ಗದಗ : ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಉತ್ಖನ ಬೆಳೆ ಇದುವರೆಗೂ ಹಲವಾರು ಪುರಾತನ ವಸ್ತುಗಳು ಶಿಲೆಗಳು ಪತ್ತೆಯಾಗಿದ್ದು ಇದೀಗ ರಾಜ್ಯ ಸರ್ಕಾರ ಚಿನ್ನ ಮತ್ತು ನಿಧಿ ಪತ್ತೆಗಾಗಿ ಹೆಲಿಕ್ಯಾಪ್ಟರ್ ಮೂಲಕ ಶೋಧಕ್ಕೆ ಮುಂದಾಗಿದೆ.
ಹೌದು ಕಳೆದ 15 ದಿನಗಳಿಂದ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳು ಬಿಡು ಬಿಟ್ಟು ನಿರಂತರವಾಗಿ ಚಿನ್ನ ನಿಧಿ ಶೋಧ ಕಾರ್ಯಕ್ಕೆ ತೊಡಗಿದೆ ಈ ವೇಳೆ ಗ್ರಾಮದಲ್ಲಿ ಹಲವಾರು ಪುರಾತನ ಕಾಲದ ವಸ್ತುಗಳು ಶಿಲೆಗಳು, ಈಶ್ವರ ದೇವಸ್ಥಾನ ಸೇರಿದಂತೆ ಕೆತ್ತನೆಗಳು ಸಹ ಪತ್ತೆಯಾಗಿವೆ. ಇದೀಗ ಸರ್ಕಾರ ಹೆಲಿಕ್ಯಾಪ್ಟರ್ ಮುಖಾಂತರ ಚಿನ್ನ, ನಿಧಿ ಪತ್ತೆಗೆ ಮುಂದಾಗಿದ್ದು ಗ್ರಾಮಸ್ಥರು ಹೆಲಿಕ್ಯಾಪ್ಟರ್ ನೋಡಲು ಮುಗಿಬಿದ್ದಿದ್ದಾರೆ.








