ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ಮೇಲೆ ಚಿರತೆ ಒಂದು ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ಬಾಲಕನ ಮೇಲೆ ಚಿರತೆ ದಾಳಿ ಮಾಡಿರುವ ಆರೋಪ ಕೇಳಿ ಬಂದಿದೆ.
ಚನ್ನಪಟ್ಟಣ ತಾಲೂಕಿನ ಬುವವಳ್ಳಿಯ ಶ್ರೇಯಸ್ ಎಂಬ ಬಾಲಕನ ಮೇಲೆ ಚಿರತೆ ದಾಳಿ ಮಾಡಿದೆ. ಪೊನ್ನಾಚಿ ಕ್ರಾಸ್ ಬಳಿ ಏಕಾಏಕಿ ಬಾಲಕ ಶ್ರೇಯಸ್ ಮೇಲೆ ಚಿರತೆ ದಾಳಿ ಮಾಡಿದೆ. ಬಾಲಕ ಶ್ರೇಯಸ್ ಕಿವಿಗೆ ತರಚಿತ ಗಾಯದ ಗುರುತು ಪತ್ತೆಯಾಗಿದೆ ಡ್ರೋನ್ ಬಳಸಿ ಅರಣ್ಯ ಸಿಬ್ಬಂದಿಗಳು ಸುತ್ತಮುತ್ತಲು ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವುದೇ ಚರಿತೆ ಪತ್ತೆ ಆಗಿಲ್ಲ ಎಂದು ಡಿಸಿಎಫ್ ಭಾಸ್ಕರ್ ತಿಳಿಸಿದ್ದಾರೆ.








