ನವದೆಹಲಿ: ಆದಾಯ ತೆರಿಗೆ ಪಾವತಿಸಲು ಅವಧಿ ವಿಸ್ತರಣೆ ಮಾಡಲಾಗಿದೆ. ಮಾರ್ಚ್.31ರವರೆಗೆ ಐಟಿಆರ್ ಪಾವತಿಗೆ ಗಡುವನ್ನು ವಿಸ್ತರಿಸಿರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.
ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಶೇ.2ರಷ್ಟು ಟಿಸಿಎಸ್ ಕಡಿತಗೊಳಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಇಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸಿ ಮಾತನಾಡಿದಂತ ಅವರು, ನಾರೀ ಶಕ್ತಿಗೆ ಹೆಚ್ಚಿನ ಆದ್ಯತೆಗಾಗಿ ಪಣ ತೊಡಲಾಗಿದೆ. ಏಪ್ರಿಲ್.1ರಿಂದಲೇ ಹೊಸ ಆದಾಯ ತೆರಿಗೆ ಜಾರಿಗೆ ಬರಲಿದೆ. ತೆರಿಗೆ ವಂಚಿಸುವವರಿಗೆ ಶಿಕ್ಷೆ ಬಗ್ಗೆ ಕೋರ್ಟ್ ತೀರ್ಮಾನಿಸಲಿದೆ. ಸಣ್ಣ ತೆರಿಗೆ ಅಪರಾಧಗಳಿಗೆ ಕೇವಲ ದಂಡಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಆದಾಯ ತೆರಿಗೆಯಲ್ಲಿ ಅಪರಾಧ ಮಾಡಿದ್ರೆ ಶಿಕ್ಷೆ ಇಲ್ಲ ದಂಡವೆಂದು ತಿಳಿಸಿದರು.
ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಗ್ ಶಾಕ್: ಶೇ.100ರಷ್ಟು ಹೆಚ್ಚು ದಂಡ
ಕೇಂದ್ರ ಸರ್ಕಾರದಿಂದ ಆದಾಯ ತೆರಿಗೆ ಪಾವತಿಗೆ ಮಹತ್ವದ ಕ್ರಮ ವಹಿಸಲಾಗಿದೆ. ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಗ್ ಶಾಕ್ ಎನ್ನುವಂತೆ ಇನ್ನುಂದೆ ಶೇ.100ರಷ್ಟು ಹೆಚ್ಚು ದಂಡ ವಿಧಿಸಲು ನಿರ್ಧರಿಸಲಾಗಿದೆ ಎಂಬುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಇಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸಿ ಮಾತನಾಡಿದಂತ ಅವರು, ತಹೊಸ ತೆರಿಗೆ ಕಾನೂನು ಜುಲೈ 31ರವರೆಗೆ ವಿಸ್ತರಣೆ ಮಾಡಲಾಗುತ್ತಿದೆ. ಏಪ್ರಿಲ್.1ರಿಂದ ಹೊಸ ತೆರಿಗೆ ಕಾನೂನು ಜಾರಿಯಾಗಲಿದೆ. ತೆರಿಗೆ ಪಾವತಿಸದವರು ಅಪರಾಧಿಗಳೆಂದು ಪರಿಗಣಿಸಲಾಗುತ್ತದೆ ಎಂದರು.
ಪ್ರವಾಸೋದ್ಯಮವನ್ನು ಉತ್ತೇಜಿಸಲು 15 ಪುರಾತತ್ವ ಸ್ಥಳಗಳನ್ನು ಅಭಿವೃದ್ಧಿ: ಹಣಕಾಸು ಸಚಿವೆ ಸೀತಾರಾಮನ್
ಪ್ರವಾಸೋದ್ಯಮವನ್ನು ಉತ್ತೇಜಿಸಲು 15 ಪುರಾತತ್ವ ಸ್ಥಳಗಳನ್ನು ರೋಮಾಂಚಕ, ಅನುಭವ-ಚಾಲಿತ ಸಾಂಸ್ಕೃತಿಕ ತಾಣಗಳಾಗಿ ಅಭಿವೃದ್ಧಿಪಡಿಸುವ ಪ್ರಸ್ತಾಪವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು.
