ದಾವಣಗೆರೆ : ಆಸ್ತಿಗಾಗಿ ಕಲಹ ಉಂಟಾಗಿ ತಮ್ಮನೊಬ್ಬ ಅಣ್ಣನನ್ನೇ ಬೀಕರವಾಗಿ ಕೊಲೆ ಮಾಡಿದ್ದಾನೆ. ಮಾರಕಾಸ್ತ್ರಗಳಿಂದ ಕೊಚ್ಚಿ ಸಿ.ಕೆ ನೀಲಪ್ಪ (62) ಎಂಬುವವರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಗ್ರಾಮದಲ್ಲಿ ನಡೆದಿದೆ.
ಜಮೀನು ಒತ್ತುವರಿ ವಿಚಾರವಾಗಿ ಸಹೋದರರ ನಡುವೆ ಗಲಾಟೆಯಾಗಿದೆ ಜಗಳ ವಿಕೋಪಕ್ಕೆ ತಿರುಗಿ ನೀಲಪ್ಪನನ್ನ ತಮ್ಮ ಚಂದ್ರಪ್ಪ ಕೊಲೆ ಮಾಡಿದ್ದಾನೆ. ಚಂದ್ರಪ್ಪ ಹಾಗೂ ಆತನ ಕುಟುಂಬ ಸದಸ್ಯರಿಂದ ಈ ಒಂದು ಕೊಲೆ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ. ಕೇವಲ ಚಂದ್ರಪ್ಪನನ್ನು ಮಾತ್ರ ಪೊಲೀಸರು ಆರೋಪಿ ಮಾಡಿದ್ದು, ಚಂದ್ರಪ್ಪ ಕುಟುಂಬ ಸದಸ್ಯರನ್ನೆಲ್ಲಾ ಆರೋಪಿಗಳಾಗಿ ಮಾಡುವಂತೆ ಆಗ್ರಹಿಸಲಾಗಿದೆ ಮಾಯ








