Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೈಟಿಯ ಐತಿಹಾಸಿಕ ಕೋಟೆಯಲ್ಲಿ ಭೀಕರ ತುಳಿತ: 30ಕ್ಕೂ ಹೆಚ್ಚು ಸಾವು; ಸಂಭ್ರಮದ ಕೂಟದಲ್ಲಿ ಎದುರಾಯ್ತು ಮೃತ್ಯು!

12/04/2026 8:49 AM

ರೈತರಿಗೆ ವರದಾನ ‘ಕಿಸಾನ್ ಕ್ರೆಡಿಟ್ ಕಾರ್ಡ್’: ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ.!

12/04/2026 8:39 AM

BREAKING:ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಹಿಂದೂಗಳ ಮನೆ, ಅಂಗಡಿಗಳ ಮೇಲೆ ಗುಂಪು ದಾಳಿ!

12/04/2026 8:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಸಾಗರದ ಕೆ.ಜಿ ಕೊಪ್ಪ ಗ್ರಾಮದ ರಸ್ತೆ ಸಮಸ್ಯೆ ನಿವಾರಿಸುವಂತೆ ತಹಶೀಲ್ದಾರರಿಗೆ ಒತ್ತಾಯ
KARNATAKA

ಶಿವಮೊಗ್ಗ: ಸಾಗರದ ಕೆ.ಜಿ ಕೊಪ್ಪ ಗ್ರಾಮದ ರಸ್ತೆ ಸಮಸ್ಯೆ ನಿವಾರಿಸುವಂತೆ ತಹಶೀಲ್ದಾರರಿಗೆ ಒತ್ತಾಯ

By kannadanewsnow0928/01/2026 12:26 PM

ಶಿವಮೊಗ್ಗ: ಇಪ್ಪತ್ತಕ್ಕೂ ಹೆಚ್ಚು ಮನೆಗಳಿವೆ. ಆದರೆ ಓಡಾಟಕ್ಕೆ ರಸ್ತೆ ಇಲ್ಲ. ಹೀಗಾಗಿ ಸಾಗರ ತಾಲ್ಲೂಕಿನ ಕೆ.ಜಿ ಕೊಪ್ಪ ಗ್ರಾಮಸ್ಥರು ತಹಶೀಲ್ದಾರರ ಕಚೇರಿ ಬಳಿಯಲ್ಲಿ ಪ್ರತಿಭಟನೆ ನಡೆಸಿ, ಸಮಸ್ಯೆ ಬಗೆ ಹರಿಸುವಂತೆ ಒತ್ತಾಯಿಸಲಾಯಿತು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸೈದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆ.ಜಿ ಕೊಪ್ಪ ಗ್ರಾಮದ ಸುಮಾರು 20 ಮನೆಗಳಿಗೆ ಓಡಾಡಲು ರಸ್ತೆ ಇದೆ. ಆದರೆ ಆ ರಸ್ತೆಯನ್ನು ಮಹಾದೇವಪ್ಪ, ರಾಮ ಎಂಬುವರು ಒತ್ತುವರಿ ಮಾಡಿಕೊಂಡು ರಸ್ತೆ ಬಂದ್ ಮಾಡಿದ್ದಾರೆ. ಹೀಗಾಗಿ ಈಗ ಕೆ.ಜಿ ಕೊಪ್ಪ ಗ್ರಾಮಸ್ಥರ ಓಡಾಟಕ್ಕೆ ರಸ್ತೆಯೇ ಇಲ್ಲದಂತೆ ಆಗಿದೆ.

ಈ ಹಿನ್ನೆಲೆಯಲ್ಲಿ ಸಾಗರದ ತಹಶೀಲ್ದಾರರ ಕಚೇರಿಯ ಮುಂದೆ ಕೆ.ಜಿ ಕೊಪ್ಪ ಗ್ರಾಮಸ್ಥರು, ಕೆಂಚಗೊಂಡನಕೊಪ್ಪ ಗ್ರಾಮ ಸುಧಾರಣಾ ಸಮಿತಿಯವರು ಕರ್ನಾಟಕ ರಕ್ಷಣಾ ವೇದಿಕೆಯ ಮನೋಜ್ ಕುಗ್ವೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ತಹಶೀಲ್ದಾರರಿಗೆ ರಸ್ತೆ ಸಮಸ್ಯೆ ಬಗೆಹರಿಸಲು ಮನವಿ ಮಾಡಲಾಯಿತು.

