ಬೆಂಗಳೂರು : ಬೆಂಗಳೂರಿನಲ್ಲಿ ಕಾನ್ಫಿಡೆಂಟ್ ಚೇರ್ಮನ್ ಹಾಗೂ ಉದ್ಯಮಿ ಸೀರಿಯಲ್ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ಹೂಡಿಕೆದಾರರಿಗೆ ಹಣ ಕೊಡಲಾಗದೆ ರಾಯ್ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು SIT ತನಿಖೆಯಲ್ಲಿ ತಿಳಿದು ಬಂದಿದೆ.
ಸಿಜೆ ರಾಯ್ ಆತ್ಮಹತ್ಯೆ ಬಳಿಕ ರಾಜ್ಯ ಸರ್ಕಾರ SIT ಗೆ ತನಿಖೆ ವಹಿಸಿದ್ದು, ತನಿಖೆ ವೇಳೆ ರಾಯ್ ಅವರ ಡೈರಿ ಪತ್ತೆಯಾಗಿದೆ. ಅದರಲ್ಲಿ ಹಲವಾರು ವಿಚಾರಗಳನ್ನು ರಾಯ್ ಉಲ್ಲೇಖಿಸಿದ್ದರು. ಅಲ್ಲದೆ ಮರಣೋತ್ತರ ಪರೀಕ್ಷೆಯ ವೇಳೆ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ರಾಯ್ ಬಳಲುತ್ತಿದ್ದರು ಎಂದು ವರದಿಯಲ್ಲಿ ತಿಳಿದು ಬಂದಿದೆ.
ಇದೀಗ SIT ಅಧಿಕಾರಿಗಳು ತನಿಖೆ ನಡೆಸಿದ ವೇಳೆ ಹೂಡಿಕೆದಾರರಿಗೆ ರಾಯ್ ಹಣ ಹಿಂತಿರುಗಿಸಿದೆ ಇದುದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.








