ಬೆಂಗಳೂರು: ನಗರದಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಯುವತಿಗೆ ಹೆಣ್ಣುಮಗು ನೀಡಿ ಸೈಯದ್ ಎಂಬುದಾಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನ ಬಿಟಿಎಂ ನಿವಾಸಿಯಾಗಿರುವಂತ ಸೈಯದ್ ಇಮ್ತಿಯಾಜ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಹಿಂದೂ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದಂತ ಸೈಯದ್, ಆಕೆಯನ್ನು ಇಸ್ಲಾಂಗೆ ಮತಾಂತರಿಸಿದಂತ ಆರೋಪ ಕೇಳಿ ಬಂದಿದೆ.
ಜುಲೈ.18, 2025ರಂದು ರಿಜಿಸ್ಟರ್ ಮದುವೆಯಾಗಿದ್ದಂತ ಸೈಯದ್ ಹಾಗೂ ಹಿಂದೂ ಯುವತಿ. ಆ ಬಳಿಕ 2025ರಲ್ಲಿ ಪತ್ನಿಗೆ ಗರ್ಭಪಾತ ಮಾಡಿಸಿದ್ದಂತ ಆರೋಪ ಸೈಯದ್ ವಿರುದ್ಧ ಕೇಳಿ ಬಂದಿದೆ. ಆ ಬಳಿಕ ಹೆಣ್ಣುಮಗುವಿಗೆ ಸಂತ್ರಸ್ತೆ ಜನ್ಮ ನೀಡಿದ್ದರು. ಆ ಬಳಿಕ ಸೈಯದ್ ಆಕೆಗೆ ಕೈಕೊಟ್ಟು ಪರಾರಿಯಾಗಿರೋದಾಗಿ ಹೇಳಲಾಗುತ್ತಿದೆ.
ಅಂದಹಾಗೇ ಹಿಂದೂ ಯುವತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸೈಯದ್ ಪರಿಚಯ ಮಾಡಿಕೊಂಡಿದ್ದನು. ಆ ಬಳಿಕ ಆಕೆಯನ್ನು ಪರಿಚಯ ಮಾಡಿಕೊಂಡು, ಮದುವೆಯಾಗಿದ್ದನು. ಮತಾಂತರ ಕೂಡ ಮಾಡಿದಂತ ಆರೋಪ ಕೇಳಿ ಬಂದಿದೆ. ಇದೀಗ ಸೈಯದ್ ಹಾಗೂ ತಾಯಿ ಮಗು ಬಿಟ್ಟು ಯುವತಿಯಿಂದ ಪರಾರಿಯಾಗಿದ್ದಾರೆ.








