ಬೆಂಗಳೂರು: ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಧಮ್ಕಿ ಹಾಕಿ, ನಿಂದಿಸಿದ್ದರು. ಈ ಆಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಅಮಾನತಿಗೆ ಕೈ ಪಕ್ಷವು ಅಮಾನತಿಗೆ ಶಿಫಾರಸ್ಸು ಮಾಡಿದೆ.
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಕೈ ಮುಖಂಡ ನಿಂದನೆ ಪ್ರಕರಣದಲ್ಲಿ ರಾಜೀವ್ ಗೌಡ ಅವರನ್ನು ಅಮಾನತುಗೊಳಿಸುವಂತೆ ಕಾರ್ಯಾಧ್ಯಕ್ಷ ಚಂದ್ರಶೇಖರ್ ಶಿಫಾರಸ್ಸು ಮಾಡಿದ್ದಾರೆ. ಆರೋಪಿ ರಾಜೀವ್ ಗೌಡಗೆ ಈ ಹಿಂದೆ ಕೆಪಿಸಿಸಿಯಿಂದ ಶೋಕಾಸ್ ನೋಟಿಸ್ ನೀಡಲಾಗಿತ್ತು.
ಕೆಪಿಸಿಸಿ ನೀಡಿದ್ದಂತ ಶೋಕಾಸ್ ನೋಟಿಸ್ ಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಉತ್ತರ ನೀಡದೇ ತಲೆಮರೆಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ರಾಜೀವ್ ಗೌಡ ಅವರನ್ನು ಅಮಾನತಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಶಿಫಾರಸ್ಸು ಮಾಡಿದ್ದಾರೆ.
ಈ ಕುರಿತು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡುವಂತೆ ಶಿಸ್ತು ಸಮಿತಿಯ ಅಧ್ಯಕ್ಷರಿಗೆ ಕಾರ್ಯಾಧ್ಯಕ್ಷ ಚಂದ್ರಶೇಖರ್ ಪತ್ರ ಬರೆದಿದ್ದಾರೆ. ಶಿಸ್ತು ಸಮಿತಿಯ ಅಧ್ಯಕ್ಷರಾದಂತ ರೆಹಮಾನ್ ಖಾನ್ ಅವರಿಗೆ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ ಪತ್ರ ಬರೆದು ಕೋರಿದ್ದಾರೆ.
ಚಿಕ್ಕಮಗಳೂರಲ್ಲಿ ಬಾರ್ ಮಾಲೀಕನನ್ನು ಮತ್ತೊಂದು ಬಾರ್ ಸಿಬ್ಬಂದಿಯಿಂದಲೇ ಭೀಕರವಾಗಿ ಮರ್ಡರ್
BREAKING: ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರದ ‘ನಿರ್ಮಾಣ್-2 ತಂತ್ರಾಂಶ’ ಸ್ಥಗಿತ








