Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೂನ್​ 15ರಿಂದ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ

ರಾಜ್ಯದಲ್ಲೊಂದು ಮನಕಲಕುವ ಘಟನೆ: ದ್ವಿತೀಯ ಪಿಯುಸಿಯಲ್ಲಿ 4ನೇ ರ್‍ಯಾಂಕ್ ವಿಜೇತೆ ಅಭಿಜ್ಞಾ ಭಟ್ ಅನಾರೋಗ್ಯದಿಂದ ನಿಧನ

ಯೋಗೇಶ್ ಗೌಡ ಕೊಲೆ ಕೇಸ್ : ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಜೂ.18ಕ್ಕೆ ನಿಗದಿಪಡಿಸಿದ ಹೈಕೋರ್ಟ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲೊಂದು ಮನಕಲಕುವ ಘಟನೆ: ದ್ವಿತೀಯ ಪಿಯುಸಿಯಲ್ಲಿ 4ನೇ ರ್‍ಯಾಂಕ್ ವಿಜೇತೆ ಅಭಿಜ್ಞಾ ಭಟ್ ಅನಾರೋಗ್ಯದಿಂದ ನಿಧನ
KARNATAKA

ರಾಜ್ಯದಲ್ಲೊಂದು ಮನಕಲಕುವ ಘಟನೆ: ದ್ವಿತೀಯ ಪಿಯುಸಿಯಲ್ಲಿ 4ನೇ ರ್‍ಯಾಂಕ್ ವಿಜೇತೆ ಅಭಿಜ್ಞಾ ಭಟ್ ಅನಾರೋಗ್ಯದಿಂದ ನಿಧನ

By ವಸಂತ ಬಿ ಈಶ್ವರಗೆರೆ

ದಕ್ಷಿಣ ಕನ್ನಡ: ಇತ್ತೀಚೆಗೆ ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 596 ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದು ಸಾಧನೆ ಮಾಡಿದ್ದ ಸುಳ್ಯದ ಪ್ರತಿಭಾವಂತ ವಿದ್ಯಾರ್ಥಿನಿ ಅಭಿಜ್ಞಾ ಭಟ್ (19) ಅವರು ಅನಾರೋಗ್ಯದಿಂದ ಬುಧವಾರ (ಜೂನ್ 10) ನಿಧನರಾಗಿದ್ದಾರೆ. ಸಾಧನೆಯ ಶಿಖರ ಏರಬೇಕಿದ್ದ ಹಸನ್ಮುಖಿ ಯುವತಿಯ ಅಕಾಲಿಕ ಅಗಲಿಕೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಶಿಕ್ಷಕರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.

ಮೃತ ಅಭಿಜ್ಞಾ ಭಟ್ ಅವರು ಸುಳ್ಯದ ಹೆಸರಾಂತ ಕಿವಿ, ಮೂಗು ಮತ್ತು ಗಂಟಲು (ENT) ತಜ್ಞ ವೈದ್ಯರಾದ ಡಾ. ರವಿಶಂಕರ್ ಅವರ ಹಿರಿಯ ಪುತ್ರಿಯಾಗಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದ ಸಾವು: ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಭಿಜ್ಞಾ ಭಟ್ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಅವರ ಆರೋಗ್ಯದಲ್ಲಿ ದಿಡೀರ್ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ಖಚಿತಪಡಿಸಿವೆ.

ತಾಲೂಕಿಗೆ ಪ್ರಥಮ, ರಾಜ್ಯಕ್ಕೆ 4ನೇ ರ್‍ಯಾಂಕ್: ಸುಳ್ಯದ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ (PCMB) ವಿದ್ಯಾರ್ಥಿನಿಯಾಗಿದ್ದ ಅಭಿಜ್ಞಾ ಭಟ್ ಅವರು ಓದಿನಲ್ಲಿ ಸದಾ ಮುಂಚೂಣಿಯಲ್ಲಿದ್ದರು. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದಾಗ ಅವರು 595 ಅಂಕ ಗಳಿಸಿದ್ದರು. ಆದರೆ ಹಿಂದಿ ವಿಷಯದ ಮರು ಮೌಲ್ಯಮಾಪನಕ್ಕೆ (Revaluation) ಅರ್ಜಿ ಸಲ್ಲಿಸಿದ ಬಳಿಕ ಅವರಿಗೆ ಹೆಚ್ಚುವರಿಯಾಗಿ ಒಂದು ಅಂಕ ಲಭಿಸಿತ್ತು.

ಇದರಿಂದಾಗಿ ಹಿಂದಿಯಲ್ಲಿ 99 ಅಂಕಗಳೊಂದಿಗೆ ಅವರ ಒಟ್ಟು ಅಂಕ 596ಕ್ಕೆ ಏರಿತು. ಈ ಮೂಲಕ ಅವರು ಸುಳ್ಯ ತಾಲೂಕಿಗೆ ಪ್ರಥಮ ಹಾಗೂ ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಗಳಿಸಿ ಸುಳ್ಯ ತಾಲೂಕ ಕೀರ್ತಿ ಹೆಚ್ಚಿಸಿದ್ದರು. ಅವರು ಭೌತಶಾಸ್ತ್ರ (Physics), ಗಣಿತ (Mathematics), ರಸಾಯನಶಾಸ್ತ್ರ (Chemistry) ಹಾಗೂ ಜೀವಶಾಸ್ತ್ರ (Biology) ಹೀಗೆ ನಾಲ್ಕೂ ಪ್ರಮುಖ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆಯುವ ಮೂಲಕ ಅದ್ಭುತ ಸಾಧನೆ ಮಾಡಿದ್ದರು. ಕೇವಲ ಪಿಯುಸಿ ಮಾತ್ರವಲ್ಲದೆ ಜೆಇಇ ಮೈನ್ಸ್ (JEE Mains) ಪರೀಕ್ಷೆಯಲ್ಲೂ ಶೇ. 94.29 ರಷ್ಟು ಅತ್ಯುತ್ತಮ ಅಂಕ ಗಳಿಸಿದ್ದರು.