ಏಪ್ರಿಲ್ 1 ರಿಂದ ನೂತನ ‘IT’ ಕಾಯ್ದೆ ಜಾರಿ : ನಿರ್ಮಲಾ ಸೀತಾರಾಮನ್ | Union Budget 2026
2026 ನೇ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದರು. 9ನೇ ಬಾರಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದು ರವಿದಾಸ್ ಅವರ ಜನ್ಮ ದಿನಾಚರಣೆ ಹಾಗೂ ಮಾಘ ಪೂರ್ಣಿಮೆ ದಿನ ಬಜೆಟ್ ಮಂಡಿಸುತ್ತಿದ್ದೇನೆ ಎಂದು ನಿರ್ಮಲ ಸೀತಾರಾಮನ್ ಬಜೆಟ್ ಭಾಷಣದಲ್ಲಿ ತಿಳಿಸಿದರು. ಈ ವೇಳೆ ಏಪ್ರಿಲ್ 1 ರಿಂದ ನೂತನ ಐಟಿ ಕಾಯ್ದೆ ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದರು.
ವಿದೇಶಿ ವಿನಿಮಯ ಕಾನೂನು ಪರಿಷ್ಕರಣೆಯ ನಿರ್ಧಾರದಿಂದ ವಿದೇಶಿ ಹೂಡಿಕೆದಾರರಿಗೆ ಅನುಕೂಲವಾಗಲಿದ್ದು ಭಾರತದಲ್ಲಿ ಹೂಡಿಕೆ ಮಾಡಲು ಅನುಕೂಲ ಆಗಲಿದೆ ಇದರಿಂದ ವಿದೇಶಿ ಹೂಡಿಕೆದಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು ಮಹಿಳಾ ಉದ್ಯಮಿಗಳಿಗೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ ಧನ ನೀಡಲಾಗುತ್ತದೆ.
ಆಯುರ್ವೇದದ ಪ್ರಾಡಕ್ಟ್ ರಫ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು ಮೂರು ಆಯುರ್ವೇದ ಸಂಸ್ಥೆಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಪೂರ್ವದ ರಾಜ್ಯಗಳಲ್ಲಿ ಆಯುರ್ವೇದ ಸಂಸ್ಥೆ ಮಾಡಲಾಗುತ್ತಿದ್ದು 5 ವೈದ್ಯಕೀಯ ಕೇಂದ್ರ ಸ್ಥಾಪನೆಗೆ ಬಜೆಟ್ ನಲ್ಲಿ ನಿರ್ಮಲ ಸೀತಾರಾಮನ್ ಘೋಷಣೆ ಮಾಡಿದರು ಇದರಿಂದ ವೈದ್ಯಕೀಯ ಪ್ರವಾಸೋದ್ಯಮಕ್ಕೆ ಅನುಕೂಲ ಆಗಲಿದೆ ಹಾಗಾಗಿ ಆಯುರ್ವೇದ ಕೇಂದ್ರಗಳನ್ನು ಸ್ಥಾಪನೆಗೆ ಬಜೆಟ್ ನಲ್ಲಿ ಅನುದಾನ ಘೋಷಿಸಲಾಯಿತು .
ಹೊಸದಾಗಿ 20 ರಾಷ್ಟ್ರೀಯ ಜಲಮಾರ್ಗ ನಿರ್ಮಾಣ ಯೋಜನೆ ನಿರ್ಮಾಣ ಗುರಿ ಹೊಂದಿದ್ದು ಮುಂದಿನ ವರ್ಷಗಳಲ್ಲಿ 20 ಜಲಮಾರ್ಗದ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ನಿರ್ಮಲ ಸೀತಾರಾಮನ್ ಘೋಷಣೆ ಮಾಡಿದರು.ಹೈ ಸ್ಪೀಡ್ ರೈಲ್ವೆ ಕಾಲಿಡಾರ್ ಅನ್ನು ನಿರ್ಮಲ ಸೀತಾರಾಮನ್ ಘೋಷಣೆ ಮಾಡಿದರು. ಪ್ರಮುಖ ಏಳು ನಗರಗಳನ್ನು ಜೋಡಿಸಲು ಹೈ ಸ್ಪೀಡ್ ರೈಲ್ವೆ ಯೋಜನೆ ಘೋಷಿಸಿದ್ದು ಮುಂಬೈ ಟು ಪುಣೆ, ಪುಣೆ ಟು ಹೈದರಾಬಾದ್, ಹೈದರಾಬಾದ್ ಟು ಬೆಂಗಳೂರು, ಹೈದರಾಬಾದ್ ಟು ಚೆನ್ನೈ, ಚೆನ್ನೈ ಟು ಬೆಂಗಳೂರು, ದೆಲ್ಲಿ ಟು ವಾರಣಾಸಿ, ವಾರಣಾಸಿ ಟು ಸಿಲಿಗುರಿ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಅನ್ನು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.






