ನವದೆಹಲಿ : ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಂಪುಟ ಸಭೆ ಆರಂಭವಾಗಿದೆ. ಇನ್ನೇನು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಇವತ್ತು ಮಂಡಿಸುವ ಬಜೆಟ್ಗೆ ಅನುಮೋದನೆ ಪಡೆಯುವ ಪ್ರಕ್ರಿಯೆ ಆರಂಭವಾಗಲಿದೆ.
ಈಗಾಗಲೇ ರಾಷ್ಟ್ರಪತಿ ಅವರ ಬಳಿ ಹೋಗಿ ಬಜೆಟ್ ಮಂಡನೆಗೆ ಒಂದು ಅವಕಾಶ ಕೇಳಿ ಬಂದಿದ್ದು, ಅದೇ ರೀತಿ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ. ಹಿಂದಿನಿಂದಲೂ ಈ ಒಂದು ಸಂಪ್ರದಾಯ ನಡೆದುಕೊಂಡು ಬಂದಿದ್ದು ಇದೀಗ ನಿರ್ಮಲ ಸೀತಾರಾಮನವರು ಸಂಪುಟ ಸಭೆಯಲ್ಲಿ ಬಜೆಟ್ ಮಂಡನೆಗೆ ಕೆಲವೇ ಕ್ಷಣಗಳಲ್ಲಿ ಅನುಮೋದನೆ ಪಡೆಯಲಿದ್ದಾರೆ.








