ಬೆಂಗಳೂರು: ನಿನ್ನೆ ವಯೋಸಹಜತೆಯಿಂದ ಮಾಜಿ ಶಾಸಕ, ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರು ನಿಧನರಾಗಿದ್ದರು. ಇಂತಹ ಅವರ ಅಂತ್ಯಕ್ರಿಯೆಯನ್ನು ಸಕಲ ಪೊಲೀಸ್ ಗೌರವಗಳೊಂದಿಗೆ ನೆರವೇರಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ನಾಡಿನ ಹಿರಿಯ ಪತ್ರಕರ್ತರು, ನನ್ನ ಚಿರಕಾಲದ ಮಿತ್ರರು, ಹಿತೈಷಿಗಳು ಆಗಿದ್ದ ಶ್ರೀ ಪಿ. ರಾಮಯ್ಯನವರು ನಿಧನರಾದ ಸುದ್ದಿ ತಿಳಿದು ಬಹಳ ನೋವುಂಟಾಯಿತು. The Hindu ಪತ್ರಿಕೆಯ ವರದಿಗಾರರಾಗಿ ಅಷ್ಟೇ ಅಲ್ಲದೆ, ಆತ್ಮೀಯ ಒಡನಾಡಿಯಾಗಿ ದಶಕಗಳ ಕಾಲದಿಂದಲೂ ನನಗೆ ಚಿರಪರಿಚಿತರು. ಪತ್ರಕರ್ತರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಅವರು ಅಪಾರ ಸೇವೆ ಸಲ್ಲಿದ್ದಾರೆ. ಅವರ ನಿಧನದಿಂದ ಪತ್ರಿಕೋದ್ಯಮದ ದೊಡ್ಡ ಕೊಂಡಿಯೊಂದು ಕಳಚಿದೆ.
ರಾಜ್ಯ ಸರ್ಕಾರವು ಮೃತ ಮಾಜಿ ಶಾಸಕ, ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವಗಳೊಂದಿಗೆ ನೆರವೇರಿಸುವಂತೆ ಆದೇಶಿಸಿದೆ.

ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಚಿನ್ನ, ಹಣದ ಬ್ಯಾಗ್ ನಾಪತ್ತೆ ಕೇಸ್ : ತನಿಖೆಗೆ ಜಿ. ಪರಮೇಶ್ವರ್ ಆದೇಶ








