ಮೈಸೂರು : ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಲಾರಿ ಹರಿದು ಬೈಕ್ನಲ್ಲಿ ಇದ್ದ ಇಬ್ಬರೂ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಇದೀಗ ವರದಿಯಾಗಿದೆ.
ನಂಜನಗೂಡಿನ ಹಣಮನ ಪುರ ಗೇಟುವಳಿ ಒಂದು ಅಪಘಾತ ಸಂಭವಿಸಿದ್ದು, ಚಂದ್ರು (38) ಶೀಲ (35) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಚುಂಚನಹಳ್ಳಿ ಕಡೆಗೆ ತೆರಳುವಾಗ ಗೊಬ್ಬರ ತುಂಬಿದ ಲಾರಿ ಡಿಕ್ಕಿ ಹೊಡೆದಾಗ ಲಾರಿ ಬೈಕ್ ಮೇಲೆ ಹರಿದು ಸ್ಥಳದಲ್ಲೇ ಇಬ್ಬರು ಸಾವನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಘು ಸಿಪಿಐ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ಮಾಡಿದರು.








