರುಣ್ ಗೆ ತಲಾ ಎರಡು ವಿಕೆಟ್ ಬಿದ್ದಿವೆ.
ಭಾರತ 175 ರನ್ ಅನ್ನು 7 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ ಪೇರಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದಂತ ಪಾಕಿಸ್ತಾನ 18 ಓವರ್ ಗಳಲ್ಲಿ 114 ರನ್ ಗಳಿಸಿ ಆಲ್ ಔಟ್ ಆಗಿ ಸೋಲು ಕಂಡಿತು. ಆ ಮೂಲಕ ಭಾರತವು ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದಂತೆ ಆಗಿದೆ.