ಈ ವೇಳೆ ಮಾತನಾಡಿದ ಕರವೇ ಸಾಗರ ತಾಲ್ಲೂಕು ಅಧ್ಯಕ್ಷ ಮನೋಜ್ ಕುಗ್ವೆ ಅವರು, ಕೆ.ಜಿ ಕೊಪ್ಪ ಗ್ರಾಮದ 20 ಮನೆಗಳಿಗೆ ಹೋಗೋದಕ್ಕೆ ರಸ್ತೆ ಇಲ್ಲ. ಇದಕ್ಕೆ ಕಾರಣ ಇಬ್ಬರು ರಸ್ತೆಯನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ರೈತರು ಬೆಳೆದ ಬೆಳೆ ಸಾಗಿಸಲು,  ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯೋದಕ್ಕೆ ಅಡ್ಡಿ ಉಂಟಾಗಿದೆ. ಶಾಲಾ ಮಕ್ಕಳು ಶಾಲೆಗೆ ತೆರಳೋದಕ್ಕೂ ಸಾಧ್ಯ ಆಗುತ್ತಿಲ್ಲ. ಈ ಸಮಸ್ಯೆ ಪರಿಹರಿಸುವಂತೆ ತಹಶೀಲ್ದಾರರಿಗೆ ಒತ್ತಾಯಿಸಿದರು.

ಕೆಂಚಗೊಂಡನಕೊಪ್ಪ ಗ್ರಾಮ ಸುಧಾರಣಾ ಸಮಿತಿಯ ಉಪಾಧ್ಯಕ್ಷ ಜಯರಾಮ್ ಮಾತನಾಡಿ, ಕೆ.ಜಿ ಕೊಪ್ಪ ಗ್ರಾಮದಲ್ಲಿ ಹೊಸದಾಗಿ ಮನೆಯನ್ನು ನಿರ್ಮಿಸಿಕೊಂಡ ಮನೆಗಳಿಗೆ ರಸ್ತೆ ಇಲ್ಲದೆ ಸಮಸ್ಯೆ ಆಗಿದೆ. ಸಾರ್ವಜನಿಕ ಓಡಾಟಕ್ಕೆ ತೊಂದರೆ ಆಗಿದೆ. ಹೀಗಾಗಿ ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿ ರಸ್ತೆ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.

ಕೆಜಿ ಕೊಪ್ಪದ ಗ್ರಾಮಸ್ಥರಾದಂತ ರಘು ಅವರು ಈ ಹಿಂದೆಯೂ ತಹಶೀಲ್ದಾರರಿಗೆ ರಸ್ತೆ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಸಮಸ್ಯೆ ಪರಿಹಾರ ಆಗಿಲ್ಲ. ಈ ಕೂಡಲೇ ಕೆಜಿ ಕೊಪ್ಪ ಗ್ರಾಮಕ್ಕೆ ತಹಶೀಲ್ದಾರರು ಭೇಟಿ ನೀಡಿ, ರಸ್ತೆ ಒತ್ತುವರಿ ಮಾಡಿಕೊಂಡಿದ್ದನ್ನು ಬಿಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಈ ಪ್ರತಿಭಟನೆ ವೇಳೆ ಕೆಂಚಗೊಂಡನಕೊಪ್ಪ ಗ್ರಾಮ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಬಿ.ಪದ್ಮನಾಭ, ಸದಸ್ಯರಾದ ರಾಮಪ್ಪ, ಪರಮೇಶ್ವರಪ್ಪ, ಗಣಪತಿ. ಬಿ, ಜಟ್ಯಪ್ಪ ಕಡೇಮನೆ, ವೀರಪ್ಪ ಹೊಂಬಾಳೆ, ರಾಮಪ್ಪ ಜಿಗಲಿ, ಜಯರಾಮ, ಚೌಡಪ್ಪ, ಈಶ್ವರ, ಕೆರಿಸ್ವಾಮಿ, ಶ್ರೀಧರ, ಈಶ್ವರಪ್ಪ, ಬಾಲಚಂದ್ರ ಶೆಟ್ಟಿ, ಅಣ್ಣಪ್ಪ, ಸಿದ್ದಪ್ಪ, ಪಾಂಡು ಸುಬ್ರಹ್ಮಣ್ಯ ಶೇಟ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

Share. Facebook Twitter LinkedIn WhatsApp Email

Related Posts

ರೈತರಿಗೆ ವರದಾನ ‘ಕಿಸಾನ್ ಕ್ರೆಡಿಟ್ ಕಾರ್ಡ್’: ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ.!