ಕಂಬನಿ ಮಿಡಿದ ಸುಳ್ಯ: ತಮ್ಮ ಶ್ರಮ, ಅಪಾರ ಪ್ರತಿಭೆ ಹಾಗೂ ಶಿಸ್ತಿನ ಮೂಲಕ ಶಿಕ್ಷಕರು ಮತ್ತು ಸಹಪಾಠಿಗಳ ನೆಚ್ಚಿನ ವಿದ್ಯಾರ್ಥಿನಿಯಾಗಿದ್ದ ಅಭಿಜ್ಞಾ ಅವರ ಸಾಧನೆಗೆ ಇಡೀ ತಾಲೂಕಿನ ಜನತೆ ಹೆಮ್ಮೆ ಪಟ್ಟಿದ್ದರು. ಇತ್ತೀಚೆಗಷ್ಟೇ ರಾಜ್ಯ ಮಟ್ಟದ ರ್‍ಯಾಂಕ್ ಪಡೆದು ದೊಡ್ಡ ಭವಿಷ್ಯದ ಕನಸು ಕಂಡಿದ್ದ ಕುವರಿ ಇಷ್ಟು ಬೇಗ ಇಹಲೋಕ ತ್ಯಜಿಸಿರುವುದು ಅತ್ಯಂತ ನೋವಿನ ಸಂಗತಿ ಎಂದು ಸುಳ್ಯ ಭಾಗದ ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ಜೂನ್​ 15ರಿಂದ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ

2 Mins Read

ಯೋಗೇಶ್ ಗೌಡ ಕೊಲೆ ಕೇಸ್ : ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಜೂ.18ಕ್ಕೆ ನಿಗದಿಪಡಿಸಿದ ಹೈಕೋರ್ಟ್!

2 Mins Read

BIG NEWS: ಸರ್ಕಾರಿ ನೌಕರನ ವೈಯಕ್ತಿಕ ಆಸ್ತಿ ವಿವರ ‘RTI’ ಅಡಿ ನೀಡಲಾಗದು: ಹೈಕೋರ್ಟ್ ಮಹತ್ವದ ತೀರ್ಪು

2 Mins Read
Recent News

ಜೂನ್​ 15ರಿಂದ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ

ರಾಜ್ಯದಲ್ಲೊಂದು ಮನಕಲಕುವ ಘಟನೆ: ದ್ವಿತೀಯ ಪಿಯುಸಿಯಲ್ಲಿ 4ನೇ ರ್‍ಯಾಂಕ್ ವಿಜೇತೆ ಅಭಿಜ್ಞಾ ಭಟ್ ಅನಾರೋಗ್ಯದಿಂದ ನಿಧನ

ಯೋಗೇಶ್ ಗೌಡ ಕೊಲೆ ಕೇಸ್ : ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಜೂ.18ಕ್ಕೆ ನಿಗದಿಪಡಿಸಿದ ಹೈಕೋರ್ಟ್!

BIG NEWS: ಸರ್ಕಾರಿ ನೌಕರನ ವೈಯಕ್ತಿಕ ಆಸ್ತಿ ವಿವರ ‘RTI’ ಅಡಿ ನೀಡಲಾಗದು: ಹೈಕೋರ್ಟ್ ಮಹತ್ವದ ತೀರ್ಪು

State News
KARNATAKA

ಜೂನ್​ 15ರಿಂದ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ

By ಸುರೇಶ್‌ KARNATAKA 2 Mins Read

ಶಿವಮೊಗ್ಗ: ಮಳೆಗಾಲದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ರಸ್ತೆ ಕುಸಿತ ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯ ಆಗುಂಬೆ ಘಾಟಿ…

ರಾಜ್ಯದಲ್ಲೊಂದು ಮನಕಲಕುವ ಘಟನೆ: ದ್ವಿತೀಯ ಪಿಯುಸಿಯಲ್ಲಿ 4ನೇ ರ್‍ಯಾಂಕ್ ವಿಜೇತೆ ಅಭಿಜ್ಞಾ ಭಟ್ ಅನಾರೋಗ್ಯದಿಂದ ನಿಧನ

ಯೋಗೇಶ್ ಗೌಡ ಕೊಲೆ ಕೇಸ್ : ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಜೂ.18ಕ್ಕೆ ನಿಗದಿಪಡಿಸಿದ ಹೈಕೋರ್ಟ್!

BIG NEWS: ಸರ್ಕಾರಿ ನೌಕರನ ವೈಯಕ್ತಿಕ ಆಸ್ತಿ ವಿವರ ‘RTI’ ಅಡಿ ನೀಡಲಾಗದು: ಹೈಕೋರ್ಟ್ ಮಹತ್ವದ ತೀರ್ಪು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.