ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗ್ಲೆಗುಡ್ಡದಲ್ಲಿ ಸಿಕ್ಕಂತ 7 ಅಸ್ಥಿಪಂಜರಗಳ್ನು ಎಸ್ಐಟಿ ಅಧಿಕಾರಿಗಳು ಎಫ್ ಎಸ್ ಎಲ್ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದ ಸಮೀಪದಲ್ಲಿನ ಬಂಗ್ಲೆಗುಡ್ಡ ಅರಣ್ಯದಲ್ಲಿ ಎಸ್ಐಟಿ ಕಾರ್ಯಾಚರಣೆಯ ಸಂದರ್ಭದಲ್ಲಿ ಮಾನವನ 7 ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಸೆಪ್ಟೆಂಬರ್.17, 2025ರಂದು 5, ಸೆ.18ರಂದು 2 ಸೇರಿದಂತೆ ಏಳು ಅಸ್ಥಿಪಂಜರಗಳು ಬಂಗ್ಲೆಗುಡ್ಡ ಅರಣ್ಯದಲ್ಲಿ ಎಸ್ಐಟಿಗೆ ಪತ್ತೆಯಾಗಿದ್ದವು.
ಬಂಗ್ಲೆಗುಡ್ಡದ ಅರಣ್ಯದಲ್ಲಿ ಆತ್ಮಹತ್ಯೆ ರೀತಿಯಲ್ಲಿ ಪತ್ತೆಯಾದಂತ ಅಸ್ಥಿ ಪಂಚರಗಳನ್ನು ಬೆಳ್ತಂಗಡಿ ಎಸ್ಐಟಿ ಕಚೇರಿಯಿಂದ ಬೆಂಗಳೂರಿನ ಮಡಿವಾಳದಲ್ಲಿರುವಂತ ಎಫ್ ಎಸ್ ಎಲ್ ಕಚೇರಿಗೆ ರವಾನಿಸಲಾಗಿದೆ. ಈ ಅಸ್ಥಿ ಪಂಚರಗಳನ್ನು ಪರೀಕ್ಷೆ ನಡೆಸಿದ ನಂತ್ರ ಬರುವಂತ ವರದಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.