12/04/2026 8:39 AM2 Mins Read

ಗ್ಯಾಸ್ ಸಿಲಿಂಡರ್‌ ಗೆ ಗುಡ್ ಬೈ : ಹೊಸದಾಗಿ ಬಂದಿದೆ ನೀರಿನಿಂದ ಉರಿಯುವ ಹೈಡ್ರೋಜನ್ ಸ್ಟವ್.!

12/04/2026 8:28 AM2 Mins Read

BIG NEWS: ಕರ್ನಾಟಕದಲ್ಲಿ 5.11 ಲಕ್ಷ ಕೋಟಿ ರೂ. ಹೂಡಿಕೆ : 7.16 ಲಕ್ಷ ಉದ್ಯೋಗ ಸೃಷ್ಟಿ.!

12/04/2026 8:20 AM2 Mins Read
Recent News

ಹೈಟಿಯ ಐತಿಹಾಸಿಕ ಕೋಟೆಯಲ್ಲಿ ಭೀಕರ ತುಳಿತ: 30ಕ್ಕೂ ಹೆಚ್ಚು ಸಾವು; ಸಂಭ್ರಮದ ಕೂಟದಲ್ಲಿ ಎದುರಾಯ್ತು ಮೃತ್ಯು!

12/04/2026 8:49 AM

ರೈತರಿಗೆ ವರದಾನ ‘ಕಿಸಾನ್ ಕ್ರೆಡಿಟ್ ಕಾರ್ಡ್’: ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ.!

12/04/2026 8:39 AM

BREAKING:ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಹಿಂದೂಗಳ ಮನೆ, ಅಂಗಡಿಗಳ ಮೇಲೆ ಗುಂಪು ದಾಳಿ!

12/04/2026 8:36 AM

ಗ್ಯಾಸ್ ಸಿಲಿಂಡರ್‌ ಗೆ ಗುಡ್ ಬೈ : ಹೊಸದಾಗಿ ಬಂದಿದೆ ನೀರಿನಿಂದ ಉರಿಯುವ ಹೈಡ್ರೋಜನ್ ಸ್ಟವ್.!

12/04/2026 8:28 AM
State News
KARNATAKA

ರೈತರಿಗೆ ವರದಾನ ‘ಕಿಸಾನ್ ಕ್ರೆಡಿಟ್ ಕಾರ್ಡ್’: ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ.!

By kannadanewsnow5712/04/2026 8:39 AM KARNATAKA 2 Mins Read

ಬೆಂಗಳೂರು: ದೇಶದ ಬೆನ್ನೆಲುಬಾದ ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ಸಕಾಲದಲ್ಲಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ‘ಕಿಸಾನ್ ಕ್ರೆಡಿಟ್…

ಗ್ಯಾಸ್ ಸಿಲಿಂಡರ್‌ ಗೆ ಗುಡ್ ಬೈ : ಹೊಸದಾಗಿ ಬಂದಿದೆ ನೀರಿನಿಂದ ಉರಿಯುವ ಹೈಡ್ರೋಜನ್ ಸ್ಟವ್.!

12/04/2026 8:28 AM

BIG NEWS: ಕರ್ನಾಟಕದಲ್ಲಿ 5.11 ಲಕ್ಷ ಕೋಟಿ ರೂ. ಹೂಡಿಕೆ : 7.16 ಲಕ್ಷ ಉದ್ಯೋಗ ಸೃಷ್ಟಿ.!

12/04/2026 8:20 AM

Weather Update : 12 ಜಿಲ್ಲೆಗಳಲ್ಲಿ ತಾಪಮಾನ ದಿಢೀರ್ ಹೆಚ್ಚಳ : ರಾಜ್ಯದಲ್ಲಿ ಮುಂದುವರಿದ ಬಿಸಿಗಾಳಿ ಅಬ್ಬರ

12/04/2026 8:04 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.